ಕೋಟೇಶ್ವರ: ದೇವರನ್ನು ಒಲಿಸಿಕೊಳ್ಳಲು ಇರುವ ಅತ್ಯಂತ ಸುಲಭ ವಿಧಾನವೆಂದರೆ ಭಕ್ತಿಯಿಂದ ಆತನ ನಾಮ ಸ್ಮರಣೆ ಮಾಡುವುದು ಎಂದು ಭೀಮನಕಟ್ಟೆ ಮಠಾಧೀಶ ಶೀ ರಘುವರೇಂದ್ರ ತೀರ್ಥ ಸ್ವಾಮೀಜಿ ಹೇಳೀದರು.
ಕೋಟೇಶ್ವರದ ಶೀ ಕೋದಂಡ ರಾಮ ಮಂದಿರದಲ್ಲಿ ನಡೆಯುತ್ತಿರುವ ಶ್ರೀ ರಾಮ ಭಜನಾ ಸಪ್ತಾಹ ಪೂರ್ವಕ ಶ್ರೀ ರಾಮೋತ್ಸವದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.
ಹಿಂದಿನ ಯುಗಗಳಂತೆ ಕಲಿಯುಗದಲ್ಲಿ ಯಜ್ಞ ಯಾಗಾದಿಗಳು, ತಪಸ್ಸಿನ ಅಗತ್ಯವಿಲ್ಲ. ಆದರೆ ಹರಿ ನಾಮ ಸ್ಮರಿಸುವಾಗ ಅರ್ಥ ತಿಳಿದು ಭಕ್ತಿಯಿಂದ ಮಾಡಬೇಕು. ಶ್ರೀ ರಾಮ ನವಮಿಯಂತಹ ಪರ್ವ ದಿನಗಳಲ್ಲಿ ನಡೆಸುವ ಹರಿ ಸಂಕೀರ್ತನೆಗೆ ವಿಶೇಷ ಫಲವಿದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿ ಶ್ರೀ ಕೋದಂಡ ರಾಮ ಮಂದಿರ ಸಮಿತಿಯ ಪೂರ್ವಾಧ್ಯಕ್ಷ ಗೋಪಾಲ ಬಿಳಿಯ ಮಾತನಾಡಿ, ಶ್ರೀ ರಾಮೋತ್ಸವ ಪರಂಪರೆಯನ್ನು ವಿವರಿಸಿದರು.
ಸಭಾಧ್ಯಕ್ಷತೆಯನ್ನು ಮಂದಿರ ಆಡಳಿತ ಸಮಿತಿ ಅಧ್ಯಕ್ಷ ಹಲಸಿನ ಕಟ್ಟೆ ಶ್ರೀನಿವಾಸ ಮೂರ್ತಿ ವಹಿಸಿದ್ದರು. ಉಷಾ, ಕೋಟೇಶ್ವರ ಮೈತ್ರಿ ಟ್ರಸ್ಟ್ ನ ನಾಗರಾಜ ಧನ್ಯ, ಅಣ್ಣಾಜಿ ಬಿಳಿಯ ಉಪಸ್ಥಿತರಿದ್ದರು.
ಜಿ. ಸೀತಾರಾಮ ಧನ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೆ.ಜಿ. ವೈದ್ಯ ನಿರೂಪಿಸಿ, ಮಂದಿರ ಆಡಳಿತ ಸಮಿತಿ ಕಾರ್ಯದರ್ಶಿ ಕೆ. ಜಗದೀಶ ರಾವ್ ವಂದಿಸಿದರು.