Advertisement

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

10:42 PM Apr 23, 2024 | Team Udayavani |

ನಾರ್ಥಾಂಪ್ಟನ್‌: ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿಯೂ ಮೂಲೆಗುಂಪಾದ ಕರ್ನಾಟಕದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಕರುಣ್‌ ನಾಯರ್‌, ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿ ಸುದ್ದಿಯಾಗಿದ್ದಾರೆ.

Advertisement

ಕೌಂಟಿ ಚಾಂಪಿಯನ್‌ಶಿಪ್‌ ಡಿವಿಷನ್‌-2 ಚಾಂಪಿಯನ್‌ಶಿಪ್‌ನಲ್ಲಿ ನಾರ್ಥಾಂಪ್ಟನ್‌ಶೈರ್‌ ಕೌಂಟಿಯನ್ನು ಪ್ರತಿನಿಧಿಸುತ್ತಿರುವ ನಾಯರ್‌, ಗ್ಲಾಮರ್ಗನ್‌ ವಿರುದ್ಧ ಅಜೇಯ 202 ರನ್‌ ಹೊಡೆದು ಫಾರ್ಮ್ ಪ್ರದರ್ಶಿಸಿದ್ದಾರೆ.

ಕರುಣ್‌ ನಾಯರ್‌ 4ನೇ ಕ್ರಮಾಂಕದಲ್ಲಿ ಆಡಲಿಳಿದಿದ್ದರು. 253 ಎಸೆತಗಳನ್ನು ಎದುರಿಸಿದ ಅವರು 21 ಬೌಂಡರಿ, 2 ಸಿಕ್ಸರ್‌ ಬಾರಿಸಿದರು. ಸೈದ್‌ ಜೆಯಿಬ್‌ ಜತೆಗೂಡಿ 6ನೇ ವಿಕೆಟಿಗೆ 212 ರನ್‌ ಜತೆಯಾಟದಲ್ಲಿ ಭಾಗಿಯಾದರು. ಜೆಯಿಬ್‌ 100 ರನ್‌ ಹೊಡೆದರು. ಇವರ ಸಾಹಸದಿಂದ ನಾರ್ಥಾಂಪ್ಟನ್‌ಶೈರ್‌ 6ಕ್ಕೆ 605 ರನ್‌ ಬಾರಿಸಿ ಡಿಕ್ಲೇರ್‌ ಮಾಡಿತು. ಇದರಿಂದ ತಂಡಕ್ಕೆ 334 ರನ್‌ ಮುನ್ನಡೆ ಲಭಿಸಿತು.

Advertisement

Udayavani is now on Telegram. Click here to join our channel and stay updated with the latest news.

Next