Advertisement

ಇಲ್ಲ ನಾವು 10 ಸಾವಿರ ಉದ್ಯೋಗ ಕಡಿತ ಮಾಡಿಲ್ಲ: ಪಾರ್ಲೆ

10:12 AM Aug 27, 2019 | sudhir |

ಮುಂಬಯಿ: ಆರ್ಥಿಕ ಹಿಂಜರಿತಕ್ಕೀಡಾಗಿ ನಾವು 10 ಸಾವಿರ ಉದ್ಯೋಗಿಗಳನ್ನು ಕೈಬಿಟ್ಟಿದ್ದೇವೆ ಎನ್ನುವುದು ಸುಳ್ಳು, ಹಾಗೆ ಮಾಡಿಲ್ಲ ಎಂದು ಪಾರ್ಲೆ ಬಿಸ್ಕೆಟ್‌ ಕಂಪೆನಿ ಸ್ಪಷ್ಟೀಕರಣ ನೀಡಿದೆ. ಅಲ್ಲದೆ ಈ ಸುದ್ದಿಯನ್ನು ಮಾಧ್ಯಮಗಳೇ ಉತ್ಪ್ರೇಕ್ಷೆ ಮಾಡಿ ಬರೆದಿವೆ ಎಂದೂ ಅದು ಆರೋಪಿಸಿದೆ. ಇದರಿಂದ 10 ಸಾವಿರ ಉದ್ಯೋಗ ಕಡಿತಗೊಂಡಿದೆ ಎಂದು ಕಳೆದೊಂದು ವಾರದಿಂದ ಜೋರಾಗಿ ಹರಿದಾಡುತ್ತಿದ್ದ ಸುದ್ದಿ ಠುಸ್‌ ಆಗಿದೆ!

Advertisement

ನಾವು ಮೊದಲಿನಷ್ಟೇ ಉತ್ಪಾದನೆ ಮಾಡುತ್ತಿದ್ದರೆ ಇಷ್ಟೊಂದು ಪ್ರಮಾಣದ ಉದ್ಯೋಗಿಗಳನ್ನು ನಿರ್ವಹಿಸಲು ಸಮಸ್ಯೆಯಾಗಲಿದೆ ಎಂಬ ಆತಂಕ ನಮ್ಮದು. ಅಲ್ಲದೇ ಈಗ ಬಿಸ್ಕೆಟ್‌ಗಳಿಗೆ ವಿಧಿಸುತ್ತಿರುವ ಶೇ.18ರಷ್ಟು ತೆರಿಗೆಯಿಂದ ಸಮಸ್ಯೆಯಾಗುತ್ತಿದೆ. ಬಿಸ್ಕೆಟೆY ವಿಧಿಸುವ ತೆರಿಗೆಯನ್ನು ಶೇ.5ಕ್ಕೆ ಇಳಿಸಬೇಕು ಎಂದು ಪಾರ್ಲೆಯ ವಿಭಾಗೀಯ ಮುಖ್ಯಸ್ಥ ಮಾಯಾಂಕ್‌ ಶಾ ಹೇಳಿದ್ದಾರೆ. ಈ ಮೊದಲು ರಸ್ಕ್ಗೆ ತೆರಿಗೆ ವಿನಾಯ್ತಿ ಇತ್ತು. ಈಗ ಶೇ.5ರಷ್ಟು ತೆರಿಗೆ ಇದೆ.

ಸರಿಯಾದ ಪ್ರಮಾಣದ ತೆರಿಗೆ ವಿಧಿಸಲಿ. ಹೆಚ್ಚು ಪ್ರಮಾಣದ ತೆರಿಗೆಯಿಂದ ಉತ್ಪಾದನೆ ಮೇಲೆ ಹೊಡೆತವಾಗುತ್ತದೆ. ಎಂದು ಹೇಳಿದರು.

ಪಾರ್ಲೆ ಏಷ್ಯಾದ ಅತಿ ದೊಡ್ಡ ಬಿಸ್ಕೆಟ್‌ ಉತ್ಪಾದಕ ಕಂಪೆನಿಯಾಗಿದ್ದು, ಕ್ಯಾಮರೂನ್‌, ನೈಜೀರಿಯಾ, ಘಾನಾ, ಇಥೋಪಿಯಾ, ಕೀನ್ಯಾ, ಐವರಿಕೋಸ್ಟ್‌, ನೇಪಾಲ, ಮೆಕ್ಸಿಕೋ ದೇಶಗಳಿಗೂ ರಫ್ತು ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next