Advertisement

ನ್ಯಾಯಾಲಯದ ಮೇಲೆ ಒತ್ತಡ ಹೇರಲು ಯಾರಿಗೂ  ಅಧಿಕಾರವಿಲ್ಲ: ಸಿ.ಟಿ ರವಿ

07:31 PM Sep 13, 2019 | Team Udayavani |

ಶಿವಮೊಗ್ಗ: ಅಕ್ರಮ ಆಸ್ತಿ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಅವರನ್ನು ಇನ್ನೂ ಐದು ದಿನಗಳ ಕಾಲ ಇ.ಡಿ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯಾ ಆದೇಶ ನೀಡಿದೆ ಇದಕ್ಕೆ ನ್ಯಾಯಾಲಯದ‌ ಮೇಲೆ‌ ಒತ್ತಡ ಹೇರುವುದಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿಗೂ ಅಧಿಕಾರ ಇಲ್ಲ ಎಂದು ಸಚಿವ ಸಿ.ಟಿ ರವಿ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಡಿಯವರಿಗೆ ಇನ್ನು ಸಮಗ್ರ ಮಾಹಿತಿ ಸಿಕ್ಕಿಲ್ಲ ಅಂತ ಕಾಣುತ್ತದೆ ಸತ್ಯ ಹೇಳುವುದಕ್ಕೆ ಬಹಳ ಸಮಯ ಬೇಡ ಎಳೆದುಕೊಂಡು ಹೋಗುವುದು ಒಳ್ಳೆಯದಲ್ಲ . ಇರುವ ಸತ್ಯ ಹೇಳಿದ್ರೆ. ತನಿಖೆ ಪೂರ್ಣಗೊಳ್ಳುತ್ತೆ ಎಂದರು.

ವಿವಾದಿತ ದತ್ತಪೀಠ ವಿಚಾರ
ಈ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ತೀರ್ಪುವನ್ನು ಕಾಯ್ತಾ ಇದ್ದೇವೆ.ತೀರ್ಪು ಸತ್ಯದ ಪರವಾಗಿ ಬರಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ವಾಸ್ತವಿಕತೆ ವಿರುದ್ದವಾಗಿರುವಂತಹ ಮನವಿ ಸಲ್ಲಿಸಿತ್ತು..ನಾವು ಕೂಡ ಕೊರ್ಟ್ ನಲ್ಲಿ ಚಾಲೆಂಚ್ ಮಾಡಿದ್ದು ತೀರ್ಪು ಸತ್ಯದ ಪರವಾಗಿ ಬರುತ್ತದೆ..

ನೆರೆ ಪರಿಹಾರದ ವಿಚಾರ
ತಾಕತ್ತು ಕುಸ್ತಿ ಅಖಾಡದಲ್ಲಿ ಇರಬೇಕು.ನೆರೆ ಪರಿಹಾರ ವಿಚಾರದಲ್ಲಿ ವಿಶ್ವಾಸ ತೋರಿಸಬೇಕು ಪ್ರದಾನ ಮಂತ್ರಿಗಳು ಯಾವ ರಾಜ್ಯಕ್ಕೂ ಅನ್ಯಾಯ ಮಾಡುವುದಿಲ್ಲ. ಒಂದು ಸೀಟ್ ಗೆಲ್ಲಿಸಿದ ಕೇರಳ ಹಾಗೂ ತಮಿಳುನಾಡಿಗೆ ಅನ್ಯಾಯ ಮಾಡಿಲ್ಲ.ಇನ್ನು 26 ಸೀಟು ಗೆಲ್ಲಿಸಿದ್ದ ಕರ್ನಾಟಕಕ್ಕೆ ಅನ್ಯಾಯ ಮಾಡಲ್ಲ.ಎನ್ ಡಿ ಆರ್ ತಂಡ ನೀಡಿರುವ ವರದಿ ಮೇಲೆ ಮುಂದಿನ ವಾರದಲ್ಲಿ ಕೇಂದ್ರದಿಂದ ಅನುದಾನ ಬರುತ್ತೆ ಎಂದು ಸಿಎಂ ಹೇಳಿದ್ದಾರೆ..

Advertisement

Udayavani is now on Telegram. Click here to join our channel and stay updated with the latest news.

Next