Advertisement
200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ವಂಚಕ ಸುಕೇಶ್ ಚಂದ್ರಶೇಖರ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ನಟಿ ಜಾಕ್ವೆಲಿನ್ ಫೆರ್ನಾಂಡಿಸ್, ನೋರಾ ವಿರುದ್ದ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ನೋರಾ 2022 ರ ಡಿಸೆಂಬರ್ ನಲ್ಲಿ ನನ್ನ ವಿರುದ್ದ ಮಾನಹಾನಿಯಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
Related Articles
Advertisement
“ಪ್ರಕರಣದಲ್ಲಿ ನನ್ನ ಹಾಗೂ ಆರೋಪಿಯ ನಡುವೆ ಯಾವುದೇ ಸಂಬಂಧವಿಲ್ಲ. ನನ್ನನು ಅವರು ಗೋಲ್ಡ್ ಡಿಗ್ಗರ್ (ಹಣ ಅಥವಾ ದುಬಾರಿ ವಸ್ತುಗಳನ್ನು ಪಡೆಯುವ ಸಲುವಾಗಿ ಶ್ರೀಮಂತ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿ) ಎಂದು ಕರೆದಿದ್ದಾರೆ. ವಂಚಕನ ಜೊತೆ ಸಂಬಂಧ ಹೊಂದಿದ್ದೇನೆ ಎಂದಿದ್ದಾರೆ. ವಿಚಾರಣೆಯ ಗಮನವನ್ನು ಬೇರೆಡೆಗೆ ಸೆಳೆಯಲು ನನ್ನ ಹೆಸರನ್ನು ಇದರಲ್ಲಿ ಸೇರಿಸಲಾಗಿದೆ” ಎಂದು ಮ್ಯಾಜಿಸ್ಟ್ರೇಟ್ ಮುಂದೆ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) 164 ಅಡಿಯಲ್ಲಿ ತನ್ನ ಹೇಳಿಕೆಯನ್ನು ಫತೇಹಿ ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾರುವ ವ್ಯಕ್ತಿಗಳ ಬಗ್ಗೆ ನನಗೆ ತಿಳಿದಿಲ್ಲ. ವಂಚಕ ಸುಕೇಶ್ ಇ.ಡಿ ಪ್ರಕರಣದಲ್ಲಿ ನನಗೆ ಯಾವುದೇ ಸಂಬಂಧವಿಲ್ಲ. ನನಗೂ ಈ ಜನರ ಪರಿಚಯವಿಲ್ಲ. ಕಾರ್ಯಕ್ರಮವೊಂದರಲ್ಲಿ ನನ್ನನ್ನು ಮುಖ್ಯ ಅತಿಥಿಯಾಗಿ ಕರೆಯಲಾಗಿತ್ತು ಅಷ್ಟೇ. ನಾನು ಹೊರಗಿನವಳು ಹಾಗೂ ಈ ದೇಶದಲ್ಲಿ ಒಂಟಿಯಾಗಿರುವುದರಿಂದ ಕೆಲ ಮಾಧ್ಯಮಗಳಲ್ಲಿ ನನ್ನನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದಿದ್ದಾರೆ.
ಈ ಆರೋಪದಿಂದ ನನ್ನ ವೃತ್ತಿ ಮತ್ತು ಖ್ಯಾತಿಗೆ ಉಂಟಾದ ಎಲ್ಲಾ ಹಾನಿಗಳಿಗೆ ಪರಿಹಾರವನ್ನು ನೋರಾ ಕೋರಿವುದಾಗಿ ವರದಿ ತಿಳಿಸಿದೆ.
ಸದ್ಯ ಈ ಪ್ರಕರಣವನ್ನು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.