Advertisement

ಜಗವನ್ನಾಳ್ಳೋ ಮಾತಿಗೆ‌ ಮೌನದ ಹಂಗಿಲ್ಲ…

02:02 AM Feb 17, 2020 | Sriram |

ಮಾತು ಎಂಬ ಎರಡು ಪದ ಒಂದು ವ್ಯಕ್ತಿಯನ್ನ ಅಥವಾ ಪ್ರತಿಯೊಂದು ವಿಚಾರವನ್ನು ಯಾವ ರೀತಿ ಬಣ್ಣಿಸಲು ಸಾಧ್ಯ. ಒಬ್ಬ ವ್ಯಕ್ತಿಯನ್ನ ಬಣ್ಣಿಸಲು ಮಾತು ಮುಖ್ಯವಾದರೆ ಅದೇ ಒಂದು ವ್ಯಕ್ತಿಯನ್ನ ಕೀಳಾಗಿ ತೆಗಳಲೂ ಆ ಮಾತೇ ಪ್ರಮುಖವಾಗಿರುತ್ತದೆ. ಮೌನದ ಮಹಿಮೆ ಹೇಳ್ಳೋದಕ್ಕೂ ಮತ್ತೆ ನಾವು ಮಾತಿನ ಮೊರೆಯನ್ನೇ ಹೋಗಬೇಕು. ಇಂದು ಈ ಜಗವನ್ನು ಆಳುತ್ತಿರುವುದು ಮಾತೇ ಹೊರತು ಮೌನವಲ್ಲ.

Advertisement

ಒಳ್ಳೊಳ್ಳೆ ಮಾತುಗಾರರು ಇಂದು ತಮ್ಮ ಮಾತಿನಿಂದಲೇ ನಿಯಂತ್ರಣ ಹೊಂದುವುದು ಅಗತ್ಯವಾಗಿದೆ. ರಾಜಕೀಯ ನಾಯಕರ ಭವಿಷ್ಯ ಮತ್ತು ಬಂಡವಾಳ ಎರಡೂ ಕೂಡ ಮಾತೇ ಆಗಿದೆ. ಎಂಬುದನ್ನು ನಾವೆಲ್ಲರೂ ಒಪ್ಪುತ್ತೇವೆ. ಹಾಗೆಯೇ ಶಿಕ್ಷಕ ವೃತ್ತಿಯ ಮೂಲಾಂಶವೇ ಮಾತುಗಾರಿಕೆ. ಆದರೆ ಅವರಿಗೆ ನಿರ್ದಿಷ್ಟ ವಿಷಯ ಮತ್ತು ಸಮಯಗಳ ಆವರಣವಿದ್ದು ಅದನ್ನು ಅವರು ಹಿಂಬಾಲಿಸುತ್ತಾರೆ. ಹಾಗಾಗಿ ಜಗತ್ತನ್ನು ಎರಡು ಭಾಗಗಳಾಗಿ ವಿಂಗಡಿಸಬಹುದಾದರೆ ಮಾತು ಬಲ್ಲವರು ಮತ್ತು ಮಾತು ಒಲ್ಲದವರು ಎಂದು ವರ್ಗೀಕರಿಸಬಹುದೇನೋ ಎನಿಸುತ್ತದೆ.

ಸಂಸ್ಕೃತದಲ್ಲಿ ಒಂದು ಮಾತಿದೆ. “ಜಿಹ್ವಾಗ್ರೇ ವಸತೇ ಲಕ್ಷ್ಮೀ; ಜಿಹ್ವಾಗ್ರೇ ವಸತೇ ಮಿತ್ರ ಬಂಧುವಾಃ; ಬಂಧನಂ ಕಾರಣಂ ಜಿಹ್ವಾಗ್ರೇ; ಜಿಹ್ವಾಗ್ರೇ ಮರಣಂ ಪ್ರಾಪೆ¤à’ ಅಂತ. ಜಿಹೆÌ ಎಂದರೆ ನಾಲಿಗೆ. ಜಿಹ್ವಾಗ್ರ ಎಂದರೆ ನಾಲಿಗೆಯ ತುದಿ. ನಾಲಿಗೆಯ ತುದಿಯೆಂದರೆ ಅದು ಮಾತಿನ ಉಗಮಸ್ಥಾನ. ಈ ನಾಲಿಗೆಯ ತುದಿಯೆಂಬ ಮಾತಿನ ಉಗಮಸ್ಥಾನದಲ್ಲಿ ಲಕ್ಷ್ಮೀ ವಾಸವಾಗಿದ್ದಾಳೆ. ಅಂದರೆ ಬಹುಪಾಲು ಲಕ್ಷ್ಮೀಪುತ್ರರ ಮೇಲೆ ಮಾತಿನ ಮಾತೆಯ ಕೃಪೆಯಿದೆ ಅಂತಾಯ್ತು. ಯಾವನಿಗೆ ಅಧಿಕ ಜನ ಬಂಧು ಮಿತ್ರರು ಇರುವರೋ ಅವನ ಸ್ನೇಹಶೀಲ ನಡವಳಿಕೆಗೆ ಮೂಲ ಕಾರಣ ಅವನ ಮಾತುಗಾರಿಕೆಯೇ. ಜತೆಗೆ ಮಾತಾಡಿ ಕಷ್ಟ ತಂದುಕೊಂಡ ಹಲವರನ್ನು ನಾವು ಕಂಡಿದ್ದೇವೆ.

ಕಹಿಯಾದರೂ ಸತ್ಯವನ್ನೇ ಮಾತನಾಡಿದ್ದರ ಫ‌ಲವಾಗಿ ಹರಿಶ್ಚಂದ್ರ ಸಾವಿರ ಕಷ್ಟ ಕೋಟಲೆಗಳನ್ನು ಅನುಭವಿಸಿದ್ದನ್ನು ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದಲ್ಲಿ ಸೊಗಸಾಗಿ ನಿರೂಪಿಸಿದ್ದಾನೆ. ಹೀಗೆ ಮಾತು ಬಂಗಾರಕ್ಕಿಂತಲೂ ಮಿಗಿಲು. ಆದರ ಶ್ರೇಷ್ಠತೆ, ಘನತೆಯನ್ನು ಕಾಪಾಡುವುದೇ ಬಲು ಸಾಧನೆಯ ಸಂಗತಿ.

- ಗಣೇಶ್‌ ಪವಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next