Advertisement
ಶುಕ್ರವಾರದಿಂದೀಚೆಗೆ ಉತ್ತರ ಕೊರಿಯಾವು ಸಮುದ್ರ ಗಡಿಯಲ್ಲಿ ತನ್ನನ್ನು ಗುರಿಯಾಗಿಸಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಲೇ ಬಂದಿದ್ದು ರವಿವಾರವೂ ಇಂಥದ್ದೇ ದಾಳಿ ನಡೆಸಿದೆ ಎಂದು ದಕ್ಷಿಣ ಕೊರಿಯಾ ಆರೋ ಪಿಸಿದೆ. ಶನಿವಾರದಂದು ಉತ್ತರ ಕೊರಿಯಾ ಫಿರಂಗಿ ದಾಳಿಗಳನ್ನು ನಡೆಸಿದೆ ಎಂಬ ದಕ್ಷಿಣ ಕೊರಿಯಾದ ಆರೋಪವನ್ನು ತಳ್ಳಿಹಾಕಿರುವ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಸಹೋದರಿ ಕಿಮ್ ಯೊ ಜಾಂಗ್, ತಮ್ಮ ದೇಶ ದಾಳಿ ಎಸಗಿಲ್ಲ ಎಂದಿದ್ದಾರೆ. ವಿವಾದಿತ ಪಶ್ಚಿಮ ಸಮುದ್ರ ಗಡಿಯಲ್ಲಿ ಶುಕ್ರವಾರದಂದು 200ಕ್ಕೂ ಅಧಿಕ ಗುಂಡುಗಳನ್ನು ಹಾರಿಸುವ ಮೂಲಕ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದ್ದ ಉತ್ತರ ಕೊರಿಯಾ ಶನಿವಾರ ಕೂಡ ಉತ್ತರ ಕೊರಿಯಾ 60 ಸುತ್ತು ಗುಂಡು ಹಾರಾಟ ನಡೆಸಿರುವುದಾಗಿ ದಕ್ಷಿಣ ಕೊರಿಯಾ ಆರೋಪಿಸಿತ್ತು. Advertisement
North Korea ಗಡಿಯಲ್ಲಿ ಈಗ ಪ್ರಕ್ಷುಬ್ಧ ಸ್ಥಿತಿ; ಗುಂಡಿನ ದಾಳಿ
12:42 AM Jan 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.