Advertisement

Norwegian ಲೇಖಕ ಜಾನ್ ಫೋಸ್ಸೆಯವರಿಗೆ ಸಾಹಿತ್ಯ ನೊಬೆಲ್ ಪ್ರಶಸ್ತಿ

05:36 PM Oct 05, 2023 | Team Udayavani |

ಸ್ಟಾಕ್‌ಹೋಂ: ಈ ಸಾಲಿನ ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ನಾರ್ವೇಜಿಯನ್ ಲೇಖಕ ಜಾನ್ ಫೋಸ್ಸೆ ಅವರಿಗೆ ನೀಡಲಾಗುತ್ತಿದೆ. ಸ್ವೀಡಿಷ್ ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲ್ಮ್ ಗುರುವಾರ ಸ್ಟಾಕ್‌ಹೋಮ್‌ನಲ್ಲಿ ಬಹುಮಾನವನ್ನು ಘೋಷಿಸಿದ್ದಾರೆ.

Advertisement

ನೊಬೆಲ್ ಪ್ರಶಸ್ತಿಗಳು 11 ಮಿಲಿಯನ್ ಸ್ವೀಡಿಷ್ ಕ್ರೋನರ್ (1 ಮಿಲಿಯನ್ ಡಾಲರ್) ನಗದು, 18-ಕ್ಯಾರೆಟ್ ಚಿನ್ನದ ಪದಕ ಮತ್ತು ಪ್ರಶಸ್ತಿ ಪ್ರಮಾಣ ಪಾತ್ರವನ್ನೊಳಗೊಂಡಿರುತ್ತದೆ. ನೊಬೆಲ್ ಪ್ರಶಸ್ತಿ ಸೃಷ್ಟಿಕರ್ತ, ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರು ಬಿಟ್ಟುಹೋದ ಉಯಿಲಿನಿಂದ ಪ್ರಶಸ್ತಿ ನೀಡಲಾಗುತ್ತದೆ. ಡಿಸೆಂಬರ್‌ನಲ್ಲಿ ನಡೆಯುವ ಸಮಾರಂಭಗಳಲ್ಲಿ ವಿಜೇತರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

64 ರ ಹರೆಯದ ಜಾನ್ ಒಲಾವ್ ಫೋಸ್ಸೆ ಲೇಖಕ ಮತ್ತು ನಾಟಕಕಾರ. ಇವರ ನವ್ಯ ಸಾಹಿತ್ಯದ ನಾಟಕಗಳು ಧ್ವನಿಯಿಲ್ಲದವರಿಗೆ ಧ್ವನಿ ನೀಡುತ್ತವೆ. ಹೆನ್ರಿಕ್ ಇಬ್ಸೆನ್ ನಂತರ ಅವರು ಹೆಚ್ಚು ಪ್ರದರ್ಶನ ಕಂಡ ನಾರ್ವೇಜಿಯನ್ ನಾಟಕಕಾರ. ಇವರನ್ನು ಸಾಮಾನ್ಯವಾಗಿ ‘ನವ ಇಬ್ಸೆನ್” ಎಂದು ಉಲ್ಲೇಖಿಸಲಾಗುತ್ತದೆ, 19 ನೇ ಶತಮಾನದಲ್ಲಿ ಇಬ್ಸೆನ್ ಸ್ಥಾಪಿಸಿದ ನಾಟಕೀಯ ಸಂಪ್ರದಾಯದ ಆಧುನಿಕ ಮುಂದುವರಿಕೆಯನ್ನು ಪ್ರತಿನಿಧಿಸಲು ಫೋಸ್ಸೆ ಅವರ ಕೃತಿಗಳು ಗುರುತಿಸಲ್ಪಟ್ಟಿವೆ.

Advertisement

Udayavani is now on Telegram. Click here to join our channel and stay updated with the latest news.

Next