Advertisement

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

08:59 PM Dec 18, 2024 | Team Udayavani |

ನೋಯ್ಡಾ: ಶಿಕ್ಷಕರು ಬಳಸುವ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಇರಿಸಿದ್ದ ಆರೋಪದಲ್ಲಿ ನೋಯ್ಡಾದ ಶಾಲೆಯೊಂದರ ನಿರ್ದೇಶಕನನ್ನು ಬಂಧಿಸಲಾಗಿದೆ.

Advertisement

ಬಲ್ಬ್ ಸಾಕೆಟ್‌ನೊಳಗೆ ಕ್ಯಾಮರಾ ಇರಿಸಲಾಗಿದ್ದು, ಶೌಚಾಲಯ ಪ್ರವೇಶಿಸುತ್ತಿದ್ದ ಶಿಕ್ಷಕಿಯರ ವಿಡಿಯೋ ತುಣುಕುಗಳು ಶಾಲಾ ನಿರ್ದೇಶಕ ನವನೀಶ್‌ ಸಹಾಯ್‌ನ ಮೊಬೈಲ್‌, ಕಂಪ್ಯೂಟರ್‌ಗಳಲ್ಲಿ ನೇರ ಪ್ರಸಾರವಾಗುವಂತೆ (ಲೈವ್‌ ಸ್ಟ್ರೀಮಿಂಗ್‌) ವ್ಯವಸ್ಥೆ ಮಾಡಲಾಗಿತ್ತು. ಆದರೆ ಡಿ.10ರಂದು ಶೌಚಾಲಯ ಪ್ರವೇಶಿಸಿದ್ದ ಶಿಕ್ಷಕಿಯೊಬ್ಬರು ಈ ರಹಸ್ಯ ಕ್ಯಾಮೆರಾ ಪತ್ತೆ ಮಾಡಿ, ಪೊಲೀಸರಿಗೆ ದೂರು ಸಲ್ಲಿಸಿದ್ದರು. ತನಿಖೆ ವೇಳೆ ಕ್ಯಾಮೆರಾ ಅಳವಡಿಕೆ ಪತ್ತೆಯಾಗಿದ್ದು, ನವನೀಶ್‌ನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು

Advertisement

Udayavani is now on Telegram. Click here to join our channel and stay updated with the latest news.

Next