ಮುಂಬೈ: ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ ಅವರ ಪುತ್ರ ಝೀಶಾನ್ ಸಿದ್ದಿಕಿ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಮಂಗಳವಾರ(ಅ.29) ನೋಯ್ಡಾದಲ್ಲಿ ಓರ್ವ ಯುವಕನನ್ನು ಬಂಧಿಸಿದ್ದಾರೆ.
ಶುಕ್ರವಾರ (ಅಕ್ಟೋಬರ್ 25) ಸಂಜೆ ಬಾಂದ್ರಾ ಪೂರ್ವ ಕ್ಷೇತ್ರದ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಗೆ ಯುವಕನೊಬ್ಬ ಕರೆ ಮಾಡಿದ್ದು ಈ ವೇಳೆ ಜೀವ ಬೆದರಿಕೆ ಹಾಕಿದ್ದಾನೆ ಈ ಕುರಿತು ಮುಂಬೈ ಪೊಲೀಸರಿಗೆ ದೂರು ನೀಡಲಾಗಿತ್ತು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕರೆ ಮಾಡಿದ ಯುವಕನ ಪತ್ತೆಗೆ ಬಲೆ ಬೀಸಿದ್ದರು ಅದರಂತೆ ಇಂದು (ಮಂಗಳವಾರ) ನೋಯ್ಡಾದಲ್ಲಿ ಮೊಹಮ್ಮದ್ ತಯ್ಯಬ್ ಅಲಿಯಾಸ್ ಗುರ್ಫಾನ್(20) ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ನಟ ಸಲ್ಮಾನ್ ಖಾನ್ ಹಾಗೂ ಝೀಶಾನ್ ಸಿದ್ದಿಕಿ ಇಬ್ಬರಿಗೂ ಬೆದರಿಕೆ ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಮೇಲೆ ಝೀಶಾನ್ ಸಿದ್ದಿಕಿ ಅವರನ್ನು ಕಾಂಗ್ರೆಸ್ನಿಂದ ಹೊರಹಾಕಲಾಯಿತು ಇದಾದ ಬಳಿಕ ಅಕ್ಟೋಬರ್ 25 ರಂದು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣವನ್ನು ಔಪಚಾರಿಕವಾಗಿ ಸೇರಿದರು.
ಇದನ್ನೂ ಓದಿ: Hyderabad: ರಸ್ತೆ ಬದಿಯ ಸ್ಟಾಲ್ನಿಂದ ಮೊಮೊಸ್ ತಿಂದು ಮಹಿಳೆ ಮೃತ್ಯು, 20 ಮಂದಿ ಅಸ್ವಸ್ಥ