Advertisement

ಅಣ್ವಸ್ತ್ರ ವಿವಾದ ಇತ್ಯರ್ಥಕ್ಕೆ ಸಿದ್ಧ: ದಕ್ಷಿಣ ಕೊರಿಯಾ 

09:14 AM Jan 11, 2018 | Team Udayavani |

ಸಿಯೋಲ್‌: ಚಳಿಗಾಲದ ಒಲಿಂಪಿಕ್ಸ್‌ಗೆ ಅಥ್ಲೀಟ್‌ಗಳನ್ನು ಕಳುಹಿಸುವ ನಿಟ್ಟಿನಲ್ಲಿ ಉತ್ತರ ಕೊರಿಯಾ ಜತೆ ಒಪ್ಪಂದ ಮಾಡಿಕೊಂಡಿರುವ ದಕ್ಷಿಣ ಕೊರಿಯಾ, ಇದೀಗ ಪರಮಾಣು ಕುರಿತಾದ ವಿವಾದವನ್ನೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಒಲವು ತೋರಿದೆ. ಆದರೆ, ಇದಕ್ಕೆ ಕೆಲವೊಂದು ಷರತ್ತುಗಳಿವೆ ಎಂದೂ ಹೇಳಿದೆ.

Advertisement

ಒಲಿಂಪಿಕ್ಸ್‌ ಒಪ್ಪಂದದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೇ-ಇನ್‌, “”ಪರಮಾಣು ವಿಚಾರವಾಗಿ ಉಂಟಾಗಿರುವ ಮನ ಸ್ತಾಪ ಶಮನಕ್ಕೆ ಉತ್ತರ ಕೊರಿಯಾದ ಸರ್ವಾ ಧಿ ಕಾ ರಿ ಕಿಮ್‌ ಜಾಂಗ್‌ ಉನ್‌ ಜತೆ ಚರ್ಚಿಸಲು ನಾವು ಸಿದ್ಧರಿದ್ದೇವೆ. ಯಾವುದೇ ಸಹಕಾರ ಹಾಗೂ ನಿಬಂಧನೆಗಳ ಬಗ್ಗೆ ಚರ್ಚಿಸಲೂ ನಾವು ಸಿದ್ಧರಿದ್ದೇವೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next