Advertisement

ಎಂಎಲ್‌ಎಗಳಿಗೂ ಇರಲಿ ನೋ ವರ್ಕ್‌; ನೋ ಪೇ

09:53 AM Sep 16, 2017 | Team Udayavani |

ಚೆನ್ನೈ: ಕೆಲಸ ಇಲ್ಲದಿದ್ದರೆ ಸಂಬಳ ಇಲ್ಲ (ನೋ ವರ್ಕ್‌; ನೋ ಪೇ) ಎಂಬ ನಿಯಮ ಸರಕಾರಿ ಉದ್ಯೋಗಿಗಳಿಗೆ ಮಾತ್ರ ಯಾಕೆ? ಶಾಸಕರಿಗೂ ಅದನ್ನು ಅನ್ವಯ ಮಾಡಬೇಕು. ಹೀಗೆಂದು ಹೇಳಿದ್ದಾರೆ ಬಹುಭಾಷಾ ನಟ ಕಮಲ್‌ ಹಾಸನ್‌. ಮಾಸಾಂತ್ಯಕ್ಕೆ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡಿ, ಅಲ್ಲಿಯೂ ಒಂದು ಕೈ ನೋಡಲು ಮುಂದಾಗಿರುವ ನಟನ ಖಡಕ್‌ ಮಾತುಗಳು. ಆಳುವ ಎಐಎಡಿಎಂಕೆಯ 19 ಮಂದಿ ಶಾಸಕರು ಕರ್ನಾಟಕದ ಮಡಿಕೇರಿ ಮತ್ತು ಚೆನ್ನೈ ಸಮೀಪದ ರೆಸಾರ್ಟ್‌ನಲ್ಲಿ ತಂಗಿರುವುದಕ್ಕೆ ಆಕ್ಷೇಪಿಸಿ ಶುಕ್ರವಾರ ಟ್ವೀಟ್‌ ಮಾಡಿದ್ದಾರೆ. ಕುದುರೆ ವ್ಯಾಪಾರಕ್ಕಾಗಿ ರೆಸಾರ್ಟ್‌ಗಳಲ್ಲಿ ತಂಗಿರುವ ಶಾಸಕರಿಗೆ ನೋ ವರ್ಕ್‌; ನೋ ಪೇ ನಿಯಮ ಏಕೆ ಅನ್ವಯವಾಗುತ್ತಿಲ್ಲವೆಂದು ಬರೆದುಕೊಂಡಿದ್ದಾರೆ. 

Advertisement

ತಮಿಳುನಾಡಿನಲ್ಲಿ ಶಾಲಾ ಶಿಕ್ಷಕರು ತಿಂಗಳ ಸಂಬಳ ರೂ. 33 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿ ಮುಷ್ಕರ ಹೂಡಿದ್ದರು. ಆದರೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡ ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದರು. ಅದೇ ರೀತಿ ಹೈಕೋರ್ಟ್‌ ಕೂಡ ತಮ್ಮ ಕರ್ತವ್ಯ ಮಾಡದೇ ಇರುವ ಶಾಸಕರನ್ನು ತರಾಟೆಗೆ ತೆಗೆದು ಕೊಳ್ಳ ಬೇಕು ಎಂದು ಮತ್ತೂಂದು ಟ್ವೀಟ್‌ನಲ್ಲಿ ಬರೆದು ಕೊಂಡಿ ದ್ದಾರೆ. ಈಮೂಲಕ ಹೊಸ ಪಕ್ಷದಲ್ಲಿ ಜನ ಪ್ರತಿನಿಧಿಗಳ ಕರ್ತವ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದು ಸೂಚನೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next