Advertisement

ಸರ್ವನಾಶದ ಉತ್ತರ; ಗಡಿಯಲ್ಲಿ ಮಿಲಿಟರಿ ಬಲಪ್ರದರ್ಶಿಸಿದ ಅಮೆರಿಕ

06:00 AM Sep 25, 2017 | Team Udayavani |

ನ್ಯೂಯಾರ್ಕ್‌: ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಿನ ಜಗಳ ಸರ್ವನಾಶದ ಹಂತಕ್ಕೆ ಹೋಗಿದ್ದು, ಯಾವುದೇ ಕ್ಷಣದಲ್ಲಿ ಬೇಕಾದರೂ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಪುಷ್ಠಿಯಾಗಿ ಉತ್ತರ ಕೊರಿಯಾದ ಗಡಿಯಲ್ಲಿ ಶಸ್ತ್ರಾಸ್ತ್ರ ತುಂಬಿದ ಅಮೆರಿಕದ ಯುದ್ಧ ವಿಮಾನಗಳು ಹಾರಾಟ ನಡೆಸಿವೆ.

Advertisement

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉತ್ತರ ಕೊರಿಯಾವನ್ನು ದೂಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಅದೇ ವೇದಿಕೆಯಿಂದ ತಿರುಗೇಟು ನೀಡಿರುವ ಉತ್ತರ ಕೊರಿಯಾದ ವಿದೇಶಾಂಗ ಸಚಿವ ರೀ ಯಾಂಗ್‌ ಹೋ, ನಮ್ಮ ರಾಕೆಟ್‌ ಅಮೆರಿಕಕ್ಕೆ ಬಂದರೆ ಸಂಪೂರ್ಣವಾಗಿ ನಾಶವಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಉತ್ತರಿಸಿರುವ ಡೊನಾಲ್ಡ್‌ ಟ್ರಂಪ್‌, ನಾವು ದಾಳಿ ಆರಂಭಿಸಿದರೆ ಉತ್ತರ ಕೊರಿಯಾ ಉಳಿಯುವುದೇ ಇಲ್ಲ. ಒಂದಂತೂ ಸತ್ಯ ಉತ್ತರ ಕೊರಿಯಾ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ನೇರವಾಗಿಯೇ ಸರ್ವನಾಶದ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್‌ ಸೂಸೈಡ್‌ ಮ್ಯಾನ್‌
ಶನಿವಾರ ತಡರಾತ್ರಿ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿದ್ದ ಉತ್ತರ ಕೊರಿಯಾ ಪ್ರತಿನಿಧಿ, ವಿದೇಶಾಂಗ ಸಚಿವ ರೀ ಯಾಂಗ್‌ ಹೋ, ಅಮೆರಿಕ ಹಾಗೂ ಟ್ರಂಪ್‌ ಅವರನ್ನು ಮಾನಸಿಕ ಅಸ್ವಸ್ಥರಿಗೆ ಹೋಲಿಸಿದ್ದರು. ಅಲ್ಲದೇ, “ಅಮೆರಿಕದ ಮೇಲಿನ ದಾಳಿಯನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ’ ಎಂದು ಶನಿವಾರ ರಾತ್ರಿ ಅಮೆರಿಕ ನೆಲದಲ್ಲಿಯೇ ನಿಂತು ಗುಡುಗಿದ್ದರು. ಕಿಮ್‌ ಅವರನ್ನು ರಾಕೆಟ್‌ ಮ್ಯಾನ್‌ ಎಂದು ಕರೆಯಲಿ ಪರ್ವಾಗಿಲ್ಲ, ಕಿಮ್‌ಗೆ ಹೋಲಿಕೆ ಮಾಡಿದರೆ ಟ್ರಂಪ್‌ ಅವರೇ ಸೂಸೈಡ್‌ ಮ್ಯಾನ್‌ ಎಂದಿದ್ದರು. ಜತೆಗೆ “ಕಿಮ್‌ ರಾಕೆಟ್‌’ ಅಮೆರಿಕದ ಮೇಲೆ ಬಂದರೆ ಸಂಪೂರ್ಣವಾಗಿ ನಾಶವಾಗುತ್ತದೆ. ಎಂಬ ಎಚ್ಚರಿಕೆ ನೀಡಿದ್ದರು.

ಇದಕ್ಕೆ ಟ್ವಿಟರ್‌ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಡೊನಾಲ್ಡ್‌ ಟ್ರಂಪ್‌, “”ಉತ್ತರ ಕೊರಿಯಾದ ವಿದೇಶಾಂಗ ಸಚಿವರು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅಮೆರಿಕದ ಬಗ್ಗೆ ಮಾತನಾಡುತ್ತಾರೆ. ಲಿಟಲ್‌ ರಾಕೆಟ್‌ ಮ್ಯಾನ್‌(ಕಿಮ್‌ ಜಾಂಗ್‌ ಉನ್‌)ನಂತೆ ತನ್ನ ದೇಶವನ್ನು ಪ್ರಶಂಸಿಸಿಕೊಳ್ಳುತ್ತಿದ್ದಾರೆ. ಒಂದಂತೂ ಸತ್ಯ, ಉತ್ತರ ಕೊರಿಯಾ ಹೆಚ್ಚು ಕಾಲ ಉಳಿದುಕೊಳ್ಳುವುದಿಲ್ಲ” ಎಂದಿದ್ದಾರೆ.

Advertisement

ಅಮೆರಿಕ ಶಕ್ತಿ ಪ್ರದರ್ಶನ:
ಟ್ರಂಪ್‌-ಕಿಮ್‌ ವಾಗ್ಯುದ್ಧ ಜೋರಾಗಿರುವ ನಡುವೆಯೇ, ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೋಡವೂ ಆವರಿಸತೊಡಗಿದೆ. ಉತ್ತರ ಕೊರಿಯಾ ಕರಾವಳಿಯಲ್ಲಿ ಅಮೆರಿಕ ಶಸ್ತ್ರಾಸ್ತ್ರ ಸಹಿತ ಯುದ್ಧ ವಿಮಾನಗಳನ್ನು ಹಾರಾಡಿಸುವ ಮೂಲಕ ಉತ್ತರ ಕೊರಿಯಾಕ್ಕೆ ಅಮೆರಿಕದ ಮಿಲಿಟರಿ ಪಡೆ ತನ್ನ ಸಾಮರ್ಥ್ಯ ಪ್ರದರ್ಶನ ಮಾಡಿದೆ. ನಮ್ಮನ್ನು ಗುರಿಯಾಗಿಸಿಕೊಂಡರೆ ತಾವೇನು ಎನ್ನುವುದನ್ನು ತೋರಿಸಬೇಕಾಗುತ್ತದೆ ಎಂದೂ ಹೇಳಿದ್ದಾಗಿ ಅಸೋಸಿಯೇಟೆಡ್‌ ಪ್ರಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಯುದ್ಧಕ್ಕೆ ನಿರ್ಣಯಿಸುವ ಮೊದಲಿನ ಪ್ರದರ್ಶನ ಇದಾಗಿದೆ. ಈ ಮೂಲಕ ಸ್ಪಷ್ಟ ಸಂದೇಶವನ್ನು ರವಾನಿಸಿದ್ದೇವೆ. ಪೂರ್ಣ ಪ್ರಮಾಣದ ಮಿಲಿಟರಿ ಪಡೆಯ ಸಾಮರ್ಥ್ಯ ಏನೆನ್ನುವುದನ್ನು ಅನಿವಾರ್ಯವಾದರೆ ತೋರಿಸುತ್ತೇವೆ.
– ದನಾ ವೈಟ್‌, ಅಮೆರಿಕ ರಕ್ಷಣಾ ಖಾತೆ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next