Advertisement

ಜಿಲ್ಲೆಯಲ್ಲಿ ಒಟ್ಟು 1002 ನಾಮಪತ್ರ ಸಲ್ಲಿಕೆ

03:49 PM Dec 11, 2020 | Suhan S |

ರಾಮನಗರ: ಜಿಲ್ಲೆಯ ರಾಮನಗರ  ಮತ್ತು ಕನ ಕ ‌ಪುರ ಗ್ರಾಪಂಗೆ ಡಿ.22 ರಂದು  ನಡೆಯುವ ಮೊದಲ ಹಂತದಲ್ಲಿ ಒಟ್ಟು 56 ಗ್ರಾಪಂಗಳ 521 ಕ್ಷೇತ್ರಗಳ 971ಸದಸ್ಯ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಗುರು ವಾರ ರಾಮನಗರ ತಾಲೂಕಿನಲ್ಲಿ 562 ನಾಮಪತ್ರ ಮತ್ತು ಕನಕಪುರದಲ್ಲಿ 440 ನಾಮಪತ್ರಗಳು ಒಟ್ಟು 1002 ನಾಮಪತ್ರಗಳು ಸಲ್ಲಿಕೆಯಾಗಿವೆ.

Advertisement

ರಾಮನಗರದ ಭೈರಮಂಗಲ ಗ್ರಾಪಂ-27, ಕಂಚುಗಾರನಹಳ್ಳಿ-18, ಗೋಪಹಳ್ಳಿ-18, ಮಂಚನಾಯ್ಕನಹಳ್ಳಿ-55, ಬನ್ನಿಕುಪ್ಪೆ (ಬಿ)-33, ಹದ್ರ-38,ಬಿಳಗುಂಬ- 34, ಸುಗ್ಗನಹಳ್ಳಿ -31, ಮಾಯಗಾನಹಳ್ಳಿ -39, ಕೂಟಗಲ್‌ -35, ಅಕ್ಕೂರು -8, ಹುಲಿಕೆರೆಗುನ್ನೂರು -28, ಲಕ್ಷ್ಮೀಪುರ -20, ಕೈಲಾಂಚ-11,ಹುಣಸನಹಳ್ಳಿ -27, ಬನ್ನಿಕುಪ್ಪೆ (ಕೆ)-24, ವಿಭೂತಿಕೆರೆ-34, ಶ್ಯಾನಬೋಗನಹಳ್ಳಿ -30 ಸೇರಿ 562 ನಾಮಪತ್ರ ಸಲ್ಲಿಕೆಯಾಗಿವೆ. ಕನಕಪುರದ ಯಲಚವಾಡಿ ಗ್ರಾಪಂ-30, ಬನವಾಸಿ -23, ಕೊಟ್ಟಗಾಳು-17, ಚೀಲೂರು -26, ದೊಡ್ಡಮರಳ-22, ತೋಕಸಂದ್ರ -33, ತುಂಗಣಿ-16, ದೊಡ್ಡಮುದವಾಡಿ -15,ಚಿಕ್ಕಮುದವಾಡಿ-3,ಹಳ್ಳಿಮಾರನಹಳ್ಳಿ-9,ಸೋಮ ದ್ಯಾಪನಹಳ್ಳಿ -5, ಕಲ್ಲಹಳ್ಳಿ -7, ಚಾಕನ ಹಳ್ಳಿ -20, ಬೂದಿಕುಪ್ಪೆ -3, ಟಿ.ಬೇಕುಪ್ಪೆ-16, ನಾರಾಯಣಪುರ-11, ಶಿವನಹಳ್ಳಿ – 5, ಅಚ್ಚಲು -17, ಚೂಡಹಳ್ಳಿ -11, ಅರೆಕಟದೊಡ್ಡಿ -16, ಕಬ್ಟಾಳು -26, ಹೊನ್ನಿಗನಹಳ್ಳಿ-3, ಕಾಡಹಳ್ಳಿ -6, ಸಾತ ನೂರು -2, ಮರಳೆಬೇಕುಪ್ಪೆ -3, ದೊಡ್ಡಾಲಹಳ್ಳಿ -8, ಐ.ಗೊಲ್ಲಹಳ್ಳಿ -9, ಮಳ್ಳಹಳ್ಳಿ -7, ಹೂಕುಂದ -7, ಅರಕೆರೆ -23, ಹೇರಂದ್ಯಾಪನಹಳ್ಳಿ-5, ಕೊಳ ಗೊಂಡನಹಳ್ಳಿ -5, ಹೊಸದುರ್ಗ-1, ಹುಣಸನಹಳ್ಳಿ-1, ಬನ್ನಿಮಕೋಡ್ಲು -5ಸೇರಿ 440 ನಾಮಪತ್ರ ಸಲ್ಲಿಕೆಯಾಗಿವೆ.

ಜೆಡಿಎಸ್‌ ಬೆಂಬಲಿತರು ನಾಮಪತ್ರ ಸಲ್ಲಿಕೆ: ತಾಲೂಕಿನ ಮಾಯಗಾನಹಳ್ಳಿ ಗ್ರಾಪಂ ಕೇತೋಹಳ್ಳಿ ಸಾಮಾನ್ಯ ಕ್ಷೇತ್ರದಿಂದ ರಮ್ಯಾ, ಮಹಿಳಾ ಮೀಸಲು ಕ್ಷೇತ್ರದಿಂದ ಸುಮಿತ್ರ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು. ಜೆಡಿಎಸ್‌ ಮುಖಂಡ ಯೋಗೇಶ್‌ ಕುಮಾರ್‌, ಸಿ.ಎಸ್‌.ಜಯ ಕುಮಾರ್‌, ರಾಮಕೃಷ್ಣಯ್ಯ ಇದ್ದರು.

ನಾಮಪತ್ರ ಸಲ್ಲಿಕೆಗೆ ಮತದಾರರ ಪಟ್ಟಿಯೇ ಇಲ್ಲ :

ರಾಮನಗರ: ಗ್ರಾಮ ಪಂಚಾಯ್ತಿ ಚುನಾವಣೆಗೆಂದು ಹೆಚ್ಚುವರಿಯಾಗಿ ಸ್ಥಾಪನೆಯಾಗಿರುವ ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಅಧಿಕೃತವಾಗಿ ಸಿಗುತ್ತಿಲ್ಲ. ನಾಮಪತ್ರ ಸಲ್ಲಿಕೆ ಗೊಂದಲದ ಗೂಡಾಗಿದೆ. ಹೀಗಾಗಿ ಡಿ.11ರಂದು ನಾಮಪತ್ರ ಸಲ್ಲಿಕೆಯ ಸಮಯ ವನ್ನು 5 ಗಂಟೆಯವರೆಗೆ ವಿಸ್ತರಿಸಬೇಕು ಎಂದು ತಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಗಾಣಕಲ್‌ ನಟರಾಜು ಅವರು ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Advertisement

ಸಮಸ್ಯೆ ಏನು?: ವಿಧಾನಸಭೆ ಚುನಾವಣೆ ಯಲ್ಲಿ ಇದ್ದ ಮತದಾರರ ಪಟ್ಟಿಗೂ, ಗ್ರಾಮ ಪಂಚಾಯ್ತಿ ಚುನವಣೆಗೆ ಇರುವ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸವಿದೆ.ಕಾರಣಮತಗಟ್ಟೆಗಳು ವಿಭಾಗವಾಗಿವೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ, ಸೂಚಕರ ಕ್ರಮ ಸಂಖ್ಯೆಗಳು, ಭಾಗದ ಸಂಖ್ಯೆ ಗಳು ವ್ಯತ್ಯಾಸವಾಗಿವೆ. ಉದಾಹರಣೆಗೆ ಬನ್ನಿ ಕುಪ್ಪೆ (ಬಿ) ಗ್ರಾಮಪಂಚಾಯ್ತಿ ವ್ಯಾಪ್ತಿಯ ಬನ್ನಿ ಕುಪ್ಪೆ (ಬಿ), ಬಸವನಪುರ ಮತ್ತುಮುತ್ತುರಾಯನಪುರ ಸೇರಿ ಒಂದು ಕ್ಷೇತ್ರವಾಗಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ಇಲ್ಲಿ ಪ್ರತ್ಯೇಕ ಮತಪಟ್ಟಿ ಸೃಜಿಸಲಾಗಿದೆ. ಹಳೆ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆಗಳಿಗೂ, ಹೊಸ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆಗಳಿಗೂ ವ್ಯತ್ಯಾಸವಿದೆ. ಆದರೆ, ಪಂಚಾಯ್ತಿಗಳಲ್ಲಿ ಹೊಸ ಮತಪಟ್ಟಿ ಸಿಗುತ್ತಿಲ್ಲ. ಹಳೆ ಸಂಖ್ಯೆಯನ್ನೇ ನಮೂದಿಸಿ ನಾಮಪತ್ರ ಸಲ್ಲಿಸಿದರೆ, ಅದು ತಿರಸ್ಕೃತವಾಗುವ ಸಂಭವವಿದೆ. ಹೊಸ ಸಂಖ್ಯೆ ನಮೂದಿಸಲುಅಧಿಕೃತ ಮತಪಟ್ಟಿ ತಹಶೀಲ್ದಾರರ ಕಚೇರಿಯಲ್ಲೂ ಲಭ್ಯ ವಾಗುತ್ತಿಲ್ಲ ಎಂದು ಗಾಣಕಲ್‌ ನಟರಾಜು ದೂರಿದ್ದಾರೆ.

ಸಮಯ ವಿಸ್ತರಿಸಿ: ಈ ಸಂಬಂಧ ಅವರು ತಹ ಶೀಲ್ದಾರರ ಬಳಿ ಚರ್ಚಿಸಿದಾಗ ಕ್ರಮ ಸಂಖ್ಯೆ ವ್ಯತ್ಯಾಸವನ್ನು ಪರಿಶೀಲನೆ ವೇಳೆ ಪರಿಗಣಿಸುವುದಾಗಿ ಬಾಯಿ ಮಾತಿನಲ್ಲಿ ಹೇಳುತ್ತಾರೆ ಹೊರತು ಲಿಖಿತವಾಗಿ ಕೊಡುತ್ತಿಲ್ಲ. ಹೊಸ ಪಟ್ಟಿ ಇಂಗ್ಲಿಷಿನಲ್ಲಿದೆ, ಶುಕ್ರವಾರ ಕೊಡ್ತೀವಿ ಅಂತಾರೆ. ನಾಮ ಪತ್ರ ಸಲ್ಲಿಸಲು ಕೊನೆ ದಿನ ಇವರು ಪಟ್ಟಿಕೊಡೋದು ಯಾವಾಗ, ನಾಮಪತ್ರ ಸಲ್ಲಿಸೋದು ಯಾವಾಗ ಎಂದು ಪ್ರಶ್ನಿಸಿದ್ದಾರೆ.

ಹೀಗಾಗಿ ನಾಮಪತ್ರ ಸಲ್ಲಿಕೆಯ ಸಮಯವನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ. ಎರಡು ಮೂಲ ಪ್ರತಿ ತರುವುದು ಎಲ್ಲಿಂದ?: ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ತಲಾ ಮೂರು ಪ್ರತಿಗಳನ್ನು ಸಲ್ಲಿಸಬೇಕು. ಇಷ್ಟೂ ದಿನ 1 ಮೂಲ ಮತ್ತು ಎರಡು ಛಾಯಾ ಪ್ರತಿಗಳನ್ನುಕೊಟ್ಟರೆ ಸಾಕಾಗುತ್ತಿತ್ತು. ಈಗ ಎರಡು ಮೂಲ ಮತ್ತು 1 ಛಾಯಾ ಪ್ರತಿ ಕೊಡಬೇಕು ಎಂಬ ನಿಯಮವನ್ನು ಚುನಾವಣಾಧಿಕಾರಿಗಳು ಜಾರಿ ಮಾಡಿದ್ದಾರೆ. ಕಂದಾಯ ಪಾವತಿ ದೃಢೀಕರಣ, ಶೌಚಾಲಯ ದೃಢೀಕರಣ ಇತ್ಯಾದಿ ದಾಖಲೆಗಳನ್ನು ಎರಡೆರೆಡು ಮೂಲ ಪ್ರತಿಗಳನ್ನು ತರುವುದು ಎಲ್ಲಿಂದ ಎಂದು ಪ್ರಶ್ನಿಸಿದ್ದಾರೆ. ಜಾತಿಪ್ರಮಾಣ ಪತ್ರಕ್ಕೆ ಅಭ್ಯರ್ಥಿಗಳು ಅಲೆದು ಸಾಕಾಗುತ್ತಿದೆ. ದಾಖಲೆ ಪಡೆಯಲು ಪ್ರತಿ ಆಕಾಂಕ್ಷಿಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆಎಂದು ಗಾಣಕಲ್‌ ನಟರಾಜ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣಾಧಿಕಾರಿಗಳು ಈ ಎಲ್ಲಾ ಸಮಸ್ಯೆಯನ್ನು ಪರಿಗಣಿಸಿ ಸಮಯ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next