ನವದೆಹಲಿ: ಮಾರುಕಟ್ಟೆಯಲ್ಲಿ ದಶಕಗಳ ಹಿಂದೆ ಸಂಚಲನ ಮೂಡಿಸಿದ್ದ ನೋಕಿಯಾ ಸಂಸ್ಥೆಯು ಇತ್ತೀಚಿಗಷ್ಟೆ ಕೈರೋದಲ್ಲಿ ಬಿಡುಗಡೆ ಮಾಡಿದ್ದ ನೋಕಿಯಾ 2.3 ಸ್ಮಾರ್ಟ್‌ಫೋನ್ ಅನ್ನು ಈಗ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್ ಫೋನ್ ಅತ್ಯುತ್ತಮ ಗುಣಮಟ್ಟವನ್ನು ಹೊಂದಿದ್ದು ಪ್ರೊಸೆಸರ್, ಕ್ಯಾಮೆರಾ, ಬ್ಯಾಟರಿ ಫೀಚರ್ಸ್‌ಗಳಿಂದ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸುವ ಸೂಚನೆ ನೀಡಿದೆ.
2020 ರ ಮಾರ್ಚ್ 31 ರ ಒಳಗೆ ಈ ಸ್ಮಾರ್ಟ್ ಫೋನ್ ಖರೀದಿಸುವ ಗ್ರಾಹಕರಿಗೆ ಒಂದು ವರ್ಷದ ರೀಪ್ಲೇಸ್ ಮೆಂಟ್ ಸೌಲಭ್ಯ ಸಿಗಲಿದೆ. ಮಾತ್ರವಲ್ಲದೆ ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಆರಂಭಿಕ ಕೊಡುಗೆಗಳೂ ಲಭ್ಯವಾಗಲಿದೆ.
ನೊಕೀಯಾ 2.3 ವಿಶೇಷತೆಗಳೇನು ?
ನೊಕೀಯಾ 2.3 ಹಲವು ವಿಶೇಷ ಪೀಚರ್ ಗಳನ್ನು ಹೊಂದಿದ್ದು 6.1 ಇಂಚಿನ HD+ಡಿಸ್ ಪ್ಲೇ ಯನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ 720*1520 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ವಾಟರ್ ಡ್ರಾಪ್ ಶೇಪ್ ಡಿಸ್ ಪಲ್ಏ ಹೊಂದಿರುವುದರಿಂದ ವಿಡಿಯೋ ವನ್ನು ಉತ್ತಮ ಗುಣಮಟ್ಟದಲ್ಲಿ ವೀಕ್ಷಣೆ ಮಾಡಬಹುದು. ಇದು ಮೀಡಿಯಾ ಟೆಕ್ ಹಿಲಿಯೊ A22 ಕ್ವಾಡ್ ಕೋರ್ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು , ಪೂರಕವಾಗಿ ಅಂಡ್ರಾಯ್ಡ್ 9 ಪೈ ಓಎಸ್ ಬೆಂಬಲ ಪಡೆದಿದೆ. 2GB RAM ಮತ್ತು 32GB ಆಂತರಿಕ ಸ್ಟೋರೇಜ್ ಸಾಮಾರ್ಥ್ಯ ಹೊಂದಿದ್ದು, ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 400 GB ಯವರೆಗೂ ವಿಸ್ತರಿಸಬಹುದಾದ ಅವಕಾಶವಿದೆ.
ನೋಕಿಯಾ 2.3 ಡ್ಯುಯಲ್ ಕ್ಯಾಮೆರಾ ಸೆಟ್ ಅಪ್ ಹೊಂದಿದೆ. ರಿಯರ್ ಕ್ಯಾಮೆರ f/2.2 ಅಪಾರ್ಚರ್ ನೊಂದಿಗೆ 13 ಮೆಗಾಫಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮಾತ್ರವಲ್ಲದೆ ಸೆಕೆಂಡರಿ ಕ್ಯಾಮೆರ 2ಎಂಪಿ ಸೆನ್ಸಾರ್ ಅನ್ನು ಹೊಂದಿದೆ. ಮುಖ್ಯವಾಗಿ ಸೆಲ್ಫಿ ಕ್ಯಾಮೆರಾ 5 ಮೆಗಾಫಿಕ್ಸೆಲ್ ಸಾಮಾರ್ಥ್ಯ ಹೊಂದಿದೆ. ಎಲ್ ಇಡಿ ಫ್ಲ್ಯಾಶ್ ಸೌಲಭ್ಯ ಇದರೊಂದಿಗೆ ಲಭ್ಯ.
ಇತ್ತೀಚಿನ ನೋಕಿಯಾ ಫೋನ್ ಗಳಂತೆ, ನೋಕಿಯಾ 2.3 ಕೂಡ ಗೂಗಲ್ ಅಸಿಸ್ಟೆಂಟ್ ಬಟನ್ ಅನ್ನು ಹೊಂದಿದೆ. ಇದು 4,000mAh ಬ್ಯಾಟರಿ ಸಾಮಾರ್ಥ್ಯವನ್ನು ಹೊಂದಿದೆ. 5W ಚಾರ್ಜಿಂಗ್ ಸಪೋರ್ಟ್ ಒಳಗೊಂಡಿದೆ. ಇದರೊಂದಿಗೆ ಬ್ಲೂಟೂತ್ , ವೈಫೈ, ಜಿಪಿಎಸ್, ಹೆಡ್ ಫೋನ್ , ಜಾಕ್ ಮುಂತಾದವುಗಳು ಲಭ್ಯವಿದ್ದು ಕಪ್ಪು(ಚಾರ್ಕೊಲ್ ), ಹಸಿರು, ಸ್ಯಾಂಡ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.
ನೋಕಿಯಾ 2.3 ಬೆಲೆ: ಮೊದಲು ಕೈರೋದಲ್ಲಿ ಬಿಡುಗಡೆಯಾಗಿದ್ದ ಈ ಸ್ಮಾರ್ಟ್ ಫೋನ್ ಬೆಲೆ ಹೆಚ್ಚಿದೆಯೆಂದೂ ಭಾವಿಸಲಾಗಿತ್ತು. ಆದರೇ ಭಾರತದಲ್ಲಿ ಈ ಸ್ಮಾರ್ಟ್ ಫೊನ್ 8.199 ರೂ ಗಳ ಮೂಲ ಬೆಲೆಯನ್ನು ಹೊಂದಿದೆ. ಮಧ್ಯಮವರ್ಗದವರಿಗೆ ಕೈಗೆಟುಕ ಬೆಲೆಯಲ್ಲಿ ಲಭ್ಯವಿರುವುದು ನೋಕಿಯಾ 2.3 ಯ ವಿಶೇಷ.