Advertisement

ವಾಕರಸಾ ಹುಬ್ಬಳ್ಳಿ ಗ್ರಾಮೀಣ ವಿಭಾಗಕ್ಕೆ 31 ಕೋಟಿ ರೂ. ನಷ್ಟ

11:30 AM Jul 05, 2020 | Suhan S |

ಹುಬ್ಬಳ್ಳಿ: ಪ್ರಯಾಣಿಕರು ಬಸ್‌ಗಳಲ್ಲಿ ಸಂಚಾರ ಮಾಡಲು ಹಿಂದೇಟು ಹಾಕುತ್ತಿರುವ ಕಾರಣದಿಂದ ಇಲ್ಲಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮೀಣ ವಿಭಾಗಕ್ಕೆ ಮೇ ಮತ್ತು ಜೂನ್‌ ತಿಂಗಳು ಸೇರಿ 31 ಕೋಟಿ ರೂ. ಆದಾಯ ನಷ್ಟವಾಗಿದೆ.

Advertisement

ಲಾಕ್‌ಡೌನ್‌ ಭಾಗಶಃ ತೆರವುಗೊಳಿಸಿದ ನಂತರ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರಕ್ಕೆ ಸರಕಾರ ಅವಕಾಶ ನೀಡಿತ್ತು. ಹೀಗಾಗಿ ಮೇ 19ರಿಂದ ಬಸ್‌ಗಳ ಕಾರ್ಯಾಚರಣೆ ಆರಂಭವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಜನರು ಬಸ್‌ ಸಂಚಾರಕ್ಕೆ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಮೇ ತಿಂಗಳಲ್ಲಿ 17 ಕೋಟಿ ರೂ. ಹಾಗೂ ಜೂನ್‌ ತಿಂಗಳಲ್ಲಿ 14 ಕೋಟಿ ರೂ. ಆದಾಯ ನಷ್ಟವಾಗಿದೆ.ಹುಬ್ಬಳ್ಳಿ ಗ್ರಾಮೀಣ ವಿಭಾಗದ ನಾಲ್ಕು ಘಟಕಗಳಲ್ಲಿ 419 ಅನುಸೂಚಿಗಳಲ್ಲಿ ಪ್ರತಿದಿನ 1.90 ಲಕ್ಷ ಕಿಲೊಮೀಟರ್‌ಗಳಷ್ಟು ಬಸ್‌ಗಳು ಕ್ರಮಿಸುತ್ತಿದ್ದವು. ಇದರಿಂದ ಪ್ರತಿನಿತ್ಯ ಬೊಕ್ಕಸಕ್ಕೆ ನಿತ್ಯ 50 ರಿಂದ 55 ಲಕ್ಷ ರೂ. ಸಾರಿಗೆ ಆದಾಯ ಸಂಗ್ರಹಣೆ ಆಗುತ್ತಿತ್ತು. ಬಸ್‌ಗಳಿಗೆ ಅನುಮತಿ ನೀಡಿದ ನಂತರ ಸರಕಾರದ ಮಾರ್ಗಸೂಚಿಗಳ ಪ್ರಕಾರ ಸುರಕ್ಷಿತ ಕ್ರಮಗಳನ್ನು ಕ್ರಮಗೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಮೇ ತಿಂಗಳಾಂತ್ಯಕ್ಕೆ 59 ಲಕ್ಷ ರೂ. ಮಾತ್ರ ಆದಾಯ ಬಂದಿತ್ತು. ಪ್ರಯಾಣಿಕರ ಕೊರತೆಯಿಂದಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಲು ಸಾಧ್ಯವಾಗಲಿಲ್ಲ. ನಿತ್ಯ 22 ರಿಂದ 23 ಸಾವಿರ ಜನರು ಮಾತ್ರ ಪ್ರಯಾಣಿಸುತ್ತಿದ್ದು 11ರಿಂದ 13 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿದಿನ 1.30ರಿಂದ 1.45 ಲಕ್ಷ ಜನರು ಪ್ರಯಾಣಿಸಿದ್ದು 50 ರಿಂದ 55 ಲಕ್ಷ ರೂ .ಸಾರಿಗೆ ಆದಾಯ ಸಂಗ್ರಹವಾಗಿತ್ತು. ಹೀಗಾಗಿ ಆದಾಯ ಸಂಗ್ರಹಣೆಯಲ್ಲಿ ಶೇ.80 ಖೋತಾ ಆಗಿದ್ದು, ಜೂನ್‌ ತಿಂಗಳಾಂತ್ಯಕ್ಕೆ 3.55 ಕೋಟಿ ರೂ. ಮಾತ್ರ ಸಂಗ್ರಹವಾಗಿದ್ದು 14 ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌.ರಾಮನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next