Advertisement

ನಾಯ್ಸ್ ಕಲರ್‌ಫಿಟ್‌ ಸ್ಮಾರ್ಟ್‌ವಾಚ್‌ ಬಿಡುಗಡೆ; ನಾಲ್ಕು ಬಣ್ಣಗಳಲ್ಲಿ ಲಭ್ಯ

07:48 PM Feb 02, 2022 | Team Udayavani |

ನಾಯ್ಸ್ ಕಲರ್‌ಫಿಟ್‌ ಸಂಸ್ಥೆಯು ಐಕಾನ್‌ ಬುಜ್‌ ಹೆಸರಿನ ಹೊಸ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ.

Advertisement

1.69 ಇಂಚಿನ ಟಿಎಫ್ ಟಿ ಡಿಸ್ಪ್ಲೇ ಇರುವ ಈ ಸ್ಮಾಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಸಪೋರ್ಟ್‌ ಮಾಡಬಲ್ಲದ್ದಾಗಿದೆ.

ಜೆಟ್‌ ಬ್ಲ್ಯಾಕ್‌, ಮಿಡ್‌ನೈಟ್‌ ಗೋಲ್ಡ್‌, ಆಲಿವ್‌ ಗೋಲ್ಡ್‌ ಮತ್ತು ಸಿಲ್ವರ್‌ ಗ್ರೇ ಕಲರ್‌ನಲ್ಲಿ ವಾಚ್‌ ಲಭ್ಯ. ದಿನದ 14 ಗಂಟೆಯೂ ಹಾರ್ಟ್‌ಬೀಟ್‌, ಆಕ್ಸಿಜನ್‌ ಲೆವೆಲ್‌ ಸೇರಿ ಅನೇಕ ಆರೋಗ್ಯ ದಾಖಲೆಗಳನ್ನು ಇದು ಲೆಕ್ಕಾಚಾರ ಹಾಕಬಲ್ಲದ್ದು. ಇಮೇಲ್‌, ಕಾಲ್‌, ಮೆಸೇಜ್‌ನ ನೋಟಿಫಿಕೇಶನ್‌ ತೋರಿಸುವ ಇದರಲ್ಲಿ ಮ್ಯೂಸಿಕ್‌ ಕಂಟ್ರೋಲ್‌ ಆಯ್ಕೆಯೂ ಇದೆ.

230ಎಂಎಎಚ್‌ ಬ್ಯಾಟರಿ ಸಾಮರ್ಥ್ಯವಿರುವ ವಾಚ್‌ನ ಬೆಲೆ 4,999ರೂ. ಆರಂಭಿಕ ಆಫ‌ರ್‌ ಆಗಿ 3,499ರೂ.ಗೆ ಮಾರಾಟ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next