Advertisement

ಗಜೇಂದ್ರಗಡದಲ್ಲಿ 14 ಜನರಿಂದ ನಾಮಪತ್ರ

01:30 PM Dec 14, 2019 | Team Udayavani |

ಗಜೇಂದ್ರಗಡ: ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರ ನಿಯಂತ್ರಣ ನಿಯಮಗಳ ಅನ್ವಯ ನಡೆಯುತ್ತಿರುವ ಪಟ್ಟಣ ವ್ಯಾಪಾರ ಸಮಿತಿಗೆ ಡಿ. 21ರಂದು ಚುನಾವಣೆ ನಡೆಯಲಿದ್ದು, 14 ಜನ ಸ್ಥಳೀಯ ಬೀದಿಬದಿ ವ್ಯಾಪಾರಸ್ಥರು ಶುಕ್ರವಾರ ನಾಮಪತ್ರ ಸಲ್ಲಿಸಿದರು.

Advertisement

ಒಟ್ಟು 10 ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಸಾಮಾನ್ಯ ಕ್ಷೇತ್ರಕ್ಕೆ ಮಂಜುನಾಥ ವಡ್ಡರ, ರಾಜೇಸಾಬ ಕಟ್ಟಿಮನಿ, ಮಹಿಳಾ ಮೀಸಲು ಕ್ಷೇತ್ರಕ್ಕೆ ಪಾರುಬಾಯಿ ರಾಠೊಡ, ಕವಿತಾ ಹೆಬ್ಬಳ್ಳಿ, ಅಂಬಕ್ಕ ನಾಯಕ್‌, ಚೌಡಮ್ಮ ಯಲು, ಹಿಂದುಳಿದ ವರ್ಗ ಕ್ಷೇತ್ರಕ್ಕೆ ಯಮನಪ್ಪ ಮಾಂಡ್ರೆ, ರಾಘವೇಂದ್ರ ಹೂಗಾರ, ಅಲ್ಪಸಂಖ್ಯಾತರ ಕ್ಷೇತ್ರಕ್ಕೆ ಬಾಷೇಸಾನ ಕರ್ನಾಚಿ, ಅಲ್ಲಾಭಕ್ಷಿ ಮುಚ್ಚಾಲಿ, ಪರಿಶಿಷ್ಟ ಜಾತಿ ಕ್ಷೇತ್ರಕ್ಕೆ ಚಂದ್ರಶೇಖರ ರಾಠೊಡ, ಪರಿಶಿಷ್ಟ ಪಂಗಡ ಕ್ಷೇತ್ರಕ್ಕೆ ಹುಲ್ಲಪ್ಪ ತಳವಾರ, ವಿಕಲಚೇತನ ಕ್ಷೇತ್ರಕ್ಕೆ ಮಂಜುಳಾ ಪಮ್ಮಾರ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಡಿ. 14ರಂದು ಬೆಳಗ್ಗೆ 11ರಿಂದ 3ರ ವರೆಗೆ ನಾಮಪತ್ರ ಪರಿಶೀಲನೆ, ಸಿಂಧುವಾದ ನಾಮಪತ್ರ ಪ್ರಕಟಿಸಲಾಗುವುದು, ಡಿ. 15ರಂದು ಸಂಜೆ 5ರ ಒಳಗೆ ನಾಮಪತ್ರ ಹಿಂತೆಗೆದುಕೊಳ್ಳಬಹುದಾಗಿದೆ. ಡಿ. 21ರಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ. ನಂತರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ, ಚುನಾವಣಾ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾ ಅಧಿಕಾರಿ ಎಚ್‌.ವಿ. ನಾಗೋಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next