Advertisement
ನೂಜಿಬಾಳ್ತಿಲ ಗ್ರಾ. ಪಂ. ವ್ಯಾಪ್ತಿಯ ಕುಬಲಾಡಿ ಬಳಿಯ ಪಂಜಳ ಪರಿಶಿಷ್ಟ ಜಾತಿ ಕಾಲನಿಯ ಜನತೆ ಇಲ್ಲಿ ಹರಿಯುವ ತೋಡಿಗೆ ಸೇತುವೆ ಇಲ್ಲದೆ ನೀರು ದಾಟಿ ತೆರಳುತ್ತಿದ್ದರು. ಮಳೆಗಾಲದಲ್ಲಿ ಸುತ್ತು ಬಳಸಿ ಕಡಬ, ಕೊಲ್ಯದಕಟ್ಟೆ, ವಿಮಲಗಿರಿ, ಉಕ್ಕಿನಡ್ಕ ಭಾಗದತ್ತ ತೆರಳಬೇಕಾಗಿತ್ತು.
ಪಂಜಳ ಪರಿಶಿಷ್ಟ ಜಾತಿ ಕಾಲನಿಗೆ ರಸ್ತೆ ಅಭಿವೃದ್ಧಿಗೆ ಹಾಗೂ ಸೇತುವೆ ರಚನೆಗೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 12.5 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ. ಶೀಘ್ರ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಸೇತುವೆ ರಚನೆ ಹಾಗೂ ಸೇತುವೆ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾರ್ಯವೂ ನಡೆಯಲಿದೆ. ಇಲ್ಲಿನ ಸಮಸ್ಯೆ ಹಾಗೂ ಬೇಡಿಕೆ ಬಗ್ಗೆ ಉದಯವಾಣಿ ಸುದಿನದಲ್ಲಿ ಸರಕಾರದ ಗಮನ ಸೆಳೆಯಲಾಗಿತ್ತು.