Advertisement

ಜಿಲ್ಲೆಗೊಬ್ಬ ನೋಡೆಲ್‌ ಅಧಿಕಾರಿ ನೇಮಕ

07:45 AM Dec 06, 2017 | Team Udayavani |

ಬೆಂಗಳೂರು: ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶೈಕ್ಷಣಿಕ ಕಾರ್ಯಕ್ರಮವನ್ನು ರಾಜ್ಯದ ಶೈಕ್ಷಣಿಕ ಜಿಲ್ಲೆಗಳಲ್ಲಿ
ರಚನಾತ್ಮಕವಾಗಿ ಅನುಷ್ಠಾನಗೊಳಿಸಲು ಜಿಲ್ಲೆಗೊಬ್ಬ ನೋಡೆಲ್‌ ಅಧಿಕಾರಿಯನ್ನು ನೇಮಿಸಿ ಇಲಾಖೆ ಸುತ್ತೋಲೆ ಹೊರಡಿಸಿದೆ. 

Advertisement

ಸರ್ಕಾರದ ಎಲ್ಲಾ ಕಾರ್ಯಕ್ರಮದ ಪ್ರಗತಿ ಪರಿಶೀಲನೆ, ಅಧಿಕಾರಿಗಳ ಜಿಲ್ಲಾ ಪ್ರವಾಸದ ಮಾಹಿತಿ ಸಭೆ, ಜಿಲ್ಲಾಮಟ್ಟದ ಕಾರ್ಯಕ್ರಮ ಅನುಷ್ಠಾನದ ಉಸ್ತುವಾರಿಯನ್ನು ಈ ಅಧಿಕಾರಿಗಳಿಗೆ ವಹಿಸಲಾಗಿದೆ. ಇಲಾಖೆ ಆಯುಕ್ತರು, ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಯ ನೋಡಲ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಎಸ್‌ಎಸ್‌ಎ ನಿರ್ದೇಶಕರಿಗೆ ಬೆಳಗಾವಿ, ಧಾರವಾಡ ಮತ್ತು ಕಲಬುರಗಿ
ವಿಭಾಗದ ಅಪರ ಆಯುಕ್ತರಿಗೆ ಕ್ರಮವಾಗಿ ಬೀದರ್‌, ವಿಜಯಪುರ, ನಿರ್ದೇಶಕರ ವರ್ಗಕ್ಕೆ ಹಾಸನ, ಮಂಡ್ಯ, ಮೈಸೂರು ಹೀಗೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಒಂದೊಂದು ಜಿಲ್ಲೆಯ ಹಂಚಿಕೆ ಮಾಡಲಾಗಿದೆ.

ಆರ್‌ಟಿಐ ಪ್ರಕರಣದ ವಿಲೇವಾರಿಯ ನಿರ್ವಹಣೆ, ಶುಲ್ಕ ಜಮಾ ಮಾಡಿರುವ ದಾಖಲೆ, ಸಾರ್ವಜನಿಕ ಕುಂದುಕೊರತೆ, ಮಹಿಳಾ ಆಯೋಗ ಸೇರಿದಂತೆ ವಿವಿಧ ಆಯೋಗದಿಂದ ಬರುವ ಅರ್ಜಿಗಳ ನಿರ್ವಹಣೆಯ ಪರಿಶೀಲನೆ ಮಾಡಲು ಈ ಅಧಿಕಾರಿಗಳಿಗೆ ತಿಳಿಸಲಾಗಿದೆ. ಎಸ್ಸೆಸ್ಸೆಲ್ಸಿ ಫ‌ಲಿತಾಂಶದ ವಿಶ್ಲೇಷಣೆ ಹಾಗೂ ಕ್ರಿಯಾ ಯೋಜನೆಯ ಅನುಷ್ಠಾನ ಜತೆಗೆ 32 ಅಂಶಗಳ ಬಗ್ಗೆ ಗಮನ ಹರಿಸಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next