Advertisement

ಜಗತ್ತಿನ ಹಸಿವು ನೀಗಿಸಲು ಹೊರಟ WFP ಸಂಸ್ಥೆಗೆ ನೊಬೆಲ್‌ ಶಾಂತಿ ಪುರಸ್ಕಾರದ ಗರಿ

04:28 PM Oct 09, 2020 | Karthik A |

ಮಣಿಪಾಲ: ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ) ಸಂಸ್ಥೆ 2020 ರ ಶಾಂತಿ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದೆ. ನಾರ್ವೇಯ ನೊಬೆಲ್ ಸಮಿತಿ ಅಧ್ಯಕ್ಷ ಬೆರಿಟ್ ರೈಸ್ ಆಂಡರ್ಸನ್ ಅವರು ಶಾಂತಿ ನೊಬೆಲ್ ಪ್ರಶಸ್ತಿಯನ್ನು ಶುಕ್ರವಾರ ಪ್ರಕಟಿಸಿದ್ದಾರೆ. 2019 ರಲ್ಲಿ 88 ದೇಶಗಳಿಂದ ಸುಮಾರು 97 ಮಿಲಿಯನ್ ಜನರು ವಿಶ್ವ ಆಹಾರ ಕಾರ್ಯಕ್ರಮದಿಂದ ಪ್ರಯೋಜನ ಪಡೆದುಕೊಂಡಿದ್ದು ಈ ಹಿನ್ನೆಲೆಯಲ್ಲಿ ಈ ಸಂಸ್ಥೆ ಅರ್ಹವಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ.

Advertisement

ಈ ವರ್ಷ ಶಾಂತಿ ನೊಬೆಲ್ ಪ್ರಶಸ್ತಿಗಾಗಿ 318 ನಾಮನಿರ್ದೇಶನಗಳು ಬಂದವು. ಇದರಲ್ಲಿ 211 ವ್ಯಕ್ತಿಗಳು ಮತ್ತು 107 ಸಂಸ್ಥೆಗಳು ಸೇರಿದ್ದವು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರೂ ಇದೆ ಎಂದು ವರದಿಯಾಗಿದೆ.

ಡಬ್ಲ್ಯುಎಫ್‌ಪಿ ಕಾರ್ಯಕ್ರಮವು ಹಸಿವನ್ನು ನಿರ್ಮೂಲನೆ ಮಾಡಲು ಮತ್ತು ವಿಶ್ವಾದ್ಯಂತ ಆಹಾರ ಸುರಕ್ಷತೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತಿರುವ ದೊಡ್ಡ ಸಂಸ್ಥೆಯಾಗಿದೆ. ಕೋವಿಡ್‌ ಯುಗದಲ್ಲಿ ವಿಶ್ವದಾದ್ಯಂತ ಅಗತ್ಯವಿರುವವರಿಗೆ ಆಹಾರ ಮತ್ತು ಸಹಾಯ ಮಾಡುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಉಲ್ಲೇಖನೀಯ. ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ವಿಶ್ವ ಆಹಾರ ಕಾರ್ಯಕ್ರಮದ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಕೋವಿಡ್‌ ಬಳಿಕ ಬಡತನದ ಪ್ರಮಾಣ ಹೆಚ್ಚಾಗಿದ್ದು, ಹಸಿವಿನೊಂದಿಗೆ ಹೋರಾಡುವ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕೋವಿಡ್‌ಗೆ ಲಸಿಕೆ ಲಭ್ಯವಿಲ್ಲದಿದ್ದರೂ ಜನರಿಗೆ ಆಹಾರವು ಅತ್ಯುತ್ತಮ ಲಸಿಕೆ ಎಂಬುದು ಸಂಸ್ಥೆ ಅಭಿಪ್ರಾಯ.

ನೊಬೆಲ್ ಪಡೆಯುವ ಮೂಲಕ ತನ್ನ ಸಿಬಂದಿಯ ಕಾರ್ಯವನ್ನು ಗುರುತಿಸಲಾಗಿದೆ ಎಂದು ವಿಶ್ವ ಆಹಾರ ಕಾರ್ಯಕ್ರಮ ಹೇಳಿದೆ. ಇದು 100 ದಶಲಕ್ಷಕ್ಕೂ ಹೆಚ್ಚು ಹಸಿದ ಮಕ್ಕಳು ಸೇರಿದಂತೆ ಎಲ್ಲರಿಗೂ ಸಹಾಯ ಮಾಡಲು ತನ್ನ ಸಂಪೂರ್ಣ ಪರಿಶ್ರಮದ ಮೂಲಕ ಹೋರಾಡಿದೆ.

Advertisement

ಏನಿದು ಡಬ್ಲ್ಯುಎಫ್‌ಪಿ ?
ವಿಶ್ವ ಆಹಾರ ಕಾರ್ಯಕ್ರಮವು ವಿಶ್ವಸಂಸ್ಥೆಯ ಆಹಾರ ಕಾರ್ಯಕ್ರಮಕ್ಕೆ ಸಂಬಂಧಿಸಿದ ಒಂದು ಸಂಸ್ಥೆಯಾಗಿದೆ. ಇದು ತೀರಾ ಬಡತನದಲ್ಲಿರುವವರಿಗೆ ಮತ್ತು ಅಗತ್ಯವಿರುವವರಿಗೆ ಆಹಾರವನ್ನು ನೀಡುತ್ತದೆ. ಆಹಾರ ಭದ್ರತೆಯನ್ನು ಉತ್ತೇಜಿಸುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂಘಟನೆಯನ್ನು 1961ರಲ್ಲಿ ರಚಿಸಲಾಯಿತು.

 

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next