Advertisement

2024ರಲ್ಲಿ ಅಣ್ವಸ್ತ್ರಗಳ ಹೆಚ್ಚಳ, ಬೇಹು ಉಪಗ್ರಹ ಉಡಾವಣೆಗೆ ಕಿಮ್‌ ಪ್ರತಿಜ್ಞೆ

01:35 AM Jan 01, 2024 | Team Udayavani |

ಸಿಯೋಲ್‌: ಎದುರಾಳಿಗಳನ್ನು ಬಗ್ಗುಬಡಿಯಲು ದೇಶದ ಬಲ ಹೆಚ್ಚಿಸುವಂತಹ ಮೂರು ಬೇಹುಗಾರಿಕೆ ಉಪಗ್ರಹಗಳನ್ನು ಉಡಾವಣೆ ಮಾಡುವುದರ ಜತೆಗೆ ಅಣ್ವಸ್ತ್ರಗಳ ಉತ್ಪಾದನೆಯನ್ನು ಹೆಚ್ಚಿಸಿ, ಅತ್ಯಾಧುನಿಕ ಡ್ರೋನ್‌ಗಳನ್ನು 2024ರಲ್ಲಿ ಹೊಂದುವುದಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಪ್ರತಿಜ್ಞೆ ಮಾಡಿದ್ದಾರೆ.

Advertisement

ಹೊಸ ವರ್ಷಕ್ಕೆ ರಾಷ್ಟ್ರ ಹೇಗೆ ಸನ್ನದ್ಧವಾಗ ಬೇಕು ಎಂಬುದರ ಕುರಿತು ಆಡಳಿತಾರೂಢ ವರ್ಕರ್ಸ್‌ ಪಕ್ಷದ ಸಭೆಯನ್ನು ಕಿಮ್‌ ರವಿ ವಾರ ನಡೆಸಿದ್ದಾರೆ. ಈ ವೇಳೆ, ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳು ಉತ್ತರ ಕೊರಿಯಾದ ವಿರುದ್ಧ ಹೊಂದಿರುವ ವಿರೋಧಿ ನಿಲುವುಗಳನ್ನ ಹತ್ತಿಕ್ಕಲು ರಕ್ಷಣ ಕ್ಷೇತ್ರವನ್ನು ಬಲಗೊಳಿಸುವ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ, ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ರಾಷ್ಟ್ರದಲ್ಲಿ ಶಸ್ತ್ರಾಸ್ತ್ರಗಳ ಪರೀಕ್ಷೆ ತೀವ್ರಗೊಳಿ­ಸಲು ಕಿಮ್‌ ಕರೆ ನೀಡಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next