Advertisement

North Korea; ದಕ್ಷಿಣ ಕೊರಿಯ ಹಾಡು ಕೇಳಿದ ಯುವಕನ ಶಿರಚ್ಛೇದ!

01:28 AM Jul 01, 2024 | Team Udayavani |

ಸಿಯೋಲ್‌: ಕೆ-ಪಾಪ್‌ ಹಾಡು ಕೇಳಿದ ಅಪರಾಧಕ್ಕೆ ಉತ್ತರ ಕೊರಿಯಾದಲ್ಲಿ ಸಾರ್ವಜನಿಕವಾಗಿ 22 ವರ್ಷದ ಯುವಕನ ಶಿರಚ್ಛೇದ ಮಾಡದಲಾಗಿದೆ ಎಂದು ದಕ್ಷಿಣ ಕೊರಿಯಾದ ಏಕೀಕರಣ ಸಚಿವಾಲಯ ಬಿಡುಗಡೆಗೊಳಿಸಿದ ಮಾನವ ಹಕ್ಕುಗಳ ವರದಿಯಲ್ಲಿ ಹೇಳಿದೆ.

Advertisement

ವರದಿಯ ಪ್ರಕಾರ, ದಕ್ಷಿಣ ಹ್ವಾಂಗೇ ಪ್ರಾಂತದ ಯುವಕನೊಬ್ಬ 70 ಕೊರಿಯನ್‌ ಹಾಡುಗಳು, 3 ಸಿನೆಮಾ ನೋಡಿದ್ದು ಹಾಗೂ ಹಂಚಿಕೊಂಡಿದ್ದ ಕ್ಕಾಗಿ 2022ರಲ್ಲಿ, ಉತ್ತರ ಕೊರಿಯಾ ಆಡಳಿತ ಆತನ ಶಿರಚ್ಛೇದ ಮಾಡಿದೆ.

ಉತ್ತರ ಕೊರಿಯಾದಲ್ಲಿ 2020ರಲ್ಲಿ ಜಾರಿಗೆ ತರಲಾದ ಪ್ರತಿಗಾಮಿ ಸಿದ್ಧಾಂತ ಹಾಗೂ ಸಂಸ್ಕೃತಿ ಕಾನೂನನ್ನು ಯುವಕ ಉಲ್ಲಂ ಸಿದ್ದಾನೆ ಎಂದು ಈ ಶಿಕ್ಷೆ ನೀಡ ಲಾಗಿದೆ. ಈ ಕಾನೂನಿನ ಪ್ರಕಾರ ದಕ್ಷಿಣ ಕೊರಿಯಾದ ಪಾಪ್‌ ಸಂಸ್ಕೃತಿಯನ್ನು ಉತ್ತರ ಕೊರಿಯಾ ನಿರ್ಬಂಧಿಸಿದೆ. ಪಾಶ್ಚಾತ್ಯರ ಭ್ರಷ್ಟ ಸಂಸ್ಕೃತಿಯಿಂದ ಉತ್ತರ ಕೊರಿಯನ್ನರನ್ನು ರಕ್ಷಿಸುವ ಅಭಿಯಾನದ ಭಾಗವಾಗಿ ಈ ಕಾನೂನನ್ನು ತರಲಾಗಿದೆ.
ಕೆ-ಪಾಪ್‌, ಕೆ-ಡ್ರಾಮಗಳು ದಕ್ಷಿಣ ಕೊರಿಯಾದ ಮನೋರಂಜನ ಕ್ಷೇತ್ರದ ಭಾಗವಾಗಿದ್ದು, ಇವು ಇತ್ತೀಚಿನ ವರ್ಷ ಗಳಲ್ಲಿ ಇಡೀ ವಿಶ್ವವನ್ನು ತನ್ನತ್ತ ಸೆಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next