ನವದೆಹಲಿ:ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್ ಯು ಹಳೆ ವಿದ್ಯಾರ್ಥಿ ಉಮರ್ ಖಾಲೀದ್ ನನ್ನು ಗುರುವಾರ(ಅಕ್ಟೋಬರ್ 01, 2020) ದಿಲ್ಲಿ ಕ್ರೈ ಬ್ರಾಂಚ್ ಮತ್ತೆ ಬಂಧಿಸಿದ್ದು, ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ.
ಈ ಮೊದಲು ಉಮರ್ ಖಾಲೀದ್ ನನ್ನು ದೆಹಲಿ ಗಲಭೆ ಪ್ರಕರಣದಲ್ಲಿ ಕಾನೂನು ಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆಯಡಿಯಲ್ಲಿ ಬಂಧಿಸಿಲಾಗಿತ್ತು. ನಂತರ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ದೆಹಲಿಯ ಕಾರ್ಕಾಡೂಮಾ ಕೋರ್ಟ್ ಸೆಪ್ಟೆಂಬರ್ 24ರಂದು ದೆಹಲಿ ಗಲಭೆ ಆರೋಪಿ ಉಮರ್ ಖಾಲೀದ್ ನನ್ನು ಅಕ್ಟೋಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ಖಾಲೀದ್ ನನ್ನು ಸೆಪ್ಟೆಂಬರ್ 13ರಂದು ಬಂಧಿಸಿದ್ದರು.
ಆದರೆ ದೆಹಲಿ ಪೊಲೀಸರು ಖಾಲೀದ್ ನನ್ನು ತಮ್ಮ ವಶಕ್ಕೆ ನೀಡುವಂತೆ ಮತ್ತೆ ಮನವಿ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ಫೆಬ್ರುವರಿಯಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಗಲಭೆಗೆ ಉಮರ್ ಮತ್ತು ಇಬ್ಬರು ಸೇರಿ ಪೂರ್ವ ನಿಯೋಜಿತವಾಗಿ ಸಿದ್ಧತೆ ನಡೆಸಿದ್ದರು ಎಂದು ಎಫ್ ಐಆರ್ ನಲ್ಲಿ ದಿಲ್ಲಿ ಪೊಲೀಸರು ಆರೋಪಿಸಿದ್ದರು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಗುಡ್ ನ್ಯೂಸ್: ಭಾರೀ ಗಾತ್ರದ ಮೀನು ಹಿಡಿದು ಒಂದೇ ದಿನದಲ್ಲಿ ಶ್ರೀಮಂತೆಯಾದ ಬಡ ಮಹಿಳೆ!
ಉಮರ್ ಖಾಲೀದ್ ವಿರುದ್ಧ ದೇಶದ್ರೋಹ, ಕೊಲೆ, ಕೊಲೆ ಯತ್ನ, ವಿವಿಧ ಧರ್ಮಗಳ ನಡುವೆ ಶತ್ರುತ್ವ ಮತ್ತು ಗಲಭೆ ನಡೆಸಿದ ಆರೋಪವನ್ನು ಹೊರಿಸಲಾಗಿತ್ತು ಎಂದು ವರದಿ ವಿವರಿಸಿದೆ.