Advertisement

ಪೆಂಟಾ ಲೆನ್ಸ್‌ ಕೆಮರಾ ಹೊಂದಿರುವ ನೋಕಿಯಾ 9 ಪ್ಯೂರ್‌ ವ್ಯೂ

01:45 AM Jul 12, 2019 | Team Udayavani |

ನೋಕಿಯಾ ಕಂಪೆನಿಯು ಇತ್ತೀಚೆಗೆ ಹೊಸ ಹೊಸ ಶೈಲಿಯ ಸ್ಮಾರ್ಟ್‌ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಆ ಸಾಲಿಗೆ ಇನ್ನೊಂದು ಫೋನ್‌ ಸೇರ್ಪಡೆಯಾಗಿದೆ. ಅದುವೇ ಪೆಂಟಾ ಲೆನ್ಸ್‌ ಕೆಮರಾ ಹೊಂದಿರುವ ನೋಕಿಯಾ 9. ಸ್ನಾಪ್‌ಡ್ರಾಗನ್‌ 845 ಸೋಕ್‌ ಹೊಂದಿರುವ ನೋಕಿಯಾ 9 ಪ್ಯೂರ್‌ ವ್ಯೂ ಭಾರತದಲ್ಲಿ ಬಿಡುಗಡೆಯಾಗಿದೆ. 5 ಬ್ಯಾಕ್‌ ಕೆಮರಾಗಳನ್ನು ಹೊಂದಿರುವ ಒಂದು ವಿಶೇಷ ಶೈಲಿಯ ಫೋನ್‌ ಇದಾಗಿದ್ದು , ಎರಡು ಕೆಮರಾಗಳು 12 ಮೆಗಾಪಿಕ್ಸೆಲ್ ಆರ್‌ಜಿಬಿ ಸೆನ್ಸಾರ್‌ ಹೊಂದಿದೆ. ಉಳಿದ 3 ಕೆಮರಾಗಳೂ ಕೂಡ 12 ಮೆಗಾ ಪಿಕ್ಸೆಲ್ ಆಗಿದ್ದು ಮೋನೋಕ್ರೋಮ್‌ ಸೆನ್ಸಾರ್‌ನ್ನು ಹೊಂದಿದೆ ಹಾಗೂ ಇದರಲ್ಲಿ ಇನ್ನೂ ಹಲವಾರು ನೂತನ ವೈಶಿಷ್ಟ್ಯಗಳಿವೆ.

Advertisement

ಭಾರತದಲ್ಲಿ ನೋಕಿಯಾ 9 ಪ್ಯೂರ್‌ ವ್ಯೂ ಫೋನ್‌ ನ ಬೆಲೆ 49,990 ರೂ. ಆಗಿದ್ದು ‌ ಫ್ಲಿಪ್‌ಕಾರ್ಟ್‌ ಹಾಗೂ ನೋಕಿಯಾ ವೆಬ್‌ಸೈಟ್‌ಗಳ ಮೂಲಕ ಮಾರಾಟಕ್ಕೆ ಲಭ್ಯವಿದೆ. ಜುಲೈ 17ರ ಅನಂತರ ಎಲ್ಲ ರೀಟೈಲ್ ಮಾರಾಟಗಾರರಲ್ಲಿ ಲಭ್ಯವಾಗಲಿದೆ.

ಅವಕಾಶಗಳು

ಆ್ಯಂಡ್ರಾಯ್ಡ ಪೈ ಫೀಚರ್‌ನ್ನು ಹೊಂದಿರುವ ಈ ಫೋನ್‌ನಲ್ಲಿ ಇಂಟರ್‌ ಫೇಸ್‌ ಪ್ರೊ ಕೆಮರಾ ಇದೆ. ತೆಗೆಯುವ ಛಾಯಾಚಿತ್ರಗಳು ಉತ್ತಮ ಕ್ಲ್ಯಾರಿಟಿಯನ್ನು ಹೊಂದಿರಲಿವೆ. 5.99 ಇಂಚ್ ಉದ್ದವಿರುವ ಕ್ವಾಡ್‌ ಎಚ್ ಡಿ 1440/2960 ಮೆಗಾಪಿಕ್ಸೆಲ್ನ ಸ್ಕ್ರೀನ್‌ ಇದರಲ್ಲಿ ಇದೆ. ಫಿಂಗರ್‌ ಪ್ರಿಂಟ್ ಸೆನ್ಸಾರ್‌ ಕೂಡ ಇದರಲ್ಲಿ ಲಭ್ಯವಾಗಲಿದೆ. 6ಜಿಬಿ ರ್ಯಾಮ್‌ ಇದರಲ್ಲಿದೆ. ಫ್ರಂಟ್ ಕೆಮರಾ 20 ಮೆಗಾಫಿಕ್ಸೆಲ್ನದ್ದಾಗಿದೆ. ಡ್ಯುಯಲ್ ಸಿಮ್‌ ಹಾಕುವ ಅವಕಾಶವಿದ್ದು ನ್ಯಾನೋ ಸಿಮ್‌ ಆಗಿರಬೇಕು. ಇಂಟರ್‌ನಲ್ ಸ್ಟೋರೇಜ್‌ 128 ಜಿಬಿ ಆಗಿದೆ. 3,320 ಎಮ್‌ ಎಎಚ್‌ನ ಬ್ಯಾಟರಿ ದೀರ್ಘ‌ ಬಾಳಿಕೆ ಬರುತ್ತದೆ.
Advertisement

Udayavani is now on Telegram. Click here to join our channel and stay updated with the latest news.

Next