Advertisement

ಬಿಜೆಪಿಗೆ ಶಾಕ್ ನೀಡಿದ ಕಲಬುರಗಿ ಡಿಸಿಸಿ ಬ್ಯಾಂಕ್ ದಿಢೀರ್ ನಾಮನಿರ್ದೇಶನ

04:04 PM Dec 02, 2020 | keerthan |

ಕಲಬುರಗಿ: ಚುನಾವಣೆ ಮುಗಿದ ಮರು ದಿನ, ಗ್ರಾಮ ಪಂಚಾಯತಿ ಚುನಾವಣೆ ಘೋಷಣೆಯಾದ ದಿನವೇ ಅಂದರೆ ಕಳೆದ ನವೆಂಬರ್ 30ರಂದೇ ಇಲ್ಲಿನ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಗೆ ಸದಸ್ಯರೊಬ್ಬರನ್ನು ಸರ್ಕಾರ ನಾಮನಿರ್ದೇಶನಗೊಳಿಸಿದೆ.

Advertisement

ಬ್ಯಾಂಕ್ ನ ಮಾಜಿ ಅಧ್ಯಕ್ಷರು ಹಾಗೂ ಕಳೆದ ನ.29ರಂದು ನಡೆದ ಬ್ಯಾಂಕ್ ನ ನಿರ್ದೇಶಕರ ಆಯ್ಕೆಯ ಚುನಾವಣೆಯಲ್ಲಿ ಶಹಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಸಿದ್ರಾಮರೆಡ್ಡಿ ವಿ. ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.

ಕಾಂಗ್ರೆಸ್ ಪಕ್ಷದ ಬೆಂಬಲದಿಂದಲೇ ಈ ಹಿಂದೆ ಮೂರು ಸಲ ನಿರ್ದೇಶಕರಾಗಿ ಆಯ್ಕೆಯಾಗಿ ತದನಂತರ ಬ್ಯಾಂಕ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಸಿದ್ರಾಮರೆಡ್ಡಿ ಅವರನ್ನು ಸರ್ಕಾರ ನಾಮನಿರ್ದೇಶನಗೊಳಿಸಿರುವುದು ಎಲ್ಲರನ್ನು ಆಶ್ಚರ್ಯ ಮೂಡಿಸಿದೆ.

ಇದನ್ನೂ ಓದಿ:ಮೋದಿ ಸರ್ಕಾರದಿಂದ ರೈತ ಸಮುದಾಯಕ್ಕೆ ಅವಮಾನ: ಸಿದ್ದರಾಮಯ್ಯ

ಚುನಾವಣೆ ಫಲಿತಾಂಶ ರವಿವಾರ ರಾತ್ರಿ ಪ್ರಕಟಗೊಂಡಿದೆ. ಮರುದಿನ ಸೋಮವಾರ ಬೆಳಿಗ್ಗೆ 11ಕ್ಕೆ ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯತಿ ಚುನಾವಣಾ ದಿನಾಂಕ ಪ್ರಕಟಿಸಿ, ನೀತಿ ಸಂಹಿತೆಯನ್ನು ಜಾರಿಗೊಳಿಸಿತು. ಆದರೆ ಇದರ ನಡುವೆ ಅಷ್ಟು ತರಾತುರಿಯಲ್ಲಿ ಹೇಗೆ ನೇಮಕವಾಯಿತು ಎನ್ನುವುದು ಎಲ್ಲರನ್ನು ಗಾಬರಿಗೊಳಿಸಿದೆ. ಅಷ್ಟು ಗಡಿಬಿಡಿಯಲ್ಲಿ ನೇಮಕ ಮಾಡುವ ಔಚಿತ್ಯವಿತ್ತೇ, ಅದಲ್ಲದೇ ಚುನಾವಣೆಯಲ್ಲಿ ಕೇವಲ ಮೂರು ಮತಗಳನ್ನು ಪಡೆದು 16 ಮತಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿರುವಾಗ ಜತೆಗೆ ಕಾಂಗ್ರೆಸ್ ಪಕ್ಷದ ಜತೆಗೆ ಹೆಚ್ಚಾಗಿ ಗುರುತಿಸಿಕೊಂಡವರನ್ನು ಬ್ಯಾಂಕ್ ಸದಸ್ಯ ರನ್ನಾಗಿ ನಾಮನಿರ್ದೇಶನ ಮಾಡಿರುವುದು ಬಿಜೆಪಿ ಪಕ್ಷದ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Advertisement

ಬಿಜೆಪಿ ಬೆಂಬಲದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ ಒಂದು ಮತದ ಅಂತರದಿಂದ ಪರಾಭವಗೊಂಡವರನ್ನು ಇಲ್ಲವೇ ಶಾಸಕರೊಬ್ಬರನ್ನು ನಾಮನಿರ್ದೇಶನಗೊಳಿಸಿ ತದನಂತರ ಬಹುಮತ ಹೊಂದಿರುವ ಕಾಂಗ್ರೆಸ್   ಸದಸ್ಯರೆನ್ನಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ದಿವಾಳಿ ಹಿಡಿದಿರುವ ಬ್ಯಾಂಕ್ ನ ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ ಉದ್ದೇಶಿಸಿದೆ ಎನ್ನಲಾಗಿತ್ತು.‌ ಆದರೆ ಈ ನೇಮಕ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ ಅಲ್ಲದೇ ಮುಂದಿನ ದಿನಗಳಲ್ಲಿ ಏನು ಮಾಡಬೇಕೆಂಬುದಾಗಿ ಪಕ್ಷದ ವರಿಷ್ಠರು ಚಿಂತನೆಯಲ್ಲಿ ಮುಳುಗಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next