Advertisement

ಬಂದಿದೆ ನೋಕಿಯಾದ 48 ಮೆಗಾಪಿಕ್ಸೆಲ್‌ ಕೆಮರಾ ಫೋನ್‌

10:31 AM Sep 20, 2019 | Team Udayavani |

ಬೀಜಿಂಗ್‌: ಹಬ್ಬಗಳ ಸೀಸನ್‌ ಆರಂಭವಾಗುತ್ತಿರುವಂತೆಯೇ, ವಿವಿಧ ಕಂಪೆನಿಗಳು ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡತೊಡಗಿವೆ. ಮೊಬೈಲ್‌ ಮಾರುಕಟ್ಟೆಯಲ್ಲೂ ಪಾರಮ್ಯ ಸಾಧಿಸಲು ಯತ್ನಿಸುತ್ತಿರುವ ನೋಕಿಯಾ ಮೊಬೈಲ್‌ ತಯಾರಿಸುತ್ತಿರುವ ಎಚ್‌ಎಂಡಿ ಗ್ಲೋಬಲ್‌ ಕಂಪೆನಿ ಹೊಸ ನೋಕಿಯಾ 7.2 ಮೊಬೈಲ್‌ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Advertisement

48 ಮೆಗಾಪಿಕ್ಸೆಲ್‌ನ ಕೆಮೆರಾ ಹೊಂದಿರುವ ಈ ಫೋನ್‌ 4ಜಿಬಿ ರ್ಯಾಮ್‌ ಮತ್ತು 64 ಜಿಬಿ ರೋಮ್‌, 6ಜಿಪಿ ರ್ಯಾಮ್‌ ಮತ್ತು 64 ಹಿಬಿ ರೋಮ್‌ ಆವೃತ್ತಿಯಲ್ಲಿ ಲಭ್ಯವಿದೆ. ಇವುಗಳ ಬೆಲೆ ತಲಾ 18,599 ರೂ. ಮತ್ತು 19599 ರೂ. ಆಗಿದೆ. ಒಟ್ಟು ಎರಡು ಬಣ್ಣಗಳಲ್ಲಿ ಮೊಬೈಲ್‌ ಲಭ್ಯವಿದೆ. ಫೋನ್‌ನ ಹಿಂಭಾಗದಲ್ಲಿ ಮೂರು ಕೆಮರಾಗಳು ಇವೆ. ಇದರಲ್ಲಿ 48 ಮೆಗಾಪಿಕ್ಸೆಲ್‌ನ ಪ್ರೈಮರಿ ಕೆಮರಾ, 5 ಮೆಗಾಪಿಕ್ಸೆಲ್‌ನ ಡೆಪ್ತ್ ಸೆನ್ಸರ್‌, 8 ಮೆಗಾಪಿಕ್ಸೆಲ್‌ನ ವೈಡ್‌ ಆ್ಯಂಗಲ್‌ ಲೆನ್ಸ್‌ ಇರಲಿದೆ. ಸೆಲ್ಫಿà ಪ್ರಿಯರಿಗಾಗಿ ಮುಂಭಾಗದಲ್ಲಿ 20 ಮೆಗಾಪಿಕ್ಸೆಲ್‌ನ ಕೆಮರಾ ಇರಲಿದೆ. ಝೈಸ್‌ ಆಪ್ಟಿಕ್ಸ್‌ನ ಕೆಮರಾ ಇದಾಗಿದ್ದು, ಹೆಚ್ಚು ಸ್ಪಷ್ಟ ಚಿತ್ರಗಳನ್ನು ಕೊಡಲಿದೆ.

ವಿಶೇಷತೆಯೇನು?
ಆ್ಯಂಡ್ರಾಯಿಡ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಈ ಫೋನ್‌ ಆ್ಯಂಡ್ರಾಯಿಡ್‌ ಪೈ ಹೊಂದಿದ್ದು ಮುಂದೆ ಆ್ಯಂಡ್ರಾಯಿಡ್‌ 10 ಆವೃತ್ತಿಗೆ ಮುಂದಿನ ದಿನಗಳಲ್ಲಿ ಅಪ್ಡೆàಟ್‌ ಆಗಲಿದೆ.6.3 ಇಂಚಿನ ಎಫ್ಎಚ್‌ಡಿ ಡಿಸ್ಪೆ$Éà, ಗೊರಿಲ್ಲಾ ಗ್ಲಾಸ್‌ 3 ಸುರಕ್ಷತೆ, ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 660 ಪ್ರೊಸೆಸರ್‌, 3500 ಎಮ್‌ಎಚ್‌ನ ಬ್ಯಾಟರಿ ಹೊಂದಿದೆ. ಜತೆಗೆ ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಇದೆ. ಇದರೊಂದಿಗೆ ಗೂಗಲ್‌ ಅಸಿಸ್ಟೆನ್ಸ್‌ ಬಟನ್‌, ರಿಯರ್‌ ಫೇಸಿಂಗ್‌ ಫಿಂಗರ್‌ ಪ್ರಿಂಟ್‌ ಸೆನ್ಸರ್‌, ಎನ್‌ಎಫ್ಸಿ, ಬ್ಲೂಟೂತ್‌ 5.0 ಸೌಲಭ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next