Advertisement

ನೋಬೆಲ್‌ ಪ್ರಶಸ್ತಿ ಕನ್ನಡ ಭಾಷೆಗೇ ಬರಲಿ: ಡಾ|ಎಚ್‌.ಎಂ. ಮಹೇಶ್ವರಯ್ಯ

10:14 AM May 27, 2020 | sudhir |

ಶಿವಮೊಗ್ಗ: ಸುದೀರ್ಘ‌ ಇತಿಹಾಸವುಳ್ಳ ನಮ್ಮ ಕನ್ನಡ ಭಾಷೆ ವಿಶ್ವದಲ್ಲಿಯೇ ಅನರ್ಘ್ಯ ಸ್ಥಾನಮಾನ ಹೊಂದಿದೆ. ಭಾರತದ ಯಾವುದೇ ಭಾಷೆಯ ಸಾಹಿತ್ಯಕ್ಕೆ ನೋಬೆಲ್‌ ಪ್ರಶಸ್ತಿ ಬರುವುದಾದರೆ ಅದು ಕನ್ನಡಕ್ಕೇ ಬರಬೇಕೆಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ| ಎಚ್‌.ಎಂ. ಮಹೇಶ್ವರಯ್ಯ ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ವತಿಯಿಂದ ಅಂತರ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಆನ್ ಲೈನ್‌ ಮೂಲಕ ಕನ್ನಡ ಸಾಹಿತ್ಯ-ಸಂಸ್ಕೃತಿ ಸಂಭ್ರಮ
ಕಾರ್ಯಕ್ರಮವನ್ನು ಕಲಬುರಗಿಯ ತಮ್ಮ ಮನೆಯಿಂದಲೇ ತಮ್ಮ ಪತ್ನಿ ಡಾ| ರಾಜೇಶ್ವರಿ ಅವರ ಜೊತೆಗೂಡಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

Advertisement

ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡದಲ್ಲಿ ಎಲ್ಲೂ ಸಿಗದ ಅನೇಕ ಅಮೂಲ್ಯ ಶಾಸನಗಳು ಸಿಕ್ಕಿರುವುದು ಹೆಮ್ಮೆಯ ವಿಚಾರವಾಗಿದೆ. ನಮ್ಮ ಸಾಹಿತಿಗಳು, ಕವಿಗಳು, ವಿದ್ವಾಂಸರು ಪ್ರಾಚೀನ ಕಾಲದಿಂದ ನವೋದಯದವರೆಗೆ ಅನೇಕ ಸಾಹಿತ್ಯ ಕೃಷಿ ಮಾಡಿದ್ದಾರೆ. ಅಂತಹ ಶ್ರೇಷ್ಠ ಕನ್ನಡ ಸಾಹಿತ್ಯ ಪರಂಪರೆಯ ಕುರಿತು ಅಧ್ಯಯನವನ್ನು ನಮ್ಮ ಯುವ ಸಮೂಹ ಮಾಡಬೇಕಿದೆ ಎಂದರು.

ಸುದೀರ್ಘ‌ವಾದ ಅಧ್ಯಯನ, ಸೃಜನಶೀಲ ಚಟುವಟಿಕೆಗಳ ಮೂಲಕ ಮತ್ತಷ್ಟು ಸಾಹಿತ್ಯ ಕೃಷಿ ಮಾಡಲು ಪ್ರೇರಣಾ ಶಕ್ತಿಯಾಗಿ ನಿಲ್ಲಲಿದೆ. ಇಡೀ ಭಾರತದ ಕೆಲವೇ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯವೂ ಒಂದು. ಇಂದು ವಿಶ್ವವಿದ್ಯಾಲಯ ಆಧುನಿಕ ತಂತ್ರಜ್ಞಾನದೊಂದಿಗೆ ಹೆಮ್ಮರವಾಗಿ ಬೆಳೆದು ನಿಂತಿದ್ದು, ಅನೇಕ ಸಾಹಿತ್ಯ, ಸಂಶೋಧನಾ ಕಾರ್ಯ ನಡೆಯುತ್ತಿವೆ. ಮುಂದಿನ ಹತ್ತು ವರ್ಷದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ನೋಬೆಲ್‌ ಪ್ರಶಸ್ತಿ ಬರುವುದು ಖಚಿತ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ| ಹಂ.ಪಾ.
ನಾಗರಾಜಯ್ಯ ಮಾತನಾಡಿ, ನಾಲ್ಕು ಗೋಡೆಗಳ ನಡುವೆ ಸೀಮಿತವಾಗಿ ನಮ್ಮ ಮನಸ್ಸು ಮುದುಡಿಕೊಂಡಿದೆ ಎನ್ನುವಾಗ

ಆನ್ ಲೈನ್‌‌ ಮೂಲಕ ಅಂತಹ ಸೃಜನಶೀಲ ಮನಸ್ಸುಗಳನ್ನು ಅರಳಿಸುವ ಹಾಗೂ ಒಂದೆಡೆ ಸೇರಿಸುವ ಕಾರ್ಯ ಶ್ಲಾಘನೀಯವಾದದ್ದು. ನಾವು ಇದುವರೆಗೆ ಓದಿ ಅಧ್ಯಯನ ಮಾಡಿದ ರೀತಿ ಬದಲಾಗಿದೆ. ಹೊಸ ಕಾಲದ ಸವಾಲುಗಳಿಗೆ ನಾವು ಸಜ್ಜಾಗಬೇಕಿದೆ. ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಆಧುನಿಕತೆಯ ಮೂಲಕ ನಾವು ಸವಾಲುಗಳನ್ನು ಸ್ವೀಕರಿಸಿ
ಬೆಳೆಯಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಡಾ| ಕಮಲಾ ಹಂಪನಾ, ಡಾ| ರಾಜೇಶ್ವರಿ
ಮಹೇಶ್ವರಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಅಧ್ಯಕ್ಷ ಡಿ.ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭದ್ರಾವತಿ ಸರ್‌ ಎಂ.ವಿ. ಕಾಲೇಜಿನ ವಿದ್ಯಾರ್ಥಿ ಮಂಜಾನಾಯ್ಕ, ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ
ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಎಸ್‌, ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿನಿ ದಿವ್ಯಶ್ರೀ ಕಥಾ ವಾಚನ ಮಾಡಿದರು.

ರಿಪ್ಪನ್‌ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಸಿಂಧು, ಕುವೆಂಪು ವಿವಿ ವಿದ್ಯಾರ್ಥಿನಿ ಶೃಂಶ್ರೀ, ಸಹ್ಯಾದ್ರಿ
ಕಲಾ ಕಾಲೇಜಿನ ವಿದ್ಯಾರ್ಥಿ ಅಭಿನಂದನ, ರವಿ ಪೂಜಾರಿ, ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚೈತ್ರಾ ಕೆ.ಎಂ. ಪ್ರಬಂಧ
ಮಂಡಿಸಿದರು. ರಿಪ್ಪನ್‌ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಎನ್‌.ಪಿ, ಬೆಂಗಳೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಬೆಳಗುಶ್ರೀ ನೆಲ್ಲಿಕಟ್ಟೆ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ಸಂದೀಪ, ಸಿಂಚನಾ, ಹೊಸನಗರ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿನಿ ರಂಜನಿ ಎಚ್‌.ಜಿ, ಭದ್ರಾವತಿ ಸರ್‌ ಎಂ.ವಿ. ಕಾಲೇಜಿನ ವಿದ್ಯಾರ್ಥಿನಿ ಲಕ್ಷ್ಮೀ, ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿ ಭರತ್‌ ಕವನ ವಾಚನ ಮಾಡಿದರು. ಭದ್ರಾವತಿ ಸರ್‌ ಎಂ.ವಿ. ಕಾಲೇಜಿನ ವಿದ್ಯಾರ್ಥಿನಿ ಶಹಿದಾ ಶಾಹರಿ ಹೇಳಿದರು. ಕುವೆಂಪು ವಿವಿ ವಿದ್ಯಾರ್ಥಿ ಹರ್ಷ ಸಿ.ಎಂ., ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಸಂಗೀತಾ, ವಿಕಾಸ ಕಾಲೇಜಿನ ನಿಖೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next