Advertisement
ಇದು ನೋಕಿಯಾದ ಅತ್ಯಂತ ಪರಿಸರ ಸ್ನೇಹಿ ಫೋನ್ ಆಗಿದ್ದು, ಹೊಸ ಪರಿಸರ-ಸ್ನೇಹಿ ವಿನ್ಯಾಸವು ಶೇ 100ರಷ್ಟು ಮರುಬಳಕೆಯ ಅಲ್ಯೂಮಿನಿಯಂ ಫ್ರೇಂ ಮತ್ತು ಶೇ 65ರಷ್ಟು ಮರುಬಳಕೆಯ ಪ್ಲಾಸ್ಟಿಕ್ ಹೊಂದಿದೆ. ಅತ್ಯುತ್ತಮ ಪ್ಯೂರ್ವ್ಯೂ ಛಾಯಾಗ್ರಹಣ ಮತ್ತು 6.43 ಇಂಚಿನ ಅಮೊಲೆಡ್ ಪ್ಯೂರ್ ಡಿಸ್ಪ್ಲೇ ಸೇರಿದಂತೆ ಹಲವಾರು ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಅಲ್ಟ್ರಾ-ಟಫ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಡಿಸ್ ಪ್ಲೇ ರಕ್ಷಣೆಯಿದೆ.
ಈ ಸ್ಮಾರ್ಟ್ ಫೋನ್ ಅನ್ನು ಫಿನ್ಲೆಂಡಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಹೊಸ ಪರಿಸರ-ಸ್ನೇಹಿ ವಿನ್ಯಾಸವು ಶೇ 100ರಷ್ಟು ಮರುಬಳಕೆಯ ಅಲ್ಯೂಮಿನಿಯಂ ಫ್ರೇಮ್ ಮತ್ತು ಶೇ 65ರಷ್ಟು ಮರುಬಳಕೆಯ ಪ್ಲಾಸ್ಟಿಕ್ ಹೊಂದಿದೆ. ಕಡಿಮೆ ಪ್ಲಾಸ್ಟಿಕ್, ಕಡಿಮೆ ರಾಸಾಯನಿಕಗಳು, ಶೇ 100ರಷ್ಟು ಎಫ್ಎಸ್ ಸಿ ಪ್ರಮಾಣೀಕೃತವಾಗಿದೆ. ಇದು 3 ವರ್ಷಗಳ ವಾರಂಟಿ ಮತ್ತು 3 ಒಎಸ್ ಅಪ್ ಗ್ರೇಡ್ ನೀಡುತ್ತದೆ. ಈ ಫೋನ್ IP67 ಧೂಳಿನ ರಕ್ಷಣೆ ಒಳಗೊಂಡಿದೆ. 30 ನಿಮಿಷಗಳ ಕಾಲ 1ಮೀಟರ್ವರೆಗಿನ ನೀರಿನಲ್ಲಿ ಮುಳುಗಿಸಿದರೂ ನೀರು ಒಳಸೇರುವುದಿಲ್ಲ.
Related Articles
Advertisement
ಡಿಸ್ ಪ್ಲೆಯಲ್ಲಿ ಬೆರಳಚ್ಚು ಸ್ಕ್ಯಾನರ್ ಇದ್ದು, 33 ವ್ಯಾಟ್ಸ್ ವೇಗದ ಚಾರ್ಜರ್ ಹೊಂದಿದೆ. ಕ್ವಾಲ್ಕಾಂ ಸ್ನಾಪ್ ಡ್ರಾಗನ್ 695 ಪ್ರೊಸೆಸರ್ ಒಳಗೊಂಡಿದೆ.
ಬೆಲೆ ಮತ್ತು ಲಭ್ಯತೆ:
Nokia X30 5G 8ಜಿಬಿ ಮತ್ತು 256 ಜಿಬಿ ಮಾದರಿಗೆ ಸೀಮಿತ ಅವಧಿಗೆ 48,999 ರೂ. ಆರಂಭಿಕ ಬೆಲೆಯಿದ್ದು, ಬುಕಿಂಗ್ ಗೆ ಲಭ್ಯ ಇರಲಿದೆ. ಫೆ. 20 ರಿಂದ ಅಮೆಜಾನ್ ಮತ್ತು Nokia.com ತಾಣಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.
Nokia X30 5G 5799 ರೂ.ಗಳ ಮೌಲ್ಯದ ಆರಂಭಿಕ ಕೊಡುಗೆಯೊಂದಿಗೆ ಬರುತ್ತದೆ. ಪ್ರತಿ ಖರೀದಿಯೊಂದಿಗೆ ಇದರಲ್ಲಿ 33 ವ್ಯಾಟ್ಸ್ ವೇಗದ ಚಾರ್ಜರ್ ಮತ್ತು ನೋಕಿಯಾ ಕಂಫರ್ಟ್ ಇಯರ್ ಬಡ್ ನೀಡಲಾಗುವುದು ಎಂದು ಕಂಪೆನಿ ತಿಳಿಸಿದೆ.
ಇದನ್ನೂ ಓದಿ: ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಸರಣಿ: 24 ಗಂಟೆಗಳಲ್ಲಿ 1.40 ಲಕ್ಷ ಮುಂಗಡ ಬುಕ್ಕಿಂಗ್ ದಾಖಲೆ