Advertisement

ಪದ್ಮ ಪ್ರಶಸ್ತಿಗಾಗಿ ಸಾಧಕರನ್ನು ನಾಮನಿರ್ದೇಶನ ಮಾಡಿ: ನಾಗರಿಕರಿಗೆ ಪ್ರಧಾನಿ ಮೋದಿ ವಿನಂತಿ

01:19 PM Jul 11, 2021 | Team Udayavani |

ಹೊಸದಿಲ್ಲಿ: ರಾಷ್ಟ್ರದ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗಾಗಿ ಸಾಧಕರನ್ನು ನಾಮ ನಿರ್ದೇಶನ ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂಚಿಸಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭಾರತವು ಅನೇಕ ಪ್ರತಿಭಾವಂತರನ್ನು ಒಳಗೊಂಡಿದೆ. ಅವರು ತಳಮಟ್ಟದಲ್ಲಿ ಅಸಾಧಾರಣ ಕೆಲಸ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಬಗ್ಗೆ ನಾವು ಹೆಚ್ಚಾಗಿ ಕೇಳಿರುವುದಿಲ್ಲ. ಈ ಸ್ಪೂರ್ತಿದಾಯಕ ವ್ಯಕ್ತಿಗಳ ಬಗ್ಗೆ ನಿಮಗೆ ತಿಳಿದಿದೆಯೇ? ನೀವು ಅವರನ್ನು ಪೀಪಲ್ಸ್ ಪದ್ಮಗೆ ನಾಮನಿರ್ದೇಶನ ಮಾಡಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಯಾರೇ ರಾಜಕಾರಣಿ ಆದ್ರೂ ಎಲ್ಲೇ ಮೀರಿ ವರ್ತಿಸಬಾರದು,ಡಿಕೆಶಿ ವರ್ತನೆ ವಿರುದ್ಧ ಕಟೀಲ್ ವಾಗ್ದಾಳಿ

ಸಪ್ಟೆಂಬರ್ 15ರೊಳಗೆ ಜನರು ನಾಮ ನಿರ್ದೇಶನ ಮಾಡಲು ಪ್ರಧಾನ ಮಂತ್ರಿ ಸೂಚನೆ ನೀಡಿದ್ದಾರೆ. ಹ್ಯಾಷ್ ಟ್ಯಾಗ್ ಪೀಪಲ್ಸ್ ಪದ್ಮ ಎಂಬ ಹ್ಯಾಷ್ ಟ್ಯಾಗ್ ನಡಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Advertisement

ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳು ದೇಶದ ಅತ್ಯುನ್ನತ ನಾಗರಿಕ ಪದ್ಮ ಪುರಸ್ಕಾರಗಳಾಗಿದೆ. 1954 ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next