ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಟಿಶ್ಯು ಪೇಪರ್‌ನಲ್ಲಿ ಒಂದು ಬಜೆಟ್ ಬರೆದುಕೊಟ್ಟರಂತೆ. “ನಾನು ಇಷ್ಟು ಬಜೆಟ್ ಕೊಟ್ಟರೆ ಇದರಲ್ಲಿ ಸಿನಿಮಾ ಮಾಡಿಕೊಡುತ್ತೀರಾ’ ಎಂದರಂತೆ. ಎದುರಿದ್ದ ದಾನಿಶ್ ಸೇಠ್ ಹಾಗೂ ಸಾದ್ ಖಾನ್ ಆ ನಂತರ ಮಾತನಾಡಿ, ಒಂದು ಬಜೆಟ್
ಫಿಕ್ಸ್ ಆಗಿ ಸಿನಿಮಾ ಮಾಡಿದರಂತೆ. ಹೀಗೆ ಹೇಳಿಕೊಂಡರು ನಟ ದಾನಿಶ್ ಸೇಠ್ ಅವರು ಹೇಳಿದ್ದು “ಹಂಬಲ್ ಪೊಲಿಟಿಶಿಯನ್ ನೋಗ್‌ರಾಜ್’ ಚಿತ್ರದ ಬಗ್ಗೆ. ದಾನಿಶ್ ನಾಯಕರಾಗಿರುವ “ಹಂಬಲ್ ಪೊಲಿಟಿಶಿಯನ್ ನೋಗ್ ರಾಜ್’ ಚಿತ್ರವನ್ನು ಸಾದ್ ಖಾನ್ ನಿರ್ದೇಶಿಸಿದ್ದಾರೆ. ಡ್ಯಾನಿಶ್ ಹಾಗೂ ಸಾದ್, ಫೇಸ್‌ಬುಕ್ ಮೆಸೇಜ್ ಮೂಲಕ ಪುಷ್ಕರ್ ಅವರನ್ನು ಸಂಪರ್ಕಿಸಿ, ನಂತರ ಭೇಟಿಯಾದರಂತೆ. ಅದರಂತೆ, ಪುಷ್ಕರ್ ಸಿನಿಮಾ ಮಾಡಲು ಒಪ್ಪಿ ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಪುಷ್ಕರ್ ಜೊತೆಗೆ ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್‌ರಾವ್ ಕೂಡಾ ನಿರ್ಮಾಪಕರಾಗಿ ಸೇರಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ದಾನಿಶ್ ಸೇs…ಗೆ ಈ ಪಾತ್ರ ಹೊಸದಲ್ಲವಂತೆ. ಈಗಾಗಲೇ ಅವರು ಪೊಲಿಟಿಶಿಯನ್ ಆಗಿ ಒಂದು ಶೋ ನಡೆಸಿಕೊಂಡು ಬಂದಿದ್ದಾರೆ. ಕಳೆದ ಎಂಟು ವರ್ಷದಿಂದ ಮಾಡಿಕೊಂಡು ಬಂದಿದ್ದ ಆ ಪಾತ್ರ ಈ ದೊಡ್ಡ ತೆರೆಮೇಲೆ ಬರುತ್ತಿದೆ. “ಇದೊಂದು ರಾಜಕೀಯ ಹಿನ್ನೆಲೆಯ ಸಿನಿಮಾ. ರಾಜಕೀಯವನ್ನು ವಿಡಂಬನೆ ಮಾಡುತ್ತಾ ಕಾಮಿಡಿಯಾಗಿ ಈ ಸಿನಿಮಾ ಸಾಗುತ್ತದೆ. ರೆಡಿಯೋ ಮೂಲಕ ಆರಂಭವಾದ ನನ್ನ ಜರ್ನಿ ಈಗ ಸಿನಿಮಾವರೆಗೆ ಬಂದಿದೆ. ಈ ಚಿತ್ರದಲ್ಲಿ ಸಾಕಷ್ಟು ಹೊಸ ಅಂಶಗಳಿರುವುದರಿಂದ ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುವುದು ದಾನಿಶ್ ಮಾತು.
ನಿರ್ದೇಶಕ ಸಾದ್ ಖಾನ್ ಚಿತ್ರವನ್ನು ಕಷ್ಟಪಟ್ಟು ಇಷ್ಟಪಟ್ಟು ಮಾಡಿದ್ದಾಗಿ ಕನ್ನಡದಲ್ಲೇ ಕಷ್ಟದಿಂದ ಹೇಳಿದರು. ಉಳಿದಂತೆ ಸಿನಿಮಾವಾಗಲು ಕಾರಣವಾದ ನಿರ್ಮಾಪಕರಿಗೆ ಹಾಗೂ ಇಡೀ ಚಿತ್ರ ಅಚ್ಚುಕಟ್ಟಾಗಿ ಮೂಡಿಬರಲು ಕಾರಣವಾದ ತಮ್ಮ ತಂಡವನ್ನು ನೆನಪಿಸಿಕೊಂಡರು. ನಿರ್ಮಾಪಕ ಪುಷ್ಕರ್ ಅವರಿಗೆ ಚಿತ್ರ ಚೆನ್ನಾಗಿ ಮೂಡಿಬಂದ ಖುಷಿ. “ಚಿತ್ರ ಸಂಪೂರ್ಣ ಕೆಲಸ ಮುಗಿದಿದ್ದು, ಫೈನಲ್ ಕಟ್‌ಗೆ ತಂಡ ರೆಡಿಯಾಗಿದೆ. ಅಕ್ಟೋಬರ್ ಕೊನೆಯ ಅಥವಾ ನವೆಂಬರ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಇದೆ. ನಮ್ಮ ಬ್ಯಾನರ್‌ನಲ್ಲಿ ಬರುತ್ತಿರುವ ಮತ್ತೂಂದು ವಿಭಿನ್ನ ಸಿನಿಮಾವಿದು’ ಎನ್ನುವುದು ಪುಷ್ಕರ್ ಮಾತು.
ಚಿತ್ರದ ಮತ್ತೂಬ್ಬ ನಿರ್ಮಾಪಕ ರಕ್ಷಿತ್ ಶೆಟ್ಟಿಗೆ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವಿದೆ. ಅದಕ್ಕೆ ಕಾರಣ ಫನ್ನಿ ಅಂಶಗಳ ಜೊತೆಗೆ ಸಾಗುವ ಸೀರಿಯಸ್ ವಿಷಯಗಳು ಎನ್ನುವುದು ರಕ್ಷಿತ್ ಮಾತು. ಹೇಮಂತ್ ರಾವ್ ಕೂಡಾ “ಪೊಲಿಟಿಶಿಯನ್’ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ವಿಜಯ್ ಚೆಂಡೂರ್ ಕೂಡಾ ನಟಿಸಿದ್ದು, ಅವರ ಎಲ್ಲಾ ಎಕ್ಸೆ„ಟ್‌ಮೆಂಟ್ ಗಳನ್ನು ಕಟ್ ಮಾಡಿ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟನ್ನೇ ಮಾಡಿಸಿದ್ದಾಗಿ ಹೇಳಿಕೊಂಡರು.