Advertisement

ಈಶಾನ್ಯ ರಾಜ್ಯಗಳು ಅಷ್ಟಲಕ್ಷ್ಮೀಯರು: ಪ್ರಧಾನಿ ಮೋದಿ 

11:10 PM Feb 24, 2023 | Team Udayavani |

ದಿಮಾಪುರ್‌: ಕಾಂಗ್ರೆಸ್‌ ಈಶಾನ್ಯ ರಾಜ್ಯಗಳನ್ನು ಎಟಿಎಂ ಆಗಿ ಬಳಸಿ ಕೊಂಡಿತ್ತು. ಆದರೆ ಬಿಜೆಪಿಯು ಈ ಪ್ರದೇಶದ ಎಂಟು ರಾಜ್ಯಗಳನ್ನು ಅಷ್ಟ ಲಕ್ಷ್ಮೀಯರು ಎಂದು ಪರಿಗಣಿಸಿದೆ. ಇಲ್ಲಿನ ಶಾಂತಿ ಮತ್ತು ಅಭಿವೃದ್ಧಿಗಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ನಾಗಾಲ್ಯಾಂಡ್‌ನ‌ ದಿಮಾಪುರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಶುಕ್ರ ವಾರ ಮಾತನಾಡಿದ ಅವರು, “ನಾಗಾ ಲ್ಯಾಂಡ್‌ನ‌ಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಎನ್‌ಡಿಎ ಸರ್ಕಾರ ಶ್ರಮಿಸುತ್ತಿದೆ. ಹೀಗಾಗಿ 1958ರ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ ರದ್ದು ಗೊಳಿ ಸಲಾಗಿದೆ,’ ಎಂದರು.

“ಕಾಂಗ್ರೆಸ್‌ ಆಳ್ವಿಕೆಯಲ್ಲಿ ನಾಗಾ ಲ್ಯಾಂಡ್‌ನ‌ಲ್ಲಿ ರಾಜಕೀಯ ಅಸ್ಥಿರತೆ ಇತ್ತು. ಕಾಂಗ್ರೆಸ್‌ ದೆಹಲಿಯಿಂದಲೇ ರಿಮೋಟ್‌ ಕಂಟ್ರೋಲ್‌ನಿಂದ ಈಶಾನ್ಯ ರಾಜ್ಯಗಳನ್ನು ಆಳುತ್ತಿತ್ತು. “ಮತ ಪಡೆದು ಮರೆತುಬಿಡಿ’ ಎಂಬುದು ಕಾಂಗ್ರೆಸ್‌ ಮತ್ತು ಅದರ ಪಾಲುದಾರರ ನೀತಿಯಾ ಗಿದೆ,’ ಎಂದು ದೂರಿದರು. ಇನ್ನೊಂದೆಡೆ, ಮೇಘಾಲ ಯದ ಶಿಲ್ಲಾಂಗ್‌ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, “”ಮೋದಿ ತೇರಿ ಕಬ್ರ ಖುದೇಗಿ’ (ಮೋದಿ, ನಿಮಗೆ ಸಮಾಧಿ ತೋಡಲಾ ಗುತ್ತದೆ) ಎಂದು ಮೇಘಾಲಯ ಕಾಂಗ್ರೆಸ್‌ ನಾಯಕರು ಘೋಷಿಸಿದ್ದಾರೆ. ಆದರೆ ದೇಶದ ಜನರು “ಮೋದಿ ತೇರಾ ಕಮಲ್‌ ಖೀಲೇಗಾ'(ಮೋದಿ, ನಿಮ್ಮ ಕಮಲವು ಅರಳಲಿದೆ) ಎಂದು ಹೇಳುತ್ತಿದ್ದಾರೆ,’ ಎಂದರು.

ಫೆ.27ರಂದು ಮೇಘಾಲಯ ಮತ್ತು ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾ.2ರಂದು ಫ‌ಲಿ ತಾಂಶ ಹೊರಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next