Advertisement

ನಾರ್ಮಲ್ ಹೆರಿಗೆ: 4ಕೆಜಿ ಮಗು ಜನನ

12:04 PM May 19, 2019 | Naveen |

ಹೊಸನಗರ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ| ಅಮೃತಾಂಶು ಅವರು ತಾಲೂಕಿನ ಬಿಲ್ಲೋಡಿ ಸಂಹಿತಾ ಎಂಬಾಕೆಗೆ ಸಾಮಾನ್ಯ ಸ್ಥಿತಿಯಲ್ಲಿ ಚೊಚ್ಚಲ ಹೆರಿಗೆ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ..

Advertisement

ಬ್ರಹ್ಮಾವರದ ಶ್ರೀಕಾಂತ್‌ ಬಿಲ್ಲೋಡಿಯ ಸಂಹಿತಾ ಅವರನ್ನು ಕಳೆದ ವರ್ಷ ವಿವಾಹವಾಗಿದ್ದರು. ಸಂಹಿತಾ ಗರ್ಭಿಣಿಯಾದ ಹಿನ್ನಲೆಯಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತೆಗೆ ದಾಖಲಿಸಲಾಗಿತ್ತು.

ಸಂಹಿತಾ ಅವರ ಸ್ಥಿತಿ ಗಂಭೀರವಿದ್ದರೂ ಧೃತಿಗೆಡದೆ ಡಾ| ಅಮೃತಾಂಶು ಸಿಬ್ಬಂದಿಗಳಾದ ಅನುಸೂಯ, ಪ್ರೇಮ, ನಾಜದ್‌ ನೆರವಿನಿಂದ ಸಾಮಾನ್ಯ ಸ್ಥಿತಿಯ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಹಿತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗು 4 ಕೆಜಿ 100 ಗ್ರಾಂ. ತೂಕವಿದೆ. ತಾಯಿ-ಮಗು ಆರೋಗ್ಯವಾಗಿದ್ದು, ಆಸ್ಪತ್ರೆಯಲ್ಲಿ ಅವರ ಚಿಕಿತ್ಸೆ ಮುಂದುವರಿದಿದೆ. ಸಾಮಾನ್ಯವಾಗಿ ಚೊಚ್ಚಲ ಹೆರಿಗೆಯಲ್ಲಿ ಹುಟ್ಟುವ ಮಗು 2ರಿಂದ 3.5 ಕೆಜಿ ತೂಕ ಇರುತ್ತದೆ. ಆದರೆ, 4.1 ಕೆಜಿ ತೂಕದ ಮಗುವಿನ ಹೆರಿಗೆಗೆ ಮುಂದಾದ ಡಾ| ಅಮೃತಾಂಶು ಅವರ ಕಾರ್ಯಕ್ಷಮತೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೆ, ಹೊಸನಗರಕ್ಕೆ ಅಗತ್ಯ ಇದ್ದ ಮಹಿಳಾ ವೈದ್ಯರ(ಹೆರಿಗೆ) ಕೊರತೆಯನ್ನು ನೀಗಿಸುವಲ್ಲಿ ಸಹ ಅವರು ಯಶಸ್ವಿ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next