Advertisement

ಸದ್ಯದಲ್ಲೇ ದೇಶಿಯ ಮಾರುಕಟ್ಟೆಗೆ ಬರಲಿದೆ ನೋಕಿಯಾ ಸ್ಮಾರ್ಟ್‌ ಟಿವಿ

09:56 AM Nov 20, 2019 | sudhir |

ಹೊಸದಿಲ್ಲಿ: ಮೊಬೈಲ್‌ ಮಾರುಕಟ್ಟೆಯಲ್ಲಿ ದಿನ ಬೆಳಗಾದರೆ ಒಂದಲ್ಲ ಒಂದು ಹೊಸ ಪ್ರಯೋಗಗಳು ನಡೆಯುತ್ತಲ್ಲೇ ಇರುತ್ತವೆ. ಇದೀಗ ಹೆಸರಾಂತ ಕಂಪೆನಿಯಾದ ನೋಕಿಯಾ ವಿನೂತನ ಚಿಂತನೆ ನಡೆಸಿದ್ದು, ಸದ್ಯದಲ್ಲೇ ದೇಶೀಯ ಮಾರುಕಟ್ಟೆಗೆ ಸ್ಮಾರ್ಟ್‌ ಟಿವಿಯನ್ನು ಪರಿಚಯಿಸಲಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.

Advertisement

ಮೊಬೈಲ್‌ ಕಂಪನಿಗಳು ಸ್ಮಾರ್ಟ್‌ ಟಿವಿಯನ್ನು ಪರಿಚಯಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಒನ್‌ಪ್ಲಸ್‌ ಸ್ಮಾರ್ಟ್‌ ಟಿವಿ ರಿಲೀಸ್‌ ಆಗಿದ್ದು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿತ್ತು. ಸದ್ಯ ಇದೇ ರೀತಿಯಲ್ಲಿ ಟಿವಿ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡಲು ನೋಕಿಯಾ ಸಂಸ್ಥೆ ಮುಂದಾಗಿದ್ದು, ಆಕರ್ಷಕ ಮಾದರಿಯಲ್ಲಿ ಟಿವಿಯನ್ನು ರೂಪುರೇಷೆ ಮಾಡಲಿದೆ.

ಹೆಚ್ಚಾದ ಆ್ಯಂಡ್ರಾಯ್ಡ್ ಫೋನ್‌ಗಳ ಭರಾಟೆಯಲ್ಲಿ ನೋಕಿಯಾ ಕಂಪನಿ ದೇಶದಲ್ಲಿ ತನ್ನ ಅಸ್ತಿತ್ವ ಬಹುತೇಕ ಕಳೆದುಕೊಂಡಿದ್ದು, ದಶಕದ ಹಿಂದಿನವರೆಗೂ ಭಾರೀ ಚಾಲ್ತಿಯಲ್ಲಿತ್ತು. ಈ ಹಿನ್ನಲೆ ತನ್ನ ಗ್ರಾಹಕ ಬಳಗವನ್ನು ಸೆಳೆಯುವ ಕಾರ್ಯತಂತ್ರವನ್ನು ಕಂಪೆನಿ ಹಾಕಿಕೊಂಡಿದ್ದು, ಸದ್ಯ ಕಂಪೆನಿಯಿಂದ ಹೊರಬಿದ್ದ ಮಾಹಿತಿ ಪ್ರಕಾರ ನೋಕಿಯಾ ಶೀಘ್ರದಲ್ಲೇ ಭಾರತದಲ್ಲಿ ಸ್ಮಾರ್ಟ್‌ ಟಿವಿ ರಿಲೀಸ್‌ ಮಾಡಲಿದೆ.

ಇ-ಕಾಮರ್ಸ್‌ನ ಹೆಸರಾಂತ ಸಂಸ್ಥೆ ಫ್ಲಿಪ್‌ಕಾರ್ಟ್‌ ಸಹಭಾಗಿತ್ವದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಟಿವಿ ಲಭ್ಯವಾಗಲಿದೆ. ಇನ್ನೂ ಈ ಟಿವಿ ಕುರಿತು ಕೆಲ ಫೀಚರ್ ಹೊರಬಿದ್ದಿದ್ದು, 50 ಹಾಗೂ ಅದಕ್ಕಿಂತ ಹೆಚ್ಚಿನ ಇಂಚಿನ ಸ್ಕ್ರೀನ್‌ ಇರುವ ನೋಕಿಯಾ ಸ್ಮಾರ್ಟ್‌ ಟಿವಿ ಆ್ಯಂಡ್ರಾಯ್ಡ್ 9.0 ಹೊಂದಿರಲಿದೆ.

ಜೆಬಿಎಲ್‌ ಸ್ಪೀಕರ್‌ ಈ ಟಿವಿಯಲ್ಲಿರಲಿದೆ. ಇನ್ನೂ ಬಿಡುಗಡೆಗೆ ದಿನಾಂಕ ನಿಗದಿ ಆಗದಿದ್ದರೂ, ಡಿಸೆಂಬರ್‌ನಲ್ಲಿ ಲಾಂಚ್‌ ಆಗಲಿದೆ ಎನ್ನುವ ಸುದ್ದಿ ಸದ್ಯ ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next