Advertisement

ಹಸಿವಿನಿಂದ ಬಳಲುತ್ತಿರುವ ಅಲೆಮಾರಿ ಕುಟುಂಬಗಳಿಗೆ ಬೇಕಿದೆ ಆಹಾರ ಪಡಿತರದ ಭದ್ರತೆ

01:41 PM Apr 17, 2020 | keerthan |

ಗಂಗಾವತಿ: ಕೋವಿಡ್-19 ರೋಗವನ್ನು ತಡೆಯಲು ದೇಶದಾದ್ಯಂತ ವಿಧಿಸಿರುವ ಕರ್ಪ್ಯೂ ಹಿನ್ನೆಲೆಯಲ್ಲಿ ಕೂಲಿಕಾರ್ಮಿಕರರು ಬಡವರು ಹಾಗೂ ಅಲೆಮಾರಿ ಜನಾಂಗದ ಕುಟುಂಬಗಳು ಆಹಾರದ ಕೊರತೆಯಿಂದ ಬಳಲುತ್ತಿವೆ. ನಗರದ ಹಿರೇಜಂತಗಲ್ ಗೆ ಹೋಗುವ ರಸ್ತೆಯ ಖಾಲಿ ಜಾಗದಲ್ಲಿರುವ ಅಲೆಮಾರಿ ಬುಡ್ಗಜಂಗಮ, ಚಿಂದೊಳ್ಳಿ ಹಾಗು ಚನ್ನದಾಸರ ಅಲೆಮಾರಿ ಜನಾಂಗದ 101 ಕುಟುಂಬದಲ್ಲಿ ಸುಮಾರು 320ಕ್ಕೂ ಹೆಚ್ಚು ಜನರಿದ್ದು ಇವರಿಗೆ ಊಟ ಮಾಡಲು ಅಕ್ಕಿ ದವಸಧಾನ್ಯಗಳ ಕೊರತೆಯುಂಟಾಗಿದೆ.

Advertisement

ಕಳೆದ 22ದಿನಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆಯಿಂದ ಒಂದು ಕುಟುಂಬಕ್ಕೆ 5ಕೆಜಿ ಅಕ್ಕಿ 2ಕೆಜಿ ಗೋಧಿ ವಿತರಿಸಲಾಗಿತ್ತು. ಪುನಃ ಲಾಕ್ ಡೌನ್ ಮೇ.03 ರ ವರೆಗೆ ಮುಂದುವರಿಸಲಾಗಿದ್ದು ಅಲೆಮಾರಿಗಳಿಗೆ ಆಹಾರದ ಕೊರತೆಯಾಗಿದೆ.

ಇತ್ತೀಚೆಗೆ ಅಲೆಮಾರಿ ಕುಟುಂಬದವರು ಭಿಕ್ಷೆ ಬೇಡುವುದನ್ನು ನಿಲ್ಲಿಸಿ ಕೊಡ, ಕನ್ನಡಕ, ಹೆಲ್ಮೆಟ್, ಪಾತ್ರೆ ಸಾಮಾನು ಪ್ಲಾಸ್ಟಿಕ್ ಸಾಮಾನುಗಳನ್ನು ಮಾರಾಟ ಮಾಡಿ ಜೀವನ‌ ನಡೆಸುತ್ತಾರೆ. ಕರ್ಪ್ಯೂ ಇರುವುದರಿಂದ ವ್ಯಾಪಾರ ಮಾಡಲು ಆಗದೇ ಮನೆಯಲ್ಲಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಪ್ರತಿ ಕುಟುಂಬಕ್ಕೆ ಅಕ್ಕಿ ದವಸಧಾನ್ಯ ಕೊಡುವಂತೆ ಅಲೆಮಾರಿಗಳು ಮನವಿ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next