Advertisement
ಸರಕಾರ ನಡೆಸುವವರ ಉತ್ತಮ ನಾಯಕತ್ವದ ಲಕ್ಷಣ ಇದು ಎನ್ನುತ್ತಾರೆ ಮೂಲತಃ ಕುಂದಾಪುರ ನಗರ ನಿವಾಸಿಯಾಗಿದ್ದು ಬೆಂಗಳೂರು ಮಲ್ಲೇಶ್ವರದ ಸಾಫ್ಟ್ವೇರ್ ಎಂಜಿನಿಯರ್ ಪ್ರಕಾಶ್ ಶೆಣೈ ಅವರನ್ನು ವಿವಾಹಿತರಾಗಿ ಈಗ ಪತಿ ಜತೆ ಅಮೆರಿಕದ ನ್ಯೂಜೆರ್ಸಿ ಎಡಿಸನ್‌ನಲ್ಲಿರುವ ತನುಜಾ ಶೆಣೈ.
Related Articles
Advertisement
ಕಾನೂನು ಮೀರಬಾರದುಭಾರತದಲ್ಲಿ ನಾವು ಬೆಳೆದು ಬಂದ ರೀತಿಯೇ ಹಾಗಿದೆ. ಕಾನೂನು ಬಿಟ್ಟು ಬೇರೆಲ್ಲಕ್ಕೂ ಬೆಲೆ ಇದೆ ಎಂಬ ಲೇವಡಿಗೆ ವಿರುದ್ಧಾರ್ಥವಾಗಿ ಈಗ ಲಾಕ್ ಡೌನ್ ಯಶಸ್ವಿಯಾಗಿದೆ. ಇಷ್ಟು ವರ್ಷಗಳ ಬಳಿಕ ಸಮರ್ಥ ನಾಯಕತ್ವದಿಂದಾಗಿ ಭಾರತದಲ್ಲಿ ಇದು ಸಾಧ್ಯವಾಗಿದೆ. ಆದರೆ ಅಮೆರಿಕದಲ್ಲಿ ನಿರ್ಲಕ್ಷ್ಯ ಮಾಡಿದ ಕಾರಣ, ಲಾಕ್‌ಡೌನ್ ನಿಧಾನ ಮಾಡಿದ ಪರಿಣಾಮ ಎಲ್ಲರೂ ಅನುಭವಿಸುವಂತಾಗಿದೆ. ಕಾನೂನು ಮಾಡುವುದೇ ಪಾಲನೆಗಾಗಿ. ಪಾಲನೆ ಸಾಧ್ಯವಿಲ್ಲವಾದರೆ ಕಾನೂನನ್ನೇ ಬದಲಿಸಿ ಬಿಡಿ, ಮಾಡಿದ ಕಾನೂನನ್ನು ಅಗೌರವಿಸಬೇಡಿ ಎನ್ನುತ್ತಾರೆ. ಬದ್ಧತೆ ಬೇಕು
ಬೌದ್ಧಿಕ ಜೀವಿಗಳಾಗಿ ನಮಗೆ ಬದ್ಧತೆ ಬೇಕು. ಕುಡಿಯೋದು, ಕುಣಿಯೋದು ಇಷ್ಟೇ ಜೀವನ ಅಲ್ಲ. ಬದುಕಿದ್ದರೆ ಇನ್ನೂ ಮಾಡಬಹುದು. ಈಗ ಬದುಕಿಗಾಗಿ ಒಂದಷ್ಟು ತ್ಯಾಗಗಳನ್ನು ಮಾಡಬೇಕು. ನಮಗೆ ಸಾಮಾಜಿಕ ಕಳಕಳಿ ಇದೆ ಎಂದು ನಾವು ಬದುಕಿ ಇತರರನ್ನು ಬದುಕಿಸಿ ತೋರಿಸಬೇಕು. ಕೋವಿಡ್ ಬರದಂತೆ ತಡೆಯಲು ನಮ್ಮ ಕೊಡುಗೆ ನೀಡಬೇಕು. ಸರಕಾರ ಹೇಳದಿದ್ದರೂ ಕೆಲವು ಕಟ್ಟು ಪಾಡುಗಳನ್ನು ನಾವಾಗಿಯೇ ಪಾಲಿಸಬೇಕು. ಸರಕಾರ ಹೇಳಿದ್ದನ್ನಂತೂ ಕೇಳಲೇಬೇಕು. ಕೆಲಸದ ಪ್ರತಿಫಲ
ಈಗ ಭಾರತೀಯರು ನಿರ್ವಹಿಸಿದ ರೀತಿ ನಿಜಕ್ಕೂ ಪ್ರಶಂಸನೀಯ. ಅದರಲ್ಲೂ ಮೊದಲ ಸಾಲಿನಲ್ಲಿರುವ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ಸರಕಾರಿ ಅಧಿಕಾರಿಗಳು, ಪೊಲೀಸರು ಪ್ರಾಮಾಣಿಕತೆಯಿಂದ ಬದ್ಧತೆಯಿಂದ ಮಾಡಿದ ಕೆಲಸದ ಪ್ರತಿಫಲ ಎದ್ದು ಕಾಣುತ್ತಿದೆ.
– ತನುಜಾ ಶೆಣೈ
-ಪ್ರಕಾಶ್ ಶೆಣೈ, ನ್ಯೂಜೆರ್ಸಿ