Advertisement

ಮೂವರು ವಿಜ್ಞಾನಿಗಳಿಗೆ ರಸಾಯನ ನೊಬೆಲ್‌

06:40 AM Oct 05, 2017 | Team Udayavani |

ಸ್ಟಾಕ್‌ಹೋಂ: ಅತ್ಯಂತ ಸೂಕ್ಷ್ಮವಾದ ಹಾಗೂ ಹೆಪ್ಪುಗಟ್ಟಿದ ಅಣುಗಳ ಚಿತ್ರವನ್ನು ಸುಲಭವಾಗಿ ಸೆರೆಹಿಡಿಯಬಲ್ಲಂಥ ಕ್ರಯೋ-ಎಲೆಕ್ಟ್ರಾನ್‌ ಮೈಕ್ರೋಸ್ಕೋಪಿಯನ್ನು ಕಂಡುಹಿಡಿದ ಮೂವರು ವಿಜ್ಞಾನಿಗಳು ಪ್ರಸಕ್ತ ಸಾಲಿನ ರಸಾಯನ ನೊಬೆಲ್‌ಗೆ ಪಾತ್ರರಾಗಿದ್ದಾರೆ.

Advertisement

ಸ್ವಿಜರ್ಲೆಂಡ್‌ನ‌ ಜಾಕ್ಲೆಸ್‌ ಡುಬೋಚೆಟ್‌, ಜರ್ಮನಿಯ ಜೋಷಿಮ್‌ ಫ್ರಾಂಕ್‌ ಮತ್ತು ಯು.ಕೆ.ಯ ರಿಚರ್ಡ್‌ ಹೆಂಡರ್‌ಸನ್‌ ಅವರೇ ಈ ಗೌರವಕ್ಕೆ ಪಾತ್ರರಾದವರು. ಈ ವಿಜ್ಞಾನಿಗಳ ತಂಡ ಮಾಡಿರುವ ಸಂಶೋಧನೆಯಿಂದಾಗಿ, ಈಗ ಜೈವಿಕ ಅಣುಗಳು ಚಲನೆಯ ಸ್ಥಿತಿಯಲ್ಲಿರುವಾಗಲೇ, ಅವುಗಳನ್ನು ಹೆಪ್ಪುಗಟ್ಟಿಸಿ, ಅವುಗಳ ಚಿತ್ರವನ್ನು ಸೆರೆಹಿಡಿಯಬಹುದಾಗಿದೆ. ಇದು ಶಾರೀರಿಕ ರಸಾಯನ ಮತ್ತು ಫಾರ್ಮಾಸುÂಟಿಕಲ್‌ನ ಅಭಿವೃದ್ಧಿಗೂ ನೆರವಾಗಲಿದೆ ಎಂದು ರಸಾಯನ ನೊಬೆಲ್‌ ಸಮಿತಿ ಹೇಳಿದೆ.

ಬ್ರೆಜಿಲ್‌ನಲ್ಲಿ ಝಿಕಾ ವೈರಸ್‌ ನವಜಾತ ಶಿಶುಗಳ ಮೆದುಳಿನ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಅನುಮಾನ ವ್ಯಕ್ತವಾದಾಗ, ಆ ವೈರಸ್‌ ಅನ್ನು ಪರೀಕ್ಷಿಸಲು ವಿಜ್ಞಾನಿಗಳು ಇದೇ ಎಲೆಕ್ಟ್ರಾನ್‌ ಮೈಕ್ರೋಸ್ಕೋಪಿ ತಂತ್ರಜ್ಞಾನದ ಮೊರೆ ಹೋದರು. ಈ ತಂತ್ರಜ್ಞಾನವು ಜೈವಿಕ ರಸಾಯನಶಾಸ್ತ್ರವನ್ನು ಹೊಸ ಯುಗದತ್ತ ಕೊಂಡೊಯ್ಯಿತು ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next