Advertisement
ಕೆನಡಾ-ಅಮೆರಿಕನ್ ಕಾಸ್ಮಾಲಜಿಸ್ಟ್ ಜೇಮ್ಸ್ ಪೀಬಲ್ಸ್ ಮತ್ತು ಸ್ವಿಸ್ ಖಗೋಳ ವಿಜ್ಞಾನಿಗಳಾದ ಮೈಕಲ್ ಮೇಯರ್ ಮತ್ತು ಡಿಡಿಯೆರ್ ಕ್ವೆಲೊಸ್ ಅವರು ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
Related Articles
Advertisement
ಡಿ. 10ರಂದು ಪ್ರದಾನಡಿ. 10ರಂದು ಸ್ಟಾಕ್‌ಹೋಂನಲ್ಲಿ ನಡೆಯುವ ಸಮಾರಂಭದಲ್ಲಿ ನೊಬೆಲ್ ಪ್ರದಾನ ಮಾಡಲಾಗುತ್ತದೆ. ಮೂವರಿಗೆ ವೈದ್ಯ ನೊಬೆಲ್
ಕೋಶಗಳು ಹೇಗೆ ಆಮ್ಲಜನಕದ ಲಭ್ಯತೆಯನ್ನು ಗ್ರಹಿಸಿ, ಅದನ್ನು ಅಳವಡಿಸಿಕೊಳ್ಳುತ್ತವೆ ಎಂಬುದರ ಬಗ್ಗೆ ಸಂಶೋಧನೆ ನಡೆಸಿದ ವಿಜ್ಞಾನಿಗಳಾದ ವಿಲಿಯಂ ಜೆ. ಕೇಲಿನ್ ಜೂನಿಯರ್, ಪೀಟರ್ ಜೆ. ರ್ಯಾಟ್‌ಕ್ಲಿಫ್ ಮತ್ತು ಗ್ರೆಗ್ ಎಲ್. ಸೆಮೆನಾl ಅವರು ಈ ಬಾರಿಯ ವೈದ್ಯ ನೊಬೆಲ್ ಅನ್ನು ಹಂಚಿಕೊಂಡಿದ್ದಾರೆ. ಆಮ್ಲಜನಕದ ಮಟ್ಟದಲ್ಲಿ ಆಗುವ ಬದಲಾವಣೆಗಳಿಗೂ ಕೋಶಗಳು ಸ್ಪಂದಿಸುವಂತೆ ಮಾಡುವ ಆನುವಂಶಿಕ ಮೆಕ್ಯಾನಿಸಂ ಕುರಿತು ಈ ಮೂವರು ಅಧ್ಯಯನ ನಡೆಸಿದ್ದಾರೆ. ಇವರ ಸಂಶೋಧನೆಯಿಂದಾಗಿ ಕ್ಯಾನ್ಸರ್, ಅನೀಮಿಯಾ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂಥ ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದು ತೀರ್ಪುಗಾರರ ತಂಡ ಅಭಿಪ್ರಾಯಪಟ್ಟಿದೆ.