Advertisement

ಹೈಡ್ರೋಜನ್‌ ಬಾಂಬ್‌ ಪರೀಕ್ಷಿಸಿದ ಉತ್ತರ ಕೊರಿಯಾ

08:00 AM Sep 04, 2017 | Team Udayavani |

ಟೋಕಿಯೋ/ಹೊಸದಿಲ್ಲಿ: ಅನ್ಯ ರಾಷ್ಟ್ರಗಳ ಟೀಕೆ ಹಾಗೂ ಒತ್ತಡಗಳ ನಡುವೆಯೂ ಉತ್ತರ ಕೊರಿಯಾ ಆರನೇ ಬಾರಿಗೆ ಪರಮಾಣು ಪರೀಕ್ಷೆ ನಡೆಸಿದೆ. ರವಿವಾರ ನಡೆದಿರುವ ಪರೀಕ್ಷೆ ಹೈಡ್ರೋಜನ್‌ ಬಾಂಬ್‌ನದ್ದು ಎಂದು ಸ್ವತಃ ಉತ್ತರ ಕೊರಿಯಾ ಹೇಳಿಕೊಂಡಿದೆ. ಅಷ್ಟೇ ಅಲ್ಲ, ಇದುವರೆಗಿನ ಪರೀಕ್ಷೆಗಿಂಥ ಹೆಚ್ಚಿನ ಸಾಮರ್ಥ್ಯದ್ದಾಗಿದೆ ಎಂದು ಅಲ್ಲಿನ ಹವಾಮಾನ ಸಂಸ್ಥೆ ಹೇಳಿದೆ. ಪರೀಕ್ಷೆಯ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಹವಾಮಾನ ಸಂಸ್ಥೆ, ಹೈಡ್ರೋಜನ್‌ ಬಾಂಬ್‌ನ ಸ್ಫೋಟದ ತೀವ್ರತೆಯನ್ನಾಧರಿಸಿದಾಗ, ಈ ಪರೀಕ್ಷೆ ಸಾಕಷ್ಟು ಮಹತ್ವದ್ದು. ಬಾಂಬ್‌ ಅಂದಾ ಜು 50ರಿಂದ 60 ಕಿಲೋಟನ್‌ ಭಾರದ್ದಾಗಿತ್ತು. 

Advertisement

2016ರ ಸೆಪ್ಟೆಂಬರ್‌ನಲ್ಲಿ ನಡೆಸಲಾದ ಐದನೇ ಪರೀಕ್ಷೆಗಿಂತ  ಐದರಿಂದ ಆರು ಪಟ್ಟು ಹೆಚ್ಚಿನ ತೀವ್ರತೆ ಹೊಂದಿತ್ತು ಎಂದಿದೆ. ಉತ್ತರ ಕೊರಿಯಾ ನಡೆಸಿದ 6ನೇ ಪರಮಾಣು ಪರೀಕ್ಷೆ “ಸಂಪೂರ್ಣ ಯಶಸ್ವಿ’ ಎಂದು ಅಲ್ಲಿನ ಟಿವಿ ವಾಹಿ ಪ್ರಕಟಿಸಿದೆ. ಅಭೂತಪೂರ್ವ ಸಾಮರ್ಥ್ಯದ ಹಾಗೂ ಥರ್ಮೋನ್ಯೂಕ್ಲಿಯರ್‌ನ ಎರಡು ಪಟ್ಟು ಶಕ್ತಿ ಹೊಂದಿರುವ ಬಾಂಬ್‌ ಇದಾಗಿದೆ ಎಂದು ವರದಿ ಮಾಡಿದೆ. ಈ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷೆಗೂ ಮೊದಲು ಪಾಂಗ್‌ಯಾಂಗ್‌ನಿಂದ ಪರೀಕ್ಷಿಸಲ್ಪಟ್ಟಿದೆ ಎನ್ನಲಾಗಿದೆ.

ತೀವ್ರ ಖಂಡನೆ: ಉತ್ತರ ಕೊರಿಯಾದ ಈ ನಡೆಯನ್ನು ವಿಶ್ವಸಂಸ್ಥೆ, ಭಾರತ, ಜಪಾನ್‌, ಫ್ರಾನ್ಸ್‌ ದೇಶಗಳು ಖಂಡಿಸಿವೆ. ಉತ್ತರ ಕೊರಿಯಾದ ಹಿತದೃಷ್ಟಿಯಿಂದಲೇ ಇದು ಒಳಿತಲ್ಲ ಎಂದು ಅಭಿಪ್ರಾಯಪಟ್ಟಿವೆ. ಇದೊಂದು ಅನಾರೋಗ್ಯಕರವಾದ ಬೆಳವಣಿಗೆ ಎಂದು ಜಪಾನ್‌ ಪ್ರಧಾನಿ ಶಿಂಜೋ ಅಬೆ ಹೇಳಿದ್ದಾರೆ.

ಇರಾನ್‌ನಿಂದಲೂ ಪರೀಕ್ಷೆ
ಈ ನಡುವೆ ಇರಾನ್‌ ಕೂಡ ಸ್ವದೇಶೀಯವಾಗಿ ಅಭಿವೃದ್ಧಿಪಡಿಸಿದ ವಾಯು ರಕ್ಷಣಾ ವ್ಯವಸ್ಥೆಯನ್ನು ಪರೀಕ್ಷೆಗೆ ಒಳಪಡಿಸಿದೆ. ಅದು ರಷ್ಯಾ ಹೊಂದಿರುವ ಎಸ್‌-300 ವ್ಯವಸ್ಥೆಗೆ ಸರಿ ಸಮನಾಗಿದೆ ಎಂದು ಅಲ್ಲಿನ ಸರ್ಕಾರಿ ವಕ್ತಾರ  ಹೇಳಿದ್ದಾರೆ. ಅದರ ಮೂಲಕ ಕ್ಷಿಪಣಿ ಪರೀಕ್ಷೆಯನ್ನೂ ನಡೆಸಲಾಗಿದೆ. ಕ್ಷಿಪಣಿಗೆ “ಬವರ್‌’ ಎಂದು ಹೆಸರಿಸಲಾಗಿದ್ದು, 2018ರ ಮಾರ್ಚ್‌ಗೆ ಸೇನೆಯ ಉಪಯೋಗಕ್ಕೆ ಬರಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next