Advertisement

ದಕ್ಷಿಣ ಕೊರಿಯಾ ಗಡಿಯಲ್ಲಿ ಶೆಲ್‌ ದಾಳಿ ನಡೆಸಿದ ಉತ್ತರ ಕೊರಿಯಾ

06:04 PM Oct 19, 2022 | Team Udayavani |

ಸಿಯೋಲ್‌: ದಕ್ಷಿಣ ಕೊರಿಯಾವನ್ನು ಗುರಿಯಾಗಿಸಿಕೊಂಡು ಉತ್ತರ ಕೊರಿಯಾ ಬುಧವಾರ 100 ಶೆಲ್‌ ದಾಳಿ ನಡೆಸಿದೆ.

Advertisement

ದಕ್ಷಿಣ ಕೊರಿಯಾ ತನ್ನ ಗಡಿ ಭಾಗದಲ್ಲಿ ಸಮರಾಭ್ಯಾಸ ನಡೆಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಉತ್ತರ ಕೊರಿಯಾವು ಪಶ್ಚಿಮ ಕರಾವಳಿ ಭಾಗದಿಂದ 100 ಶೆಲ್‌ಗ‌ಳನ್ನು ಹಾಗೂ ಪೂರ್ವ ಕರಾವಳಿ ಭಾಗದಿಂದ 150 ಶೆಲ್‌ಗ‌ಳನ್ನು ಹಾರಿಸಿ ದಾಳಿ ನಡೆಸಿದೆ.

ಕಳೆದ ಶುಕ್ರವಾರ ಕೂಡ ಉತ್ತರ ಕೊರಿಯಾವು ದಕ್ಷಿಣ ಕೊರಿಯಾದ ಮೇಲೆ ನೂರಾರು ಶೆಲ್‌ಗ‌ಳ ದಾಳಿ ನಡೆಸಿತ್ತು. ಪರಸ್ಪರ ದಾಳಿ ನಡೆಸದೇ ಇರುವ ನಿಟ್ಟಿನಲ್ಲಿ ದಕ್ಷಿಣ ಮತ್ತು ಉತ್ತರ ಕೊರಿಯಾಗಳು 2018ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಅದರ ಹೊರತಾಗಿಯೂ ದಾಳಿಗಳು ಮುಂದುವರಿದಿವೆ.

Advertisement

Udayavani is now on Telegram. Click here to join our channel and stay updated with the latest news.

Next