ಇತ್ತೀಚೆಗೆ ನೋಕಿಯಾ 4.2 ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 10,990 ರೂ. ಇದ್ದು, 3 ಜಿಬಿ ರ್ಯಾಮ್ ಮತ್ತು 32 ಜಿಬಿ ಸ್ಟೋರೇಜ್ ಹೊಂದಿದೆ.ಕಪ್ಪು ಮತ್ತು ಪಿಂಕ್ ಸ್ಯಾಂಡ್ ಬಣ್ಣಗಳಲ್ಲಿ ಲಭ್ಯವಿದೆ.
ನೋಕಿಯಾ 4.2 ಜೂನ್ 10ರ ವರೆಗೆ ತನ್ನ ರಿಯಾಯಿ ತಿಯನ್ನು ಹೊಂದಿದೆ. ಗ್ರಾಹಕರು ಪ್ರೋಮೋ ಕೋಡ್‌ಗಳನ್ನು ಪಡೆಯಲು ಲಾಂಚ್ ಆಫರ್ ಅನ್ನು ಬಳಸಬೇಕು. ಅದಲ್ಲದೆ 3,500 ಮೌಲ್ಯದ ಉಚಿತ ಆರು ತಿಂಗಳ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಇದ್ದು, 10% ಕ್ಯಾಶ್ ಬ್ಯಾಕ್ ಅನ್ನು ಪಡೆಯಬಹುದು.
ನೋಕಿಯಾ 4.2 ಇದು ನೋಕಿಯಾ 5.1ಪ್ಲಸ್‌ನ ರೀತಿಯ ಲ್ಲಿಯೇ ಇದ್ದು 2. 5ಡಿ ನ್ಪೋರ್ಟ್ಸ್ ಗ್ಲಾಸ್ ಪ್ರೋಟೆಕ್ಷನ್‌ನ್ನು ಹೊಂದಿದೆ. ಇದು ವಾಟರ್ ಡ್ರೋಪ್ ಡಿಸ್ ಪ್ಲೇಗಳನ್ನು ಹೊಂದಿರುವುದಲ್ಲದೆ. 5.7 ಇಂಚ್ ಎಚ್‌ಡಿ ಡಿಸ್ ಪ್ಲೇ ಯನ್ನು ಕೂಡ ಹೊಂದಿದೆ.
ಇದರಲ್ಲಿ ಪವರ್ ಬಟನ್ಸ್ ಇರುವ ಕಡೆ ಹೊಸ ರೀತಿಯ ಬಟ ನ್ಸ್‌ಗಳನ್ನು ಹೊಂದಿದ್ದು ಅದಕ್ಕೆ ಎಲ್‌ಇಡಿ ಅಧಿಸೂಚಕ ಬೆಳ ಕನ್ನು ಅಳವಡಿಸಲಾಗಿದೆ. ಮೊಬೈಲ್‌ಗೆ ಯಾವುದಾದರೂ ನೋಟಿಫಿಕೇಶನ್ ಅಥವಾ ಇಮೇಲ್ ಅಥವಾ ಮಿಸ್ ಕಾಲ್ ಗಳು ಬಂದಲ್ಲಿ ಅದರಲ್ಲಿ ಒಂದು ಲೈಟ್ ಬರುವ ಮೂಲಕ ನಿಮ್ಮನ್ನು ಎಚ್ಚರಿಸುತ್ತದೆ.
ಎಡಭಾಗದಲ್ಲಿ ಒಂದು ಸಹಾಯಕ ಬಟ್‌ನ್‌ನ್ನು ಅಳವಡಿಸಲಾಗಿದ್ದು ಇದನ್ನು ಸ್ಪರ್ಶಿಸುವ ಮೂಲಕ ಅದನ್ನು ಉಪಯೋಗಿಸಬಹುದಾಗಿದೆ. 400 ಜಿಬಿ ವರೆಗೆ ಮೈಕ್ರೋ ಎಸ್‌ಡಿ ಕಾರ್ಡ್‌ಗಳನ್ನು ಮೀಸಲಿರಿಸಿಕೊಳ್ಳಬಹುದಾ ಗಿದೆ.
ಡ್ಯುಯಲ್ ಹಿಂಬದಿಯ ಕೆಮರಾವನ್ನು ಹೊಂದಿದ್ದು 13 ಮೆಗಾ ಪಿಕ್ಸೆಲ್ ಪ್ರಾಥಮಿಕ ಕೆಮರಾ ಹೊಂದಿದೆ. 2.2 ಅಪ ರ್ಚರ್ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಕೆಮರಾ ಒಳಗೊಂಡಿದೆ. ಮುಂಭಾಗದಲ್ಲಿ 8 ಮೆಗಾಫಿಕ್ಸೆಲ್ ಸೆಲ್ಫಿ ಕೆಮರಾ ಹೊಂದಿದ್ದು 3,000 ಎಂಎಎಚ್ ಬ್ಯಾಟರಿ ಇದೆ.