ನೋಯ್ಡಾ: ಬಾರ್ ವೊಂದರಲ್ಲಿ ರಾಮಾಯಣದ ದೃಶ್ಯಗಳನ್ನು ಡಬ್ ಮಾಡಿ ದೊಡ್ಡ ಪರದೆ ಮೇಲೆ ಪ್ರಸಾರ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ಮೇಲೆ ಎಫ್ ಐ ಆರ್ ದಾಖಲಿಸಿ ಬಂಧಿಸಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ನೋಯ್ಡಾದ ʼಲಾರ್ಡ್ ಆಫ್ ದಿ ಡ್ರಿಂಕ್ಸ್ ರೆಸ್ಟೊ-ಬಾರ್ʼ ನಲ್ಲಿ ಈ ಘಟನೆ ನಡೆದಿದ್ದು, ದೊಡ್ಡ ಸ್ಕ್ರೀನ್ ನಲ್ಲಿ ರಾಮ ಹಾಗೂ ರಾವಣದ ಪಾತ್ರಗಳ ದೃಶ್ಯವನ್ನು ಪ್ಲೇ ಮಾಡಲಾಗಿದೆ. ಇಬ್ಬರ ನಡುವಿನ ಸಂಭಾಷಣೆಗೆ ಆಧುನಿಕ ಮ್ಯೂಸಿಕ್ ಗಳನ್ನು (ಡಿಜೆ) ಹಾಕಿ ದೃಶ್ಯವನ್ನು ಡಬ್ ಮಾಡಿ ಪ್ರಸಾರ ಮಾಡಲಾಗಿದೆ. ಇದನ್ನು ನೋಡಿದ ಬಾರ್ ನಲ್ಲಿದ್ದ ಜನರು ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ: ಶಕುನಿಗಳಿಂದ ಹಾಸನ ಟಿಕೆಟ್ ಹಂಚಿಕೆ ವಿಳಂಬ: H. D. Kumaraswamy ಬೇಸರ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವು ನೆಟ್ಟಿಗರು ಈ ಬಗ್ಗೆ ಕಿಡಿಕಾರಿದ್ದಾರೆ. ಇದು ರಾಮಾಯಣಕ್ಕೆ ಮಾಡಿದ ಅವಮಾನವೆಂದು ಹಲವರು ಹೇಳಿದ್ದಾರೆ. ಬಾರ್ ನ್ನು ಧ್ವಂಸಗೊಳಿಸುತ್ತೇವೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿ, ಹಾಡು ಪ್ಲೇ ಮಾಡಿ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿಕೊಂಡು ಆತನನನ್ನು ಬಂಧಿಸಲಾಗಿದೆ. ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.