Advertisement

ಉತ್ತಮ ಆದಾಯ ತರುವುದು ಸಂಸ್ಥೆಗೆ ನಷ್ಟವೇ!

05:23 PM Nov 26, 2020 | Suhan S |

ಯಾದಗಿರಿ: ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಯಾದಗಿರಿ ವಿಭಾಗದ ಗಡಿ ಭಾಗವಾದ ಗುರುಮಠಕಲ್‌ ಸಾರಿಗೆ ಘಟಕದ ಆದಾಯಕ್ಕೆ ಕತ್ತರಿ ಹಾಕಲು ಕಲಬುರಗಿಯ ಕೇಂದ್ರ ಕಚೇರಿ ಅಧಿಕಾರಿಗಳೇ ಮುಂದಾಗಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಬೇರೆ ಮಾರ್ಗವಾಗಿ ಬಸ್‌ ಚಲಾಯಿಸುವ ಷಡ್ಯಂತ್ರಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

Advertisement

ತಮ್ಮ ವ್ಯಾಪ್ತಿಯ ಗಡಿ ಭಾಗದ ಘಟಕವೊಂದು ಲಾಕ್‌ಡೌನ್‌ ಸಡಿಲಗೊಂಡ ಬಳಿಕ ಇನ್ನೂ ರೈಲು ಸೇವೆ ಆರಂಭಗೊಳ್ಳದ ಸಂದರ್ಭದಲ್ಲಿ ಸಾರಿಗೆ ಮೂಲಕವೇ ಈ ಭಾಗದಿಂದ ಸಾಕಷ್ಟು ಪ್ರಮಾಣದಲ್ಲಿ ದುಡಿಯಲು ಕಾರ್ಮಿಕರು ಬೆಂಗಳೂರು, ಪುಣೆ, ಮುಂಬೈ ಹಾಗೂ ಹೈದರಬಾದ್‌ಗೆ ತೆರಳುವುದು ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದೂರದ ಮಾರ್ಗಕ್ಕೆ ಪ್ರಯಾಣಿಸಿ ಚಾಲಕ, ನಿರ್ವಾಹಕರು ಶ್ರಮಿಸಿ ಗುರುಮಠಕಲ್‌-ಮುಂಬೈ ಮಾರ್ಗದಲ್ಲಿ ಒಂದೇ ದಿನ 1.35 ಲಕ್ಷ ಆದಾಯ ತಂದಾಗ ಅವರನ್ನುಪ್ರೋತ್ಸಾಹಿಸುವ ಕಾರ್ಯವನ್ನು ಯಾದಗಿರಿ ವಿಭಾಗದ ಅಧಿಕಾರಿಗಳು ಮಾಡಿದ್ದಾರೆ. ಈ ಮಧ್ಯೆಯೇ ಕಲಬುರಗಿಯ ಸಂಚಾರಿ ವಿಭಾಗದ ಮೇಲಧಿಕಾರಿ ತಮ್ಮದೇ ಸಂಸ್ಥೆಯ ಸಿಬ್ಬಂದಿಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡುವ ಬದಲು ಗುರುಮಠಕಲ್‌ ಘಟಕದ ಆದಾಯಕ್ಕೆ ಕತ್ತರಿ ಹಾಕುವ ಕಾರ್ಯ ಮಾಡುತ್ತಿದ್ದಾರೆ ಎನ್ನುವ ಅಸಮಾಧಾನ ಸಾರಿಗೆ ಸಿಬ್ಬಂದಿಗಳಲ್ಲಿ ವ್ಯಕ್ತವಾಗಿದೆ.

ಕಲಬುರಗಿಯಿಂದ-ಮುಧೋಳ, ಗುರುಮಠಕಲ್‌ ಮಾರ್ಗವಾಗಿ ಮುಂಬೈಗೆ ವಾಹನವನ್ನು ಓಡಿಸಲು ಯೋಚನೆ ನಡೆಸಿದ್ದು, ಇದರ ಬದಲು ಗುರುಮಠಕಲ್‌ ಘಟಕಕ್ಕೆ ಹೆಚ್ಚಿನ ವಾಹನಗಳನ್ನು ಒದಗಿಸಿ ಇಲ್ಲಿಂದಲೇ ಸಂಚಾರಕ್ಕೆ ಅನುವು ಮಾಡಿದರೆ ಆದಾಯ ಅಧಿಕ ಮಾಡಬಹುದು. ಈ ನಿಟ್ಟಿನಲ್ಲಿ ಮುಖ್ಯ ಸಂಚಾರಿ ವ್ಯವಸ್ಥಾಪಕರು ಗುರುಮಠಕಲ್‌ ಘಟಕದಿಂದಲೇ ಹೆಚ್ಚಿನ ವಾಹನ ಮುಂಬೈ ಮಾರ್ಗಕ್ಕೆ ಕಾರ್ಯಚರಣೆ ಮಾಡುವ ಆಲೋಚನೆ ಮಾಡಬೇಕಿದೆ. ಯಾದಗಿರಿ ವಿಭಾಗದಲ್ಲಿ ಸಾರಿಗೆ ವಾಹನಗಳ ಕೊರತೆಯಿಂದ ಬೇಡಿಕೆಯಿರುವ ಮಾರ್ಗಕ್ಕೆ ಬಸ್‌ಸಂಚಾರ ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮೇಲಧಿಕಾರಿಗಳು ಇದನ್ನು ಆದ್ಯತೆಯಾಗಿ ಪರಿಗಣಿಸಿ ಹೆಚ್ಚಿನ ವಾಹನಗಳು ಮತ್ತು ಅಗತ್ಯ ಚಾಲಕ, ನಿರ್ವಾಹಕನ್ನು ಹಿಂದುಳಿದ ಯಾದಗಿರಿ ವಿಭಾಗದ ಘಟಕಗಳಿಗೆ ನಿಯೋಜಿಸಿ ಸಾರ್ವಜನಿಕರಿಗೆಅನುಕೂಲ ಕಲ್ಪಿಸಬೇಕು ಎನ್ನುವ ಒತ್ತಾಯವೂ ಕೇಳಿಬಂದಿದೆ.

ದಾಖಲೆ ಮುರಿದ ಆದಾಯ :  ಈಚೆಗೆ 1.35 ಲಕ್ಷ ರೂ. ಆದಾಯ ತಂದಿದ್ದ ಗುರುಮಠಕಲ್‌ ಘಟಕದ ಸಾರಿಗೆ ಸಿಬ್ಬಂದಿ ಮಂಗಳವಾರ ದಾಖಲೆ ಮುರಿದು 1.38 ಲಕ್ಷ ಕ್ಕೂ ಹೆಚ್ಚಿನ ಆದಾಯ ತಂದಿದ್ದಾರೆ. ಕಿ.ಮೀ. ಒಂದಕ್ಕೆ 101.89 ರೂ. ಆದಾಯ ತಂದಿರುವ ನಿರ್ವಾಹಣ ರಾಜು ಕಲಾಲ್‌ ಮತ್ತು ಚಾಲಕ ಅಂಜಪ್ಪಗೆ ಸಾರಿಗೆ ಘಟಕದ ಹಿರಿಯ ಅಧಿಕಾರಿಗಳು ಅಭಿನಂದಿಸಿದರು

Advertisement

Udayavani is now on Telegram. Click here to join our channel and stay updated with the latest news.

Next