Advertisement

Norway ಕಾಯ್ದೆ ಸಡಿಲ: 18ನೇ ವಾರಕ್ಕೂ ಗರ್ಭಪಾತಕ್ಕೆ ಸಮ್ಮತಿ

01:40 AM Aug 24, 2024 | Team Udayavani |

ಕೂಪನ್‌ಹೆಗನ್‌: 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಾರ್ವೆ ದೇಶವು ತನ್ನ ಗರ್ಭಪಾತಕ್ಕೆ ಸಂಬಂ­ಧಿಸಿದ ಕಾನೂನು ಸಡಿಲುಗೊಳಿಸಲು ಮುಂದಾ­ಗಿದೆ. ಗರ್ಭ ಧರಿಸಿದ 5 ತಿಂಗಳಲ್ಲೂ (18 ವಾರ) ಗರ್ಭಪಾ­ತಕ್ಕೆ ಅವಕಾಶ ಕಲ್ಪಿಸುವುದಕ್ಕೆ ಕಾನೂನು ಮಾನ್ಯತೆ ನೀಡಲಾಗುತ್ತಿದೆ.

Advertisement

ಸದ್ಯಕ್ಕೆ ನಾರ್ವೆಯಲ್ಲಿ 3 ತಿಂಗಳವ­ರೆಗೆ ಮಾತ್ರವೇ ಗರ್ಭಪಾತಕ್ಕೆ ಅವಕಾಶವಿದೆ. ಆದರೆ ಬಹುತೇಕ ಮಹಿಳೆಯರು ಈ ಮಿತಿಯನ್ನು 12ನೇ ವಾರದ ಆಚೆಗೂ ವಿಸ್ತರಿಸಬೇಕು ಎಂದು ಆಗ್ರಹಿಸಿ­ದ್ದರು. ಈ ಕಾಲದ ಅಗತ್ಯಕ್ಕೆ ಅನುಗುಣವಾಗಿ ಕಾನೂ­ನಿನಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ. ಅರ್ಜಿಗಳನ್ನು ಯಾರೂ ತಿರಸ್ಕ­ರಿಸುತ್ತಿಲ್ಲ ಎಂದು ನಾರ್ವೆ ಆರೋಗ್ಯ ಸಚಿವ ಹೇಳಿ­ದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಯುರೋಪ್‌ನ ಹಲವು ರಾಷ್ಟ್ರಗಳ ಗರ್ಭಪಾತಕ್ಕೆ ಸಂಬಂಧಿಸಿದ ಕಾನೂನುಗಳನ್ನು ಸಡಿಲಗೊಳಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next