ಕಡಲೇ ಹಿಟ್ಟು -1 ಕಪ್
ಹುಣಸೆ ರಸ- 10 ಚಮಚ
ಸಾಸಿ ವೆ- ಉಗ್ಗ ರ ಣೆಗೆ
ಬೆಳ್ಳಳ್ಳಿ – 5 ಎಸಳು
ಅರಿಶಿನ- 1 ಚಮಚ
ಮೆಣ ಸಿನ ಹುಡಿ- ಅರ್ಧ ಕಪ್
ಜೀರಿ ಗೆ- ಕಾಲು ಚಮಚ
ಬೆಲ್ಲ/ ಸಕ್ಕ ರೆ- ರುಚಿಗೆ ತಕ್ಕಷ್ಟು
ಉಪ್ಪು- ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು-ಸ್ವಲ್ಪ
Advertisement
ಒಂದು ಬೌಲ್‌ಗೆ ಹುಣಸೆ ರಸ ಹಾಕಿ ಅದಕ್ಕೆ ಒಂದು ಕಪ್ ಕಡಲೇ ಹಿಟ್ಟು ಹಾಕಿ ಇದಕ್ಕೆ ಉಪ್ಪು, ಮೆಣಸಿನ ಹುಡಿ, ಅರಸಿನಹುಡಿ , ಬೆಲ್ಲ ಅಥವಾ ಸಕ್ಕರೆ ಹಾಕಿ ಮಿಕ್ಸ್ ಮಾಡಿ. ಅನಂತರ ಇದಕ್ಕೆ ಒಗ್ಗರಣೆಗೆ ಬಾಣಲೆಗೆ ಎಣ್ಣೆ ಹಾಕಿ ಇದು ಕಾದ ಅನಂತರ ಸಾಸಿವೆ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ ಹಾಕಿ ಈ ಒಗ್ಗರಣೆಗೆ ಕಡಲೇ ಹಿಟ್ಟಿನ ಮಿಶ್ರಣವನ್ನು ಹಾಕಿ. ಈ ಮಿಶ್ರಣ ಗಟ್ಟಿಯಾಗುವರೆಗೆ ಕುದಿಸಿ. ಗಂಟಾಗದೇ ಆಗಾಗ ಮಿಶ್ರಣವನ್ನು ತಿರುವುತ್ತೀರಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ. ಉದುರ ಚುಣುಕವನ್ನು ಚಪಾತಿ, ಪೂರಿ, ರೊಟ್ಟಿ ಜತೆ ಸವಿಯಬಹುದು.
ಬೇಕಾಗುವ ಸಾಮಗ್ರಿಗಳು
ಉದ್ದಿನಕಾಳು: 1/4 ಕೆಜಿ
ಹಸಿ ಮೆಣಸಿನಕಾಯಿ- 10
ಜೀರಿಗೆ- 1 ಚಮಚ
ಬೆಳ್ಳುಳ್ಳಿ -10
ಉಪ್ಪು: ರುಚಿಗೆ ತಕ್ಕಷ್ಟು
ಉದ್ದು ಆಹಾರ ಜೀರ್ಣ ಕ್ರಿಯೆಗೆ ಹೆಚ್ಚು ಸಹಕಾರಿ.
ದರಲ್ಲಿ ಫೈಬರ್‌ನ ಅಂಶ ಅಧಿಕವಾಗಿರುವುದರಿಂದ ಹೃದಯ ಸಮಸ್ಯೆಯಿಂದ ರಕ್ಷಿಸುತ್ತದೆ
ಕಬ್ಬಿಣಾಂಶ ಅಧಿಕವಾಗಿರುವುದು ನೆನಪು ಶಕ್ತಿಯನ್ನು ಹೆಚ್ಚಿಸುತ್ತದೆ. ಮಾಡುವ ವಿಧಾನ
ಉದ್ದಿನ ಗೇಟಿ ಮಾಡುವುದು ತುಂಬಾ ಸುಲಭ. ಆದರೆ ಪರಿಶ್ರಮ ಹೆಚ್ಚು. ಮೊದಲಿಗೆ ಉದ್ದಿನಕಾಳಗಳನ್ನು ಸಿಪ್ಪೆ ಸಮೇತ ತೆಗೆದು ಹಿಟ್ಟಿನ ರೀತಿಯಲ್ಲಿ ರುಬ್ಬಿಕೊಳ್ಳಬೇಕು. ಉದ್ದಿನ ಹಿಟ್ಟಿಗೆ ಮೆಣಸಿನಕಾಯಿ, ಜೀರಿಗೆ, ಉಪ್ಪು, ಬೆಳ್ಳುಳ್ಳಿ ಪೇಸ್ಟ್ ಸೇರಿಸಿಕೊಳ್ಳಬೇಕು. ಅನಂತರ ನೀರಿನ ಸಹಿತ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಬೇಕು. ನಾದಿಕೊಂಡ ಹಿಟ್ಟನಿಂದ ರೊಟ್ಟಿಯ ರೀತಿಯಲ್ಲಿ ಕೈಯಲ್ಲಿ ತಟ್ಟಿಕೊಳ್ಳಬೇಕು. ಆ ರೊಟ್ಟಿಯನ್ನು ಕಾದಿರುವ ಹಂಚಿನ ಮೇಲೆ ಎರಡೂ ಬದಿಗೆ ಬೇಯಿಸಿಕೊಳ್ಳಬೇಕು. ಅದನ್ನು ಕೇಕ್ ತರಹ ಕಟ್ ಮಾಡಿಕೊಂಡರೆ ಉದ್ದಿನ ಗೇಟಿ ಸವಿಯಲು ಸಿದ್ಧ. ಇದನ್ನು ಹೆಚ್ಚಿನದಾಗಿ ಅನ್ನ, ಸಾರಿನ ಜತೆಯಾಗಿ ತಿನ್ನಲು ಬಳಸುತ್ತಾರೆ.
Related Articles
ಬೇಕಾಗುವ ಸಾಮಗ್ರಿಗಳು
ತೆಂಗಿನ ತುರಿ 1 ಕಪ್
ಮಾವಿನ ಹಣ್ಣಿನ
ಹೋಳುಗಳು 1 ಕಪ್
ಹಾಲು 1 ಕಪ್
ಸಕ್ಕರೆ 1 ಕಪ್
ಏಲಕ್ಕಿ 1 ಟೀ ಸ್ಫೂನ್
ಡ್ರೈ ಫ್ರುಟ್ಸ್ (ಬೇಕಾದಷ್ಟು)
ಫಿಸ್ತಾ
ತುಪ್ಪ
Advertisement
ಮಾಡುವ ವಿಧಾನಕಾದ ಕಡಾಯಿಗೆ ತೆಂಗಿನ ತುರಿಯನ್ನು ಹಾಕಿ ಹೊಂಬಣ್ಣಕ್ಕೆ ತಿರುಗುವವರೆಗೆ ಅದನ್ನು ಬಿಸಿ ಮಾಡಿ. ಅನಂತರ ಅದಕ್ಕೆ ಹಾಲು, ಸ್ವಲ್ಪ ತುಪ್ಪ, ಸಕ್ಕರೆ, ಹಾಗು ಮಾವಿನ ಹಣ್ಣಿನ ಹೋಳುಗಳನ್ನು ಸೇರಿಸಿ ಚೆನ್ನಾಗಿ ಕಲಸಿ ಮಧ್ಯಮ ಉರಿಯಲ್ಲಿ ಕುದಿಸಿ. ಸುಮಾರು 18- 20 ನಿಮಿಷಗಳ ಕಾಲ ಈ ಪಾಕವನ್ನು ಚೆನ್ನಾಗಿ ತಿರುವುತ್ತಿರಿ.
ಅದು ನಿಧಾನವಾಗಿ ಗಟ್ಟಿಗೊಳ್ಳತೊಡಗಿದ ಅನಂತರ ಅದನ್ನು ಕೆಳಗಿಟ್ಟು ಅನಂತರ ಅದಕ್ಕೆ ಏಲಕ್ಕಿ, ಪಿಸ್ತಾ ಪೌಡರ್ ಮತ್ತು ಡ್ರೈಫ್ರುಟ್ಸ್ ಗಳನ್ನು ಸೇರಿಸಿ ಮಿಕ್ಸ್ ಮಾಡಿ. ಅನಂತರ ಒಂದು ಬಟ್ಟಲಿಗೆ ತುಪ್ಪ ಹಚ್ಚಿ ಈ ಪಾಕವನ್ನು ಅದರಲ್ಲಿ ಹಾಕಿ ಕೊಂಚ ಹೊತ್ತು ಫ್ರೀಜರ್‌ನಲ್ಲಿಟ್ಟರೆ ಘಮಘಮಿಸುವ ರುಚಿಕರ ಮ್ಯಾಂಗೋ ಕೋಕನಟ್ ಬರ್ಫಿ ರೆಡೀ ಟು ಸರ್ವ್. ಶಿವಲೀಲಾ