Advertisement
ನೀವೆಲ್ಲಾ ಲಾಕ್‌ಡೌನ್ ಅಂತ ಏನೇನೋ ಹೊಸ ರುಚಿ ಟ್ರೈ ಮಾಡ್ತಿದ್ದೀರಲ್ಲ, ನಮ್ಮನೇಲಿ ಅದೇ ಉಪ್ಪಿಟ್ಟು, ಅದೇ ಚಿತ್ರಾನ್ನ. ಆದ್ರೆ ಬೇರೆ ವಿಧಿ ಇಲ್ಲ. ಮೊನ್ನೆ ಹೀಗಾಯ್ತು. ಬೆಳಗ್ಗೆಬೆಳಗ್ಗೆ, ಒಂದು ಮುಖ್ಯವಾದ ಮೀಟಿಂಗ್ ಇತ್ತು. ಹಂಗಾಗಿ, ಗಡಿಬಿಡಿಯಲ್ಲಿ ಉಪ್ಪಿಟ್ಟು ಮಾಡಿಟ್ಟು, ಮನೆಯವರೂ, ನಾನೂ ತಿಂದು ಲ್ಯಾಪ್‌ಟಾಪ್ ಹಿಡಿದು ಕುಳಿತೆವು. ಅವರು ರೂಮ್‌ನಲ್ಲಿ ಕುಳಿತರೆ, ನಾನು ಲಿವಿಂಗ್ ರೂಮ್‌ನಲ್ಲಿ ಕುಳಿತೆ. ಸ್ವಲ್ಪ ಹೊತ್ತಾದ ಮೇಲೆ, ಮಕ್ಕಳು ಎದ್ದು ಅಡುಗೆ ಮನೆಗೆ ಹೋದವು. ಪಾತ್ರೆಯಲ್ಲಿ ಉಪ್ಪಿಟ್ಟು ನೋಡಿ ಸಿಡಿಮಿಡಿ ಅನ್ನುತ್ತಾ, ಅದನ್ನೇ ತಟ್ಟೆಗೆ ಹಾಕಿಕೊಂಡು ಬಂದು ಟಿವಿ ಮುಂದೆ ಕುಳಿತರು. ಸಣ್ಣ ಮಗ ಇದ್ದಕ್ಕಿದ್ದಂತೆ, “ಅಮ್ಮಾ, ಉಪ್ಪಿಟ್ಟು ಚೂರೂ ಚೆನ್ನಾಗಿಲ್ಲ. ಕೆಟ್ಟದಾಗಿದೆ.