Advertisement

Noida: ಕಚೇರಿಯಲ್ಲಿ ವೃದ್ಧನನ್ನು ಕಾಯಿಸಿದ ಸಿಬ್ಬಂದಿಗೆ ನಿಂತು ಕೆಲಸ ಮಾಡೋ ಶಿಕ್ಷೆ

07:54 PM Dec 17, 2024 | Team Udayavani |

ನೋಯ್ಡಾ: ನೋಯ್ಡಾದ ಸರ್ಕಾರಿ ಕಚೇರಿಯೊಂದಕ್ಕೆ ಆಗಮಿಸಿದ್ದ ವೃದ್ಧರೊಬ್ಬರನ್ನು ಸುಖಾಸುಮ್ಮನೆ ಕಾಯಿಸಿದ್ದಕ್ಕಾಗಿ ಅಲ್ಲಿನ ಎಲ್ಲ ಸಿಬ್ಬಂದಿಗೆ ನಿಂತು ಕೆಲಸ ಮಾಡುವ ಶಿಕ್ಷೆ ವಿಧಿಸಲಾಗಿದೆ.

Advertisement

ಪ್ರಾಧಿಕಾರದ ವಸತಿ ವಿಭಾಗಕ್ಕೆ ಕಾರ್ಯನಿಮಿತ್ತ ವೃದ್ಧರೊಬ್ಬರು ಆಗಮಿಸಿದ್ದರು. ಸುಮಾರು 1 ಗಂಟೆ ಕಾದರೂ, ಸಿಬ್ಬಂದಿ ಅವರ ಸಮಸ್ಯೆ ಆಲಿಸುವ ಕೆಲಸ ಮಾಡಿರಲಿಲ್ಲ. ಈ ವರ್ತನೆಯನ್ನು ಸಿಸಿಟಿವಿ ಮೂಲಕ ಗಮನಿಸಿದ್ದ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಸಿಬ್ಬಂದಿಗೆ ವೃದ್ಧರ ಸಮಸ್ಯೆ ಪರಿಶೀಲಿಸುವಂತೆ ಸೂಚಿಸಿದ್ದರು. ಆದಾಗ್ಯೂ ಸಿಬ್ಬಂದಿಯ ನಿರ್ಲಕ್ಷ್ಯ ಮುಂದುವರಿದ ಕಾರಣ, ಕಚೇರಿಗೆ ಆಗಮಿಸಿದ ಸಿಇಒ ಸುಮಾರು 20 ನಿಮಿಷಗಳ ಕಾಲ ನಿಂತು ಕೆಲಸ ಮಾಡುವಂತೆ ಶಿಕ್ಷಿಸಿದ್ದಾರೆ. ಸದ್ಯ ಘಟನೆಯ ವೀಡಿಯೋ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next