Advertisement

ನಾರ್ಮಲ್‌ ಹುಡುಗಿಯ ಥ್ರಿಲ್ಲಿಂಗ್‌ ಸ್ಟೋರಿ

06:00 AM Aug 03, 2018 | |

“ಈ ಲುಕ್‌ನಲ್ಲಿ ಈ ಹುಡುಗಿನಾ ನೋಡಿದ್ರೆ ಯಾರಾದ್ರೂ “ಟೆರರಿಸ್ಟ್‌’ ಅಂತಾರಾ?
– ಹೀಗೆ ಹೇಳಿ ಹಾಗೊಂದು ಸ್ಮೈಲ್‌ ಕೊಟ್ಟರು ಅಂಬರೀಷ್‌. ಅವರ ಆ ಡೈಲಾಗ್‌ಗೆ ಆ ಸಭಾಂಗಣದಲ್ಲೂ ನಗೆಗಡಲು. ಪಕ್ಕದ್ದಲ್ಲೇ ಕೂತಿದ್ದ ಆ ಹುಡುಗಿ ಮೊಗದಲ್ಲೂ ಜೋರು ನಗೆ. ಅಂದಹಾಗೆ, ಅಂಬರೀಷ್‌ ಹೇಳಿದ್ದು ನಟಿ ರಾಗಿಣಿ ಬಗ್ಗೆ. ಅವರು ಹಾಗೆ ಹೇಳ್ಳೋಕೆ ಕಾರಣ. “ದಿ ಟೆರರಿಸ್ಟ್‌’ ಸಿನಿಮಾ. ಹೌದು, ರಾಗಿಣಿ ಅಭಿನಯದ “ದಿ ಟೆರರಿಸ್ಟ್‌’ ಚಿತ್ರದ ಫ‌ಸ್ಟ್‌ ಲುಕ್‌ ಬಿಡುಗಡೆ ಮಾಡಿದ್ದು ಅಂಬರೀಷ್‌. ಆ ಚಿತ್ರದ ಫ‌ಸ್ಟ್‌ಲುಕ್‌ ನೋಡಿದ ಅಂಬರೀಷ್‌, ತಂಡದವರೊಂದಿಗೆ ಫೋಟೋಗೆ ಪೋಸ್‌ ಕೊಟ್ಟರು. ನಂತರ “ದಿ ಟೆರರಿಸ್ಟ್‌’ ಕುರಿತು ಮಾತಿಗಿಳಿದರು.

Advertisement

ಅಷ್ಟಕ್ಕೂ ಅಂಬರೀಷ್‌ ಅವರು ರಾಗಿಣಿ ಕುರಿತು “ಈ ಲುಕ್‌ನಲ್ಲಿ ಈ ಹುಡುಗಿನಾ ನೋಡಿದ್ರೆ ಯಾರಾದ್ರೂ ಟೆರರಿಸ್ಟ್‌ ಅಂತಾರ ಅನ್ನೋಕೆ ಕಾರಣ, ರಾಗಿಣಿ ಮೈಮೇಲೆ ಕೆಂಪು ಬಣ್ಣದ ರೇಷ್ಮೆ ಸೀರೆ, ಕಿವಿಗಳಿಗೆ ದೊಡ್ಡ ಗಾತ್ರದ ಓಲೆ, ಹಣೆಗೊಂದು ಸಿಂಧೂರ ಮತ್ತು ಮುಡಿಗೆ ಮಲ್ಲಿಗೆ ಮುಡಿದು ಥೇಟ್‌ ಟ್ರೆಡಿಷನಲ್‌ ಹುಡುಗಿಯಾಗಿ ಕಂಗೊಳಿಸುತ್ತಿದ್ದರು. ಅದನ್ನು ನೋಡಿದ ಅಂಬರೀಷ್‌, ಚಿತ್ರದ ಶೀರ್ಷಿಕೆಗೆ ಸಂಬಂಧಿಸಿದಂತೆ ಹಾಗೆ ಹೇಳಿ ಸಣ್ಣದ್ದೊಂದು ನಗೆ ಬೀರಿದರು.

ಅಂಬರೀಷ್‌ ಆ ಕಾರ್ಯಕ್ರಮಕ್ಕೆ ಬಂದಾಗಲಷ್ಟೇ ಅವರಿಗೆ “ದಿ ಟೆರರಿಸ್ಟ್‌’ ಶೀರ್ಷಿಗೆ ಗೊತ್ತಾಗಿದ್ದು. ಹಾಗಂತ ಹೇಳಿಕೊಂಡ ಅಂಬರೀಷ್‌, “ಟೈಟಲ್‌ ಕೇಳಿ ನಂಗೇ ಭಯ ಆಗ್ತಾ ಇದೆ’ ಅನ್ನುತ್ತಲೇ ಮಾತಿಗಿಳಿದರು. “ಆಡಿಯೋ ಬಿಡುಗಡೆ, ಟೀಸರ್‌ ಬಿಡುಗಡೆ, ಟ್ರೇಲರ್‌ ಬಿಡುಗಡೆ ಸಾಮಾನ್ಯವಾಗಿ ಆಗುತ್ತಿರುತ್ತವೆ. ಆದರೆ, “ದಿ ಟೆರರಿಸ್ಟ್‌’ ಚಿತ್ರತಂಡ ಫ‌ಸ್ಟ್‌ಲುಕ್‌ ರಿಲೀಸ್‌ ಮಾಡುವ ಮೂಲಕ ಪ್ರಚಾರ ಶುರುವಿಟ್ಟುಕೊಂಡಿದೆ. ಈಗ ಯಂಗ್‌ಸ್ಟರ್ ಹೊಸ ತರಹದ ಚಿತ್ರ ಮಾಡುತ್ತಿದ್ದಾರೆ. ಹೊಸ ಆಲೋಚನೆಯೊಂದಿಗೆ ಬರುತ್ತಿದ್ದಾರೆ. ಸಾಕಷ್ಟು ತಂತ್ರಜ್ಞಾನದ ಬಗ್ಗೆ ಅರಿತು ಹೊಸ ಪ್ರಯೋಗ ಮಾಡುತ್ತಿದ್ದಾರೆ. ನನ್ನದ್ದೊಂದೇ ಆಸೆ, ಕನ್ನಡ ಚಿತ್ರರಂಗ ಇನ್ನೂ ಎತ್ತರಕ್ಕೆ ಬೆಳೆಯಬೇಕು. ಹೊಸ ಪ್ರತಿಭಾವಂತರು ಬರಬೇಕು. ಚಿತ್ರರಂಗಕ್ಕೆ ಬಂದು 49 ವರ್ಷ ಗತಿಸಿದೆ. ಖಳನಟನಾಗಿ, ನಾಯಕನಾಗಿ, ಜನ ನಾಯಕನಾಗಿಯೂ ಗುರುತಿಸಿಕೊಂಡಿದ್ದೇನೆ. ಖುಷಿ ಇದೆ. ಈಗಿನ ಚಿತ್ರಗಳಲ್ಲಿ ಹೊಸದೇನೋ ಇರುತ್ತೆ. ಈ ಚಿತ್ರ ಚೆನ್ನಾಗಿ ಪ್ರದರ್ಶನವಾಗಿ, ನಿರ್ದೇಶಕರಿಗೆ ಹೆಸರು ತರಲಿ, ನಿರ್ಮಾಪಕರಿಗೆ ಹಣ ಕೊಡಲಿ, ರಾಗಿಣಿ ಎಫ‌ರ್ಟ್‌ಗೆ ಪ್ರತಿಫ‌ಲ ಸಿಗಲಿ, ಹೊಸ ಪ್ರತಿಭೆಗಳು ಇನ್ನಷ್ಟು ಬರಲಿ’ ಎಂದು ಹೇಳುತ್ತಲೇ, ರಾಗಿಣಿ ತುಂಬಾ ಚೆನ್ನಾಗಿ ಮಾತಾಡ್ತಾಳೆ. ನೆಕ್ಸ್ಟ್ ಎಲೆಕ್ಷನ್‌ ಕ್ಯಾಂಡಿಡೇಟ್‌ ಆಗಬಹುದು’ ಅನ್ನುವ ಮೂಲಕ ಮತ್ತೂಂದು ಜೋರು ನಗೆಗೆ ಕಾರಣರಾದರು ಅಂಬರೀಷ್‌.

ನಿರ್ದೇಶಕ ಪಿ.ಸಿ.ಶೇಖರ್‌ ಅಂದು ಅದೇನನ್ನೋ ಗೆದ್ದ ಖುಷಿಯಲ್ಲಿದ್ದರು. ಕಾರಣ, ಅವರು ಚಿಕ್ಕಂದಿನಿಂದಲೂ ಅಂಬರೀಷ್‌ ಅವರ ಚಿತ್ರಗಳನ್ನು ನೋಡಿ ಬೆಳೆದವರಂತೆ. ಅವರ ಕೆರಿಯರ್‌ನಲ್ಲಿ “ದಿ ಟೆರರಿಸ್ಟ್‌’ ಚಿತ್ರದ ಫ‌ಸ್ಟ್‌ಲುಕ್‌ ರಿಲೀಸ್‌ ಸಂದರ್ಭವನ್ನು ಮರೆಯೋದಿಲ್ಲವಂತೆ. ಅಂಬರೀಷ್‌ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಸಮಯಕ್ಕಾಗಿ ಕಾದಿದ್ದ ಅವರಿಗೆ “ದಿ ಟೆರರಿಸ್ಟ್‌’ ಅಂಥದ್ದೊಂದು ಅವಕಾಶ ಕಲ್ಪಿಸಿಕೊಟ್ಟ ಖುಷಿ ಅವರಲ್ಲಿತ್ತು. “ನಿತ್ಯವೂ ಪತ್ರಿಕೆ, ಟಿವಿಗಳಲ್ಲಿ ಟೆರರಿಸಂ ಕುರಿತು ಒಂದಲ್ಲ ಒಂದು ಸುದ್ದಿ ಬರುತ್ತಲೇ ಇದೆ. ಅದನ್ನು ಗಮನಿಸಿ, ಆ ವಿಷಯದ ಮೇಲೊಂದು ಚಿತ್ರ ಮಾಡಿದ್ದೇನೆ. 

ಇಲ್ಲಿ ವುಮೆನ್‌ ಇರುವುದು ವಿಶೇಷ. ಇಲ್ಲಿ ಒಂದಷ್ಟು ಥ್ರಿಲ್ಲಿಂಗ್‌ ಎಲಿಮೆಂಟ್ಸ್‌ ಇಟ್ಟುಕೊಂಡು ಮಾಡಿದ್ದೇನೆ. ಎಲ್ಲಾ ಎಮೋಷನ್ಸ್‌ನ ಅಂಡರ್‌ಲೈನ್‌ ಮಾಡಿ ಚಿತ್ರದಲ್ಲಿ ಅಳವಡಿಸಿದ್ದೇನೆ. ರಾಗಿಣಿ ಬೆಸ್ಟ್‌ ಎಫ‌ರ್ಟ್‌ ಹಾಕಿದ್ದಾರೆ. ಇನ್ನು, ಅಲಂಕಾರ್‌ ಸಂತಾನ ಚಿತ್ರಕ್ಕೆ ಬೇಕಾದೆಲ್ಲವನ್ನೂ ಕೊಟ್ಟಿದ್ದಾರೆ. ಕನ್ನಡಕ್ಕೆ ಇದೊಂದು ಬೇರೆ ರೀತಿಯ ಚಿತ್ರ ಆಗುತ್ತೆ ಎಂಬ ಭರವಸೆ ನನಗಿದೆ’ ಎಂಬುದು ನಿರ್ದೇಶಕ ಪಿ.ಸಿ.ಶೇಖರ್‌ ಮಾತು.

Advertisement

“ನನ್ನದು ಒಂಥರಾ ವಿಚಿತ್ರ ಪಾತ್ರ’ ಹೀಗಂತ ಮಾತಿಗಿಳಿದರು ರಾಗಿಣಿ. “ಫ‌ಸ್ಟ್‌ಲುಕ್‌ ನೋಡಿದರೆ, ನೂರು ಕಥೆ ಹೇಳುವಂತಿದೆ. ಇಲ್ಲಿ ಒಳ್ಳೆಯದೂ ಇದೆ. ಕೆಟ್ಟದ್ದೂ ಇದೆ. ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇದೆ. ಕಥೆಯೇ  ಚಿತ್ರದ ಶಕ್ತಿ. ನಿರ್ದೇಶಕರಿಗೆ ಒಳ್ಳೇ ಆಲೋಚನೆಗಳಿವೆ. ತಾಂತ್ರಿಕವಾಗಿಯೂ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಕೆ.ಆರ್‌.ಮಾರ್ಕೆಟ್‌ನಲ್ಲಿ ಚಿತ್ರೀಕರಣ ಮಾಡಿದ್ದು ವಿಶೇಷ. ರಾತ್ರಿ-ಹಗಲು ಕೆಲಸ ಮಾಡಿದ್ದೇವೆ. ಹೊಸ ಜಾಗದಲ್ಲಿ “ದಿ ಟೆರರಿಸ್ಟ್‌’ ಮೂಡಿರುವುದು ಇನ್ನೊಂದು ವಿಶೇಷ. ನಾನಿಲ್ಲಿ ಮುಸ್ಲಿಂ ಹುಡುಗಿ ಪಾತ್ರ ಮಾಡಿದ್ದೇನೆ. ಒಬ್ಬ ನಾರ್ಮಲ್‌ ಹುಡುಗಿ ಲೈಫ‌ಲ್ಲಿ ಏನೆಲ್ಲಾ ಆಗಿಹೋಗುತ್ತೆ ಎಂಬುದು ಕಥೆ’ ಎಂದಷ್ಟೇ ಹೇಳುತ್ತಾರೆ ರಾಗಿಣಿ.

ನಿರ್ಮಾಪಕ ಅಲಂಕಾರ್‌ ಸಂತಾನ ಅವರಿಗೆ ಇದು ಮೊದಲ ಚಿತ್ರ. ಒಂದು ಕಾರ್ಯಕ್ರಮದಲ್ಲಿ ರಾಗಿಣಿ ಪರಿಚಯವಾಗಿದ್ದರು. ಅಲ್ಲಿಂದ ಒಳ್ಳೆಯ ಫ್ರೆಂಡ್‌ಶಿಪ್‌ ಇತ್ತು. ಒಮ್ಮೆ ಕಥೆಯ ಒನ್‌ಲೈನ್‌ ಹೇಳಿದಾಗ, ಖುಷಿಯಾಯ್ತು. ಮಾಡಿದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಸಮಾಜಕ್ಕೆ ಒಂದೊಳ್ಳೆಯ ಸಂದೇಶವಿರುವ ಚಿತ್ರವಿದು’ ಎನ್ನುತ್ತಾರೆ ಅವರು.

ಚಿತ್ರಕ್ಕೆ ಪ್ರದೀಪ್‌ ವರ್ಮ ಸಂಗೀತವಿದೆ. ತಿಂಗಳುಗಟ್ಟಲೆ ಕುಳಿತು ಹಿನ್ನೆಲೆ ಸಂಗೀತ ಮಾಡಿದ್ದಾರಂತೆ. ಇದು ಇಂಟರ್‌ನ್ಯಾಷನಲ್‌ ಸಬೆjಕ್ಟ್ ಆಗಿರುವುದರಿಂದ ಸೌಂಡಿಂಗ್‌ ಕೂಡ ಹೊಸರೀತಿಯಲ್ಲಿರಲಿದೆ ಎನ್ನುತ್ತಾರೆ ಪ್ರದೀಪ್‌ ವರ್ಮ. ಅಂದು ಆ ಸಭಾಂಗಣದೊಳಗೆ ಎಲ್ಲರೂ  ಮಾತಿನ ಮಳೆ ಸುರಿಸುತ್ತಿದ್ದರೆ, ಅತ್ತ, ಹೊರಗೆ ಸಣ್ಣ ಮಳೆ ಸುರಿಯುತ್ತಿತ್ತು. ಕೊನೆಗೆ ಮಾತುಕತೆಗೆ ಬ್ರೇಕ್‌ ಬಿತ್ತು. ಜಿಟಿ ಜಿಟಿ ಮಳೆಯೂ ಸುಮ್ಮನಾಯ್ತು. ಆ ಹೊತ್ತಿಗೆ “ದಿ ಟೆರರಿಸ್ಟ್‌’ ತಂಡಕ್ಕೆ ಗುಡ್‌ಲಕ್‌ ಹೇಳುವ ಮೂಲಕ ಫ‌ಸ್ಟ್‌ಲುಕ್‌ ಕಾರ್ಯಕ್ರಮಕ್ಕೆ ಅಂತ್ಯ ಹಾಡಲಾಯಿತು.  

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next