Advertisement

ಬಾಹುಬಲಿ-2ಕ್ಕೆ ಸಾಧಾರಣ ಪ್ರತಿಕ್ರಿಯೆ

12:22 PM Apr 29, 2017 | |

ದಾವಣಗೆರೆ: ಭಾರತ ಮಾತ್ರವಲ್ಲ ಜಗತ್ತಿನ ಇತರೆ ದೇಶದಲ್ಲೂ ಭಾರೀ ಕುತೂಹಲ, ನಿರೀಕ್ಷೆಯ ಸಂಚಲನ ಮೂಡಿಸಿದ್ದ ಕನ್ನಡಿಗ ರಾಜಮೌಳಿ ನಿರ್ದೇಶನ, ತೆಲುಗಿನ ಖ್ಯಾತ  ನಟ ಪ್ರಭಾಸ್‌ ಅಭಿನಯದ ಬಾಹುಬಲಿ-2 ಚಿತ್ರಕ್ಕೆ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ. 

Advertisement

ನಗರದ ಅರುಣಾ, ಪುಷ್ಪಾಂಜಲಿ ಚಿತ್ರಮಂದಿರ, ಮಲ್ಟಿಫ್ಲೆಕ್ಸ್‌ನಲ್ಲಿ ಪ್ರದರ್ಶಿತವಾಗುತ್ತಿರುವ ಬಾಹುಬಲಿ-2 ಚಿತ್ರಕ್ಕೆ ಪ್ರೇಕ್ಷಕರು ಫುಲ್‌ μದಾ ಆಗಿದ್ದಾರೆ. ಮಲ್ಟಿಫ್ಲೆಕ್‌ನಲ್ಲಿ ಮಾತ್ರ ಉತ್ತಮ ಕಲೆಕ್ಷನ್‌ ಕಂಡಿದೆ. ಅರುಣಾ ಚಿತ್ರಮಂದಿರದಲ್ಲಿ ಬೆಳಗ್ಗೆ 7ಕ್ಕೆ ಪ್ರಥಮ ಪ್ರದರ್ಶನ ನಡೆಯಿತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಚಿತ್ರಕ್ಕೆ ಶುಭ ಕೋರಿದರು.

ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಬೆಳಗ್ಗೆ 10ಕ್ಕೆ ಷೋ ಪ್ರಾರಂಭವಾಯಿತು. ಮಧ್ಯಾಹ್ನದ ಪ್ರದರ್ಶನಕ್ಕೆ ಜನರು ಕಡಿಮೆ ಸಂಖ್ಯೆಯಲ್ಲಿ ಕಂಡು ಬಂದರು. ಫಸ್ಟ್‌ ಮತ್ತು ಸೆಕೆಂಡ್‌ಷೋ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಇದ್ದರು. ಅಬ್ಬರದ ಪ್ರಚಾರದೊಂದಿಗೆ ಬಿಡುಗಡೆಯಾದ ಚಿತ್ರಕ್ಕೆ ದಾವಣಗೆರೆಯಲ್ಲಿ ಹೆಚ್ಚಿನ ದಟ್ಟಣೆ ಕಂಡು ಬರಲಿಲ್ಲ. 

ಅರಣಾ ಹಾಗೂ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಶೇ. 80ರಷ್ಟು ಮಾತ್ರ ಆಸನಗಳು ಭರ್ತಿಯಾಗಿದ್ದವು. ಆನ್‌ ಲೈನ್‌ನಲ್ಲಿ ಟಿಕೆಟ್‌ ಬುಕಿಂಗ್‌ ವ್ಯವಸ್ಥೆ ಆನ್‌ಲೈನ್‌ನಲ್ಲಿ ಮಾರಾಟವಾಗಿದ್ದವು. ಫಸ್ಟ್‌ ಕ್ಲಾಸ್‌ 150 ಹಾಗೂ ಬಾಲ್ಕನಿ 200 ರೂ. ನಿಗದಿ ಮಾಡಲಾಗಿದೆ. ಚಿತ್ರಮಂದಿರಗಳಿಗೆ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next