Advertisement

ಮಾಜಿ ಸಿಎಂಗಳನ್ನು ದೇಶದ್ರೋಹಿಗಳೆಂದು ಯಾರೂ ಕರೆದಿಲ್ಲ: ಅಮಿತ್‌ ಶಾ

10:03 AM Jan 04, 2020 | Team Udayavani |

ನವದೆಹಲಿ: ಸದ್ಯ ಗೃಹಬಂಧನದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳನ್ನು ಯಾರೂ “ದೇಶದ್ರೋಹಿ’ಗಳು ಎಂದು ಕರೆದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಹೇಳಿದ್ದಾರೆ.

Advertisement

ಅಷ್ಟೇ ಅಲ್ಲ, ಅವರ ಬಿಡುಗಡೆ ಕುರಿತು ಆಯಾ ಕೇಂದ್ರಾಡಳಿತ ಪ್ರದೇಶದ ಆಡಳಿತವೇ ನಿರ್ಧಾರ ಕೈಗೊಳ್ಳಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶಾ, “ಫಾರೂಕ್‌ ಅಬ್ದುಲ್ಲಾ, ಒಮರ್‌ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರು ಕೆಲವೊಂದು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. 370ನೇ ವಿಧಿಯನ್ನು ಮುಟ್ಟಿದರೆ ದೇಶಕ್ಕೇ ಬೆಂಕಿ ಹೊತ್ತಿಕೊಳ್ಳಲಿದೆ ಎಂದಿದ್ದಾರೆ. ಇಂಥ ಹೇಳಿಕೆಗಳು ಪಾಕಿಸ್ತಾನಕ್ಕೆ 370ನೇ ವಿಧಿ ಬಗ್ಗೆ ಚರ್ಚಿಸಲು ಆಹ್ವಾನ ನೀಡಿದಂತೆ. ಈ ಕಾರಣಕ್ಕಾಗಿ, ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದ್ದು, ಇನ್ನೂ ಕೆಲವು ದಿನಗಳ ಕಾಲ ವಶದಲ್ಲಿ ಇರಲಿದ್ದಾರೆ’ ಎಂದಿದ್ದಾರೆ. ಜತೆಗೆ, ಕಾಶ್ಮೀರದಲ್ಲಿ ಸಹಜ ಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಎಂದಿನಂತೆ ಸಾಗಿದೆ ಎಂದೂ ಶಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next